Select Your Language

Notifications

webdunia
webdunia
webdunia
webdunia

ಮಂಗಳಯಾನ ನೌಕೆ ಭೂಮಿಯ ಕಕ್ಷೆಯನ್ನು ದಾಟಿ ಮಂಗಳನತ್ತ ಪ್ರಯಾಣ

ಮಂಗಳಯಾನ ನೌಕೆ ಭೂಮಿಯ ಕಕ್ಷೆಯನ್ನು ದಾಟಿ ಮಂಗಳನತ್ತ ಪ್ರಯಾಣ
ಬೆಂಗಳೂರು , ಶನಿವಾರ, 30 ನವೆಂಬರ್ 2013 (18:26 IST)
PR
PR
ಶನಿವಾರ ರಾತ್ರಿ 12.49 ನಿಮಿಷಕ್ಕೆ ಮಂಗಳಯಾನ ನೌಕೆ ಭೂಮಿಯ ಕಕ್ಷೆಯನ್ನು ದಾಟಲಿದ್ದು, ಅತ್ಯಂತ ಮಹತ್ವದ ಘಟ್ಟವನ್ನು ತಲುಪಲಿದೆ. ಭೂಮಿಯ ಗುರುತ್ವ ಶಕ್ತಿಯಿಂದ ಹೊರಗೆ ಚಿಮ್ಮಿ, 300 ದಿನಗಳ ಕಾಲ ಮಂಗಳನತ್ತ ಪ್ರಯಾಣ ಬೆಳೆಸಲಿದೆ. 2014ಸೆಪ್ಟೆಂಬರ್ 24ರಂದು ಮಂಗಳನ ಕಕ್ಷೆಗೆ ಸೇರಲಿದೆ. ನಾಳೆ ಮಂಗಳಯಾನ ತಂಡಕ್ಕೆ ನಿಜವಾಗಲೂ ಸತ್ವಪರೀಕ್ಷೆಯಾಗಲಿದೆ. ಭೂಮಿಯ ಕಕ್ಷೆಯನ್ನು ದಾಟುವ ಪ್ರಕ್ರಿಯೆ 24 ನಿಮಿಷಗಳದ್ದಾಗಿದೆ. ಭಾರತದ ಮಂಗಳ ಗ್ರಹದ ನೌಕೆ ಇಂದು ಮಧ್ಯರಾತ್ರಿ ನಂತರ 12.49 ಗಂಟೆಗೆ ಭಾರತಕ್ಕೆ ವಿದಾಯ ಹೇಳಿ ಕೆಂಪು ಗ್ರಹದತ್ತ ತನ್ನ ಸುದೀರ್ಘ ಪ್ರಯಾಣವನ್ನು ಆರಂಭಿಸಲಿದೆ.

ರಾತ್ರಿ 12.49ಗಂಟೆಗೆ 1300 ಕೆಜಿ ಗಗನನೌಕೆ 268 ಕಿಮೀ ಭೂಮಿಯಿಂದ ಹೊರಗೆ ಚಿಮ್ಮಿ ಮಂಗಳನೆಡೆಗೆ ಯೋಜಿತ ಪಥದಲ್ಲಿ ಸಾಗಲಿದೆ. ಹೀಗೆ ಹೊರಗೆ ಚಿಮ್ಮಲು 22. 43 ನಿಮಿಷಗಳ ಅವಕಾಶವಿದ್ದು, ನೌಕೆಯಲ್ಲಿರುವ ಇಂಜಿನ್‌ ದಹನದ ಮೂಲಕ ಈ ಕ್ರಿಯೆ ನಡೆಯುತ್ತದೆ. ಎಂಜಿನ್ ದಹನ ಕ್ರಿಯೆಯಿಂದ ಗಗನನೌಕೆಯ ವೇಗ ಹೆಚ್ಚಿ ಭೂಮಿಯ ಗುರುತ್ವ ಶಕ್ತಿಯಿಂದ ತಪ್ಪಿಸಿಕೊಂಡು ಹೋಗುತ್ತದೆ. ನಾವು ಇದನ್ನು ಸಾಧಿಸುವ ವಿಶ್ವಾಸ ಹೊಂದಿದ್ದೇವೆ ಎಂದು ಮಂಗಳ ಯೋಜನೆಯ ಯೋಜನಾ ನಿರ್ದೇಶಕ ಎಸ್. ಅರುಣನ್ ಹೇಳಿದ್ದಾರೆ. ಇಂಜಿನ್ ದಹನಉಪಗ್ರಹಕ್ಕೆ ಅಂತಿಮ ವೇಗವನ್ನು ನೀಡುವ ಗುರಿ ಹೊಂದಿರುತ್ತದೆ( ಪ್ರತಿ ಸೆಕೆಂಡಿಗೆ 9.8 ಕಿಮೀ)

Share this Story:

Follow Webdunia kannada