Webdunia - Bharat's app for daily news and videos

Install App

ಬ್ಲೂ ಫಿಲ್ಮ್ ವೀಕ್ಷಣೆ; ಸದನ ಸಮಿತಿಯಿಂದ ಮೂವರಿಗೂ ಕ್ಲೀನ್‌ಚಿಟ್!

Webdunia
ಶುಕ್ರವಾರ, 30 ಮಾರ್ಚ್ 2012 (19:16 IST)
PR
ವಿಧಾನಸಭೆಯಲ್ಲಿ ಬ್ಲೂ ಫಿಲ್ಮ್ ವೀಕ್ಷಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷೆಯಂತೆ ಮಾಜಿ ಸಚಿವರಾದ ಕೃಷ್ಣ ಪಾಲೇಮಾರ್, ಸಿ.ಸಿ.ಪಾಟೀಲ್ ಹಾಗೂ ಲಕ್ಷ್ಮಣ ಸವದಿಗೆ ಸದನ ಸಮಿತಿ ಕ್ಲೀನ್ ಚಿಟ್ ನೀಡಿದೆ.

ಶುಕ್ರವಾರ ವಿಧಾನಸಭೆಯಲ್ಲಿ ಸದನ ಸಮಿತಿ ಅಧ್ಯಕ್ಷ ಶ್ರೀಶೈಲಪ್ಪ ಬಿದರೂರು ಅವರು ಅಧಿವೇಶನದಲ್ಲಿ ಬ್ಲೂ ಫಿಲ್ಮ್ ವೀಕ್ಷಣೆಗೆ ಸಂಬಂಧಿಸಿದ ವರದಿಯನ್ನು ಮಂಡಿಸಿದರು.

ಸದನದಲ್ಲಿ ರತಿಕ್ರೀಡೆ ವೀಕ್ಷಿಸಿದ ಪ್ರಕರಣದಲ್ಲಿ ಕೃಷ್ಣ ಪಾಲೇಮಾರ್ ಮತ್ತು ಸಿ.ಸಿ.ಪಾಟೀಲ್ ವಿರುದ್ಧ ಯಾವುದೇ ಸಾಕ್ಷ್ಯಾಧಾರವಿಲ್ಲ. ಹಾಗಾಗಿ ಅವರ ವಿರುದ್ಧದ ಆರೋಪದಲ್ಲಿ ಹುರುಳಿಲ್ಲ ಎಂದು ಅಭಿಪ್ರಾಯಪಟ್ಟಿರುವ ಸದನ ಸಮಿತಿ, ಶ್ರೀಯುತ ಲಕ್ಷ್ಮಣ ಸವದಿಯವರು ಉಪಯೋಗಿಸುತ್ತಿದ್ದ ಮೊಬೈಲ್ ಅವರದ್ದಲ್ಲ. ಪಾಲೇಮಾರ್ ನೀಡಿದ್ದ ಪೆನ್ ಡ್ರೈವ್‌ಗೂ ಸವದಿ ಮೊಬೈಲ್‌ನಲ್ಲಿದ್ದ ದೃಶ್ಯಾವಳಿಗೂ ಸ್ವಲ್ಪ ಹೋಲಿಕೆ ಇರುವುದು ಕಂಡು ಬಂದಿದೆ.

ಅಷ್ಟೇ ಅಲ್ಲ ಲಕ್ಷ್ಮಣ ಸವದಿಯವರು ಆ ಸಂದರ್ಭದಲ್ಲಿ ಸರ್ಕಾರದ ಸುತ್ತೋಲೆ ಓದುತ್ತಿದ್ದರೇ ವಿನಃ, ಬ್ಲೂ ಫಿಲ್ಮ್ ವೀಕ್ಷಿಸುತ್ತಿರಲಿಲ್ಲ ಎಂಬುದು ಸಮಿತಿಯ ಗಮನಕ್ಕೆ ಬಂದಿದೆ. ಆದರೆ ಕಲಾಪದ ವೇಳೆಯಲ್ಲಿ ಮೊಬೈಲ್ ಬಳಸಿರುವ ಬಗ್ಗೆ ಅವರು ಈಗಾಗಲೇ ಕ್ಷಮೆಯಾಚಿಸಿದ್ದಾರೆ. ಹಾಗಾಗಿ ಮೊಬೈಲ್ ಬಳಕೆಗೆ ಸಂಬಂಧಪಟ್ಟಂತೆ ಲಕ್ಷ್ಮಣ ಸವದಿಯವರಿಗೆ ಸದನದಲ್ಲಿ ಎಚ್ಚರಿಕೆಯನ್ನು ಕೊಡಬೇಕು ಎಂಬುದಾಗಿ ವರದಿಯಲ್ಲಿ ಶಿಫಾರಸು ಮಾಡಿದೆ.

ಬ್ಲೂ ಫಿಲ್ಮ್ ವೀಕ್ಷಣೆ ಪ್ರಕರಣದ ಕುರಿತಂತೆ ಶ್ರೀಶೈಲಪ್ಪ ಬಿದರೂರು ನೇತೃತ್ವದ ಸಮಿತಿ ಸುಮಾರು 28 ಪುಟಗಳ ವರದಿಯನ್ನು ವಿಧಾನಮಂಡಲದಲ್ಲಿ ಮಂಡಿಸಿದೆ. ವರದಿ ಬಗ್ಗೆ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಚರ್ಚೆಗೆ ಅವಕಾಶ ನೀಡಬೇಕು ಎಂದಾಗ, ಇಂದು ಅಧಿವೇಶನದ ಕೊನೆಯ ದಿನ, ಹಾಗಾಗಿ ಮುಂದಿನ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ಕಲ್ಪಿಸುವುದಾಗಿ ಸಚಿವ ಸುರೇಶ್ ಕುಮಾರ್ ಸಮಜಾಯಿಷಿ ನೀಡಿದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪದ ನಡುವೆಯೂ ಸ್ಪೀಕರ್ ಕೆಜಿ ಬೋಪಯ್ಯ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಪ್ರಕಟಿಸಿದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ