Webdunia - Bharat's app for daily news and videos

Install App

ಬಿಬಿಎಂಪಿಯ ಮತ್ತೊಂದು ಹಗರಣ: ಕೋಟ್ಯಂತರ ರೂ. ಅವ್ಯವಹಾರ ಶಂಕೆ

Webdunia
ಸೋಮವಾರ, 13 ಜನವರಿ 2014 (19:32 IST)
PR
PR
ಬೆಂಗಳೂರು ಮಹಾನಗರ ಪಾಲಿಕೆ ದಿವಾಳಿ ಅಂಚಿನಲ್ಲಿ ಬಂದುನಿಂತಿದೆ. ದಿವಾಳಿ ಸ್ಥಿತಿಯಿಂದ ಪಾರಾಗಲು ತನ್ನ ವಶದಲ್ಲಿರುವ ಸ್ಥಿರಾಸ್ತಿಗಳನ್ನು ಅಡವಿಟ್ಟು ಹಣ ಪಡೆಯಲು ಬಿಬಿಎಂಪಿ ಹೊರಟಿದೆ. ಬಿಬಿಎಂಪಿ ಇಂತಹ ದಿವಾಳಿ ಸ್ಥಿತಿಗೆ ಸಿಲುಕಲು ಕಾರಣವೇನು? ಅನೇಕ ವರ್ಷಗಳಿಂದ ಹಗರಣಗಳ ರಾಶಿಯಲ್ಲಿ ಮುಳುಗಿದ್ದೇ ಬಿಬಿಎಂಪಿ ಇಂತಹ ಸ್ಥಿತಿಗೆ ಬರಲು ಕಾರಣವೆನ್ನಲಾಗಿದೆ. ಈಗ ಬಿಬಿಎಂಪಿಯ ಮೆಗಾ ಹಗರಣವೊಂದು ಬಯಲಾಗಿದ್ದು, ಕಾಂಗ್ರೆಸ್ , ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಕೋಟ್ಯಂತರ ರೂ.ಅವ್ಯವಹಾರ ನಡೆದಿದೆಯೆಂಬ ಆರೋಪ ಕೇಳಿಬಂದಿದೆ. ಯಡಿಯೂರು ಕಾರ್ಪೊರೇಟರ್ ಎನ್.ಆರ್. ರಮೇಶ್ ಈ ಕುರಿತು ಮಾಹಿತಿ ಹೊರಹಾಕಿದ್ದಾರೆ.

ಕಾಂಗ್ರೆಸ್, ಜೆಡಿಎಸ್ ಅಧಿಕಾರದ ಅವಧಿಯಲ್ಲಿ ಅವ್ಯವಹಾರ ನಡೆದಿದೆಯೆಂದು ಅವರು ಆರೋಪಿಸಿದ್ದು ಈ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಿದರು. ಪಾಲಿಕೆಯ ಆರ್ಥಿಕ ಸ್ಥಿತಿ ಈ ಮಟ್ಟಕ್ಕೆ ಹದಗೆಡುವುದಕ್ಕೆ ಇದೇ ಕಾರಣವೆಂದು ಹೇಳಲಾಗಿದೆ.

PR
PR
2002 ರಂದು ದಿವ್ಯಶ್ರೀ ಚೇಂಬರ್ಸ್ ಎಂಬ ಸಂಸ್ಥೆಗೆ ಪಾಲಿಕೆ ಜಮೀನು ಮಾರಾಟ ಮಾಡಿತು. ಆಯುಕ್ತರ ಸಹಿ ಇಲ್ಲದೇ ಜಮೀನು ಮಾರಾಟ ಮಾಡಲಾಗಿತ್ತು. 50-60 ಕೋಟಿ ಬೆಲೆಬಾಳುವ 2.10 ಎಕರೆ ಜಮೀನನ್ನು ಕೇವಲ 48 ಲಕ್ಷ ರೂ.ಗಳಿಗೆ ಮಾರಾಟ ಮಾಡಲಾಗಿತ್ತು. ಶಾಂತಿನಗರದಲ್ಲಿ 2.10 ಎಕರೆ ಜಮೀನನ್ನು ಶಾಮರಾಜು ಅವರಿಗೆ ಮಾರಲು 1995ರಲ್ಲಿ ನಿರ್ಣಯ ಮಾಡಲಾಗಿತ್ತು. ಆದರೆ ಇಂಡಸ್ ಎಂಟರ್‌ಪ್ರೀನಿಯರ್ಸ್‌ಗೆ ಮಾರಾಟ ಮಾಡಲಾಯಿತು. 2.10 ಎಕರೆ ಬೆಲೆಬಾಳುವ ಜಮೀನನ್ನು ಕೇವಲ 48 ಲಕ್ಷಕ್ಕೆ ಮಾರಾಟ ಮಾಡಲಾಯಿತು. ಇದರಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ರಮೇಶ್ ಆರೋಪಿಸಿದರು.
ನಗರಪಾಲಿಕೆಗೆ 1952ರಲ್ಲಿ 1534 ಸ್ಥಿರಾಸ್ತಿಯನ್ನು ಹೊಂದಿತ್ತು.

ಆದರೆ ಈಗ ಸ್ಥಿರಾಸ್ತಿ 598ಕ್ಕೆ ಕುಸಿದಿದ್ದು, ಅನೇಕ ಆಸ್ತಿಗಳನ್ನು ಪಾಲಿಕೆ ಮಾರಾಟ ಮಾಡಿದೆ. ಸ್ಥಿರಾಸ್ತಿ ಮಾರಾಟ ಮಾಡಿದ್ದರಿಂದಾಗಿ ಪಾಲಿಕೆ ಆದಾಯವೂ ಕಡಿಮೆಯಾಗಿದ್ದು, ಪಾಲಿಕೆ ವಿವಿಧ ಬ್ಯಾಂಕುಗಳಿಂದ ಪಡೆದ ಸಾಲದ ವಿವರ ಕೆಳಗಿನಂತಿದೆ.2001-02 63. 29ಕೋಟಿ, 2002-03ರಲ್ಲಿ 193-57 ಕೋಟಿ ಸಾಲ, 2003-04ರಲ್ಲಿ 141.14 ಕೋಟಿ.2004-05ರಲ್ಲಿ 201.10 ಕೋಟಿ. 2005-06ರಲ್ಲಿ 262.19 ಕೋಟಿ 2006-07ರಲ್ಲಿ 564.60 ಕೋಟಿ ಇವೆಲ್ಲವೂ ವಿಜಯಾ ಬ್ಯಾಂಕ್, ಸಿಂಡಿಕೇಟ್‌ ಬ್ಯಾಂಕ್‌ನಿಂದ ಹೆಚ್ಚಾಗಿ ಪಡೆಯಲಾಗಿದೆ. ಈ ಸಾಲಗಳನ್ನು ತೀರಿಸಲಾಗದೇ ಪಾಲಿಕೆ ಮತ್ತೆ ಮತ್ತೆ ಸಾಲಗಳನ್ನು ಮಾಡಿ ಹಳೆಯ ಸಾಲವನ್ನು ತೀರಿಸಬೇಕಾದ ದುಸ್ಥಿತಿಗೆ ಸಿಕ್ಕಿಬಿದ್ದಿದ್ದು, ದಿವಾಳಿಯ ಅಂಚಿನಲ್ಲಿ ಬಂದುನಿಂತಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments