Select Your Language

Notifications

webdunia
webdunia
webdunia
webdunia

ಬಿಜೆಪಿ ಮುಖಂಡರಿಗೆ ಮಠಗಳ ಹುಚ್ಚು ಹಿಡಿದಿದೆ: ಉಗ್ರಪ್ಪ

ಬಿಜೆಪಿ ಮುಖಂಡರಿಗೆ ಮಠಗಳ ಹುಚ್ಚು ಹಿಡಿದಿದೆ: ಉಗ್ರಪ್ಪ
ಕೋಲಾರ , ಬುಧವಾರ, 30 ಸೆಪ್ಟಂಬರ್ 2009 (15:57 IST)
NRB
ನರೇಂದ್ರ ಮೋದಿ ಬಿಜೆಪಿ ಮುಖಂಡರಿಗೆ ನೀತಿ ಪಾಠ ಮಾಡಿದ್ದರೂ, ಅವರ ಆ ಪಾಠದಲ್ಲಿ ರಾಜ್ಯವನ್ನು ಉದ್ದಾರ ಮಾಡುವ ಯಾವುದೇ ರೀತಿಯ ವಿಷಯವನ್ನು ಚರ್ಚಿಸಿರಲಿಕ್ಕಿಲ್ಲ ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ವಿ.ಎಸ್ ಉಗ್ರಪ್ಪ ಲೇವಡಿ ಮಾಡಿದ್ದಾರೆ.

ಮುಖ್ಯಮಂತ್ರಿ ಸಾಮಾನ್ಯರೇನು ಅಲ್ಲ, ಅವರೊಬ್ಬ ಸುಳ್ಳಿನ ಕಂತೆಗಳನ್ನೇ ಸೃಷ್ಟಿಸಬಲ್ಲ ವ್ಯಕ್ತಿ. ರಾಜ್ಯದ ರೈತರು ವಿದ್ಯುತ್ ಕಳ್ಳತನವನ್ನು ಮಾಡದಂತೆ ಪಂಪ್‌ಸೆಟ್‌ಗಳಿಗೆ ಮೀಟರ್‌ಗಳನ್ನು ಅಳವಡಿಸಲಾಗುವುದು ಎಂದು ಹೇಳಿ ರಾಜ್ಯದ ರೈತರನ್ನು ಕಳ್ಳರ ಪಟ್ಟ ಕಟ್ಟಿ ರೈತ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

ರೆಸಾರ್ಟ್ ಮೋಜು ಬಿಟ್ಟು ಬಿಜೆಪಿ ಮುಖಂಡರಿಗೆ ಈಗ ಮಠಗಳ ಹುಚ್ಚು ಪ್ರಾರಂಭವಾಗಿದೆ. ಅಲ್ಲಿ ಗುಜರಾತ್ ನರಮೇಧ ಹೇಗೆ ಮಾಡಬಹುದು ,ಅಯೋಧ್ಯೆ, ಬಾಬರಿ ಮಸೀದಿ ಹೇಗೆ ಧ್ವಂಸ ಮಾಡಬಹುದು ಎನ್ನುವ ಪಾಠ ಮಾಡಬಹುದು ಎಂದು ಟೀಕಿಸಿದರು.

ಕೋಲಾರದಲ್ಲಿ ಆಯೋಜಿದ್ದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸುತ್ತೂರು ಮಠದಲ್ಲಿ ಸರ್ಕಾರದ ಮೌಲ್ಯಮಾಪನವನ್ನು ಗುಜರಾತ್ ಮುಖ್ಯಮಂತ್ರಿ ಮೋದಿ ಮಾಡುವುದರಿಂದಲೇ ರಾಜ್ಯದ ಸ್ಥಿತಿ ಎಲ್ಲಿಗೆ ತಲುಪಿದೆ ಎಂದು ತಿಳಿಯಬಹುದು ಎಂದರು. ಒಟ್ಟಿನಲ್ಲಿ ಮುಖ್ಯಮಂತ್ರಿಗಳು ರಾಜ್ಯದ ಉನ್ನತಿಯನ್ನು ಬಿಟ್ಟು ಅವನತಿಯ ಬಗ್ಗೆ ಚಿಂತಿಸುತ್ತಿದ್ದು, ರೆಸಾರ್ಟ್ ,ಮಠಗಳಿಗೆ ತಿರುಗುತ್ತಿದ್ದಾರೆ ಎಂದರು.

Share this Story:

Follow Webdunia kannada