Select Your Language

Notifications

webdunia
webdunia
webdunia
webdunia

ಪಕ್ಷ ತೊರೆಯುವವರಿಗೆ ಸಚಿವ ಸ್ಥಾನದ ಆಮಿಷ: ಬಿಜೆಪಿ ತಂತ್ರ

ಪಕ್ಷ ತೊರೆಯುವವರಿಗೆ ಸಚಿವ ಸ್ಥಾನದ ಆಮಿಷ: ಬಿಜೆಪಿ ತಂತ್ರ
ಬೆಂಗಳೂರು , ಗುರುವಾರ, 28 ಫೆಬ್ರವರಿ 2013 (09:19 IST)
PR
PR
ರಾಜ್ಯ ಸರ್ಕಾರದ ಅವಧಿ ಕೇವಲ ಎರಡು ತಿಂಗಳಿದ್ದರೂ ಸಹ ಬಿಜೆಪಿ ರಾಜ್ಯಾಧ್ಯಕ್ಷ, ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಶೀಘ್ರದಲ್ಲೇ ಸಚಿವ ಸಂಪುಟವನ್ನು ವಿಸ್ತರಣೆ ಮಾಡುವುದಾಗಿ ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದು, ಈ ಸಂದರ್ಭದಲ್ಲಿ ಪಕ್ಷ ನಿಷ್ಟರಿಗೆ ಆವಕಾಶ ಮಾಡಿಕೊಡಲಾಗುವುದು ಎಂದು ಹೇಳಿದ್ದಾರಲ್ಲದೆ, ಮುಂದಿನ ವಿಧಾನಸಭಾ ಚುನಾವಣೆಯನ್ನು ಶೆಟ್ಟರ್ ನೇತೃತ್ವದಲ್ಲೇ ಎದುರಿಸುವುದಾಗಿ ತಿಳಿಸಿದ್ದಾರೆ.

ಮಾರ್ಚ್ 7 ರಂದು ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗಳಿಸುವುದೆಂಬ ವಿಶ್ವಾಸ ವ್ಯಕ್ತಪಡಿಸಿರುವ ಅವರು, ಪಕ್ಷದ ನೂತನ ರಾಜ್ಯಾಧ್ಯಕ್ಷರ ನೇಮಕ ಹೈಕಮಾಂಡ್ ವರಿಷ್ಟರಿಗೆ ಬಿಟ್ಟದ್ದು ಎಂದು ಹೇಳಿದರು.

ಈಶ್ವರಪ್ಪನವರು ಸಚಿವ ಸಂಪುಟ ವಿಸ್ತರಣೆ ಹೇಳಿಕೆ ಹಿಂದೆ, ದಿನಕ್ಕೊಬ್ಬರಂತೆ ಪಕ್ಷ ತೊರೆಯುತ್ತಿರುವ ಬಿಜೆಪಿ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ತಂತ್ರ ಅಡಗಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಈಗಾಗಲೇ ಹಲವು ಬಿಜೆಪಿ ಶಾಸಕರು ತಮ್ಮ ಶಾಸಕತ್ವ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವ ತೊರೆದು ಕಾಂಗ್ರೆಸ್, ಜೆಡಿಎಸ್ ಹಾಗೂ ಕೆಜೆಪಿ ಸೇರ್ಪಡೆಗೊಂಡಿದ್ದು, ಇನ್ನೂ ಹಲವಾರು ಶಾಸಕರು ಬಿಜೆಪಿ ತೊರೆಯುವವರ ಪಟ್ಟಿಯಲ್ಲಿದ್ದಾರೆ.

ಈ ಹಿನ್ನಲೆಯಲ್ಲಿ ಈ ಶಾಸಕರುಗಳಿಗೆ ಸಚಿವ ಸ್ಥಾನದ ಆಮಿಷವೊಡ್ಡಿ ಪಕ್ಷ ತೊರೆಯದಂತೆ ಮಾಡುವ ಪ್ರಯತ್ನವನ್ನು ಈಶ್ವರಪ್ಪ ಮಾಡಲು ಮುಂದಾಗಿದ್ದು, ಆದರೆ ಸರ್ಕಾರದ ಅವಧಿ ಇನ್ನು ಕೇವಲ ಎರಡು ತಿಂಗಳಷ್ಟೇ ಇರುವುದು ಹಾಗೂ ಚುನಾವಣೆ ನೀತಿ ಸಂಹಿತೆ ಘೋಷಣೆಯಾದರೆ ಕೇವಲ ತೋರಿಕೆಗಾಗಿ ಮಾತ್ರ ಮಂತ್ರಿ ಸ್ಥಾನ ಸಿಗುವುದೆಂಬ ಅರಿವಿರುವ ಪಕ್ಷಾಂತರ ಮಾಡಲು ಸಜ್ಜಾಗಿರುವ ಶಾಸಕರುಗಳು ಇದಕ್ಕೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆಂಬುದನ್ನು ಕಾದು ನೋಡಬೇಕಿದೆ.

Share this Story:

Follow Webdunia kannada