Webdunia - Bharat's app for daily news and videos

Install App

ನೀರಸ ಜೀವನಕ್ಕೆ ಸ್ವಲ್ಪ ಬಣ್ಣದ ಲೇಪನ

Webdunia
ಮಂಗಳವಾರ, 28 ಜನವರಿ 2014 (16:07 IST)
PR
ಜನವರಿ, ೨೦೧೪: ಜನವರಿ ೨೬, ೨೦೧೪ರಂದು ನಡೆದ ಕಲರಥೋನ್‌ಗೆ ಸುಮಾರು ೧೦ ಸಾವಿರಕ್ಕೂ ಜನ ಸಾಕ್ಷಿಯಾದರು. ಈ ಕಾರ್ಯಕ್ರಮದಲ್ಲಿ ೬ ರಿಂದ ೮೦ ವರ್ಷದ ಅನೇಕ ಜನರು ಭಾಗವಹಿಸಿ ತಮ್ಮ ಮನಸ್ಸಿನಲ್ಲಿ ಮೂಡಿದ ಕಲ್ಪನೆಗೆ ರೂಪ ಕೊಟ್ಟು ಅದನ್ನು ಬಣ್ಣಗಳಿಂದ ಸಿಂಗಾರಗೊಳಿಸಿದರು. ಬಸವನಗುಡಿಯ ಕೃಷ್ಣ ರಾವ್ ಪಾರ್ಕ್‌ನಲ್ಲಿ ಈ ಕಲರಥೋನ್ ಕಾರ್ಯಕ್ರಮ ನಡೆಯಿತು. ವಂದೇ ಮಾತರಂ ಟ್ರಸ್ಟ್, ಬ್ರೀಥ್‌ಎಂಟರ್‌ಟೈನ್‌ಮೆಂಟ್ ಜೊತೆ ಸೇರಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಕಲರಥೋನ್‌ನಲ್ಲಿ ಪೈಟಿಂಗ್ ಜೊತೆ ಇನ್ನೂ ಅನೇಕ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಂಗೀತ ಕಾರ್ಯಕ್ರಮ, ಡ್ರಮ್ಸ್, ಬೈಕ್ ರ‍್ಯಾಲಿ ಹೀಗೆ ಹತ್ತು ಹಲವು ಕಾರ್ಯಕ್ರಮಗಳು ಜನರ ಮನಸೆಳೆದವು. ೬ ರಿಂದ ೮೦ ವರ್ಷಗಳ ನಡುವಿನ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಖುಷಿಪಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಎನ್ ಅಶೋಕ್, ಮ್ಯಾನೇಜಿಂಗ್ ಟ್ರಸ್ಟಿ, ವಂದೇಮಾತರಂ ಟ್ರಸ್ಟ್, " ಈ ಕಾರ್ಯಕ್ರಮ ಜನರನ್ನು ಎಲ್ಲಾ ಒತ್ತಡಗಳಿಂದ ದೂರವಿಡಲು ತುಂಬಾ ಸಹಾಯಕಾರಿ. ದಿನದ ಜಂಜಾಟದಿಂದ ಹೊರಬಂದು ಜನರು ಈ ಪೈಟಿಂಗ್‌ನಲ್ಲಿ ಭಾಗವಹಿಸಿ ಖುಷಿಪಟ್ಟರು. ಜನರಿಗೆ ತಮ್ಮ ಮನಸ್ಸಿನ ಭಾವನೆಯನ್ನು ಹೊರತರಲು ಈ ಕಲರಥೋನ್ ಒಂದು ಒಳ್ಳೆಯ ವೇದಿಕೆ" ಅಂತ ಅಶೋಕ್ ತಿಳಿಸಿದರು.

ಈ ಕಲರಥೋನ್‌ನಲ್ಲಿ ೫೦ಕ್ಕೂ ಹೆಚ್ಚಿನ ಬಗೆಯ ವಿವಿಧ ಸ್ಟಾಲ್‌ಗಳಿದ್ದವು. ಕಲಾಭಿಮಾನಿಗಳ ಜೊತೆಗೆ ಪಾರ್ಕ್‌ನ ಅಕ್ಕಪಕ್ಕದ ಮನೆಯವರೂ ಬಂದು ಈ ಕಲರಥೋನ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಈ ಕಾರ್ಯಕ್ರಮದಲ್ಲಿ ದೃಷ್ಟಿಹೀನ ಜನರೂ ಭಾಗವಹಿಸಿದರು. ತಮ್ಮ ಭಾವನೆಗಳಿಗೆ ಬಣ್ಣ ನೀಡಿದರು. ಒಟ್ಟಿನಲ್ಲಿ ಬೆಂಗಳೂರಿನ ಜನರ ಪಾಲಿಗಂತೂ ಈ ಕಲರಥೋನ್ ಒತ್ತಡದ ಜೀವನಕ್ಕೆ ಒಂದು ಭರವಸೆಯ ಸೆಲೆಯಂತಿತ್ತು.
For more details call: Kishore Joseph - 9483537475

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments