Webdunia - Bharat's app for daily news and videos

Install App

ನಿಲ್ಲಿಸ್ರಿ ಮಾತು;ಶಾಸಕ ಹರೀಶ್‌ಗೆ ಸಾರ್ವಜನಿಕರಿಂದ ಮಂಗಳಾರತಿ!

Webdunia
ಶುಕ್ರವಾರ, 22 ಅಕ್ಟೋಬರ್ 2010 (12:46 IST)
PR
' ವಾಲ್ಮೀಕಿ ಜಯಂತಿ ಪ್ರಯುಕ್ತ ನಡೆದ ಸಮಾರಂಭದಲ್ಲಿ ಹರಿಹರ ಶಾಸಕ ಬಿ.ಪಿ.ಹರೀಶ್, ಅತೃಪ್ತ ಶಾಸಕರ ಬಂಡಾಯದ ವಿರುದ್ಧ ಮಾತನಾಡುತ್ತ ಅನರ್ಹಗೊಂಡ ಶಾಸಕ ನರೇಂದ್ರ ಸ್ವಾಮಿ ದಲಿತರಲ್ಲ ಬಲಿತರು ಎಂದು ಕೊಂಕು ನುಡಿದಾಗ ಜನರೇ ತೀವ್ರ ಆಕ್ರೋಶ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರ ನಡೆಯಿತು!

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ನರೇಂದ್ರ ಸ್ವಾಮಿ ಅವರು ಶಾಸಕರಾಗಿ ಬಂಡಾಯದ ಕಹಳೆ ಮೊಳಗಿಸಿ ಬಿಜೆಪಿ ಪಕ್ಷವನ್ನು ತೇಜೋವಧೆ ಮಾಡಿದ್ದು ತಪ್ಪು ಎಂದು ಆರೋಪ ಹೊರಿಸಿ ಮಾತನಾಡುತ್ತಿದ್ದಂತೆಯೇ ಸಮಾರಂಭದಲ್ಲಿ ನೆರೆದಿದ್ದ ಜನರು, ನಿಲ್ಲಿಸಿ ನಿಮ್ಮ ಭಾಷಣ ನೀವು ಕೂಡ ಭಿನ್ನಮತೀಯ ಶಾಸಕರ ಜೊತೆ ಹೋಗಿ ನಾಟಕ ಆಡಿದ್ದು ರಾಜ್ಯದ ಜನತೆ ಗೊತ್ತು. ವಾಲ್ಮೀಕಿ ಜಯಂತಿ ಬಗ್ಗೆ ಮಾತನಾಡಿ ಅದನ್ನು ಬಿಟ್ಟು ರಾಜಕೀಯ ಮಾತನಾಡಿದರೆ ಹುಷಾರ್ ಎಂದು ತರಾಟೆಗೆ ತೆಗೆದುಕೊಂಡರು.

ಆದರೂ ಮಾತು ಮುಂದುವರಿಸಲು ಶಾಸಕ ಹರೀಶ್ ಮುಂದಾಗುತ್ತಿದ್ದಂತೆಯೇ, ಕೆಲವರು ವೇದಿಕೆಯತ್ತ ನುಗ್ಗಿ ಹರೀಶ್ ಅವರನ್ನು ಸ್ಟೇಜ್‌ನಿಂದ ಕೆಳಗಿಳಿಸಿ ಮಾತನಾಡದಂತೆ ತಡೆಯಲು ಪ್ರಯತ್ನಿಸಿದರು. ನಿಮ್ಮ ರಾಜಕೀಯದ ಮಾತು ಬೇಡ ಎಂದು ತಾಕೀತು ಮಾಡಿದರು. ಅಷ್ಟರಲ್ಲಿ ಕಾರ್ಯಕ್ರಮದ ಸಂಘಟಕರು ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದರು.

ನರೇಂದ್ರ ಸ್ವಾಮಿ ವಿರುದ್ಧ ಮಾತನಾಡಿ ಹೀರೋ ಆಗಬಹುದು ಎಂದುಕೊಂಡಿದ್ದ ಹರೀಶ್‌ಗೆ ಸಾರ್ವಜನಿಕರಿಂದಲೇ ವಿರೋಧ ವ್ಯಕ್ತವಾದಾಗ, ರಾಜಕೀಯ ಮಾತು ಬಿಟ್ಟು ಕೂಡಲೇ ವಾಲ್ಮೀಕಿ ಕುರಿತು ಪುಟ್ಟ ಭಾಷಣ ಬಿಗಿದು ತೆಪ್ಪಗೆ ಕುಳಿತರು.!

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments