Webdunia - Bharat's app for daily news and videos

Install App

ನಿತ್ಯಾನಂದ ತಾಂತ್ರಿಕ ಸೆಕ್ಸ್ ಪುರಾಣ; ಮತ್ತೊಂದು ಚಾರ್ಜ್‌ಶೀಟ್

Webdunia
ಗುರುವಾರ, 22 ಮಾರ್ಚ್ 2012 (11:05 IST)
PR
ಬಿಡದಿಯ ಧ್ಯಾನಪೀಠದ ನಿತ್ಯಾನಂದ ಸ್ವಾಮಿ ರಾಸಲೀಲೆ ಪ್ರಕರಣದ ಮುಂದುವರಿದ ಭಾಗವಾಗಿ ಸಿಐಡಿ ಪೊಲೀಸರು, ಬುಧವಾರ ಹೆಚ್ಚುವರಿ ಆರೋಪಪಟ್ಟಿಯನ್ನು ಇಲ್ಲಿನ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ಸಲ್ಲಿಸಿದರು.

ಬೆಂಗಳೂರಿನ ಸಿಐಡಿ ಡಿವೈಎಸ್ಪಿ ಎನ್.ಎಂ.ರಾಮಲಿಂಗಪ್ಪ ನೇತೃತ್ವದಲ್ಲಿ 11ಪುಟಗಳ ಆರೋಪಪಟ್ಟಿ ಸಲ್ಲಿಸಲಾಯಿತು. ಸ್ವಾಮಿಯ ನಿಕಟವರ್ತಿ ಜಮು ನಾರಾಣಿಯನ್ನು (38) ಆರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ.

ಕಾರು ಚಾಲಕ ಕರುಪ್ಪನ್ ಲೆನಿನ್ ಅವರು ಈ ಹಿಂದೆ ನೀಡಿದ ದೂರಿನ ಅನ್ವಯ ಸಿಐಡಿ ತನಿಖೆ ನಡೆಸಿತ್ತು. ಲೈಂಗಿಕತೆಯಲ್ಲಿ ಮಧುರಭಾವ ಮತ್ತು ಜ್ಞಾನೋದಯ ಮಾಡಿಸುವುದಾಗಿ ಹೇಳಿ ಮಹಿಳೆಯರಿಗೆ ವಂಚನೆ ಮಾಡಲಾಗುತ್ತಿದ್ದು, ಇದಕ್ಕಾಗಿ ತಾಂತ್ರಿಕ ಸೆಕ್ಸ್, ಓರಲ್ ಸೆಕ್ಸ್ ನಡೆಸಲಾಗಿತ್ತೆಂಬುದು ಪ್ರಮುಖ ಆರೋಪ.

ಈ ಸಂಬಧ ಸ್ವಾಮೀಜಿಯು ಹಲವಾರು ಮಹಿಳೆಯರೊಂದಿಗೆ ಮಾಡಿಕೊಂಡಿದ್ದ ಅಗ್ರಿಮೆಂಟ್‌ಗಳನ್ನು ಪ್ರಮುಖ ಸಾಕ್ಷಿಯನ್ನಾಗಿ ಹಾಜರುಪಡಿಸಲಾಗಿದೆ. ಬಿಡದಿಯ ಆಶ್ರಮ, ವಾರಾಣಸಿಯ ಪ್ಲಾಜಾ ಹೋಟೆಲ್, ಏಕಾರ್ಡ್ ಲಾಡ್ಜ್‌ನಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.

ಪ್ರಮುಖ ಆರೋಪಿ ಜಮುನಾರಾಣಿ ಇದೀಗ ನಾಪತ್ತೆಯಾಗಿದ್ದು, ಈ ಹಿಂದೆ ಸಿಕ್ಕಿದ್ದಾಗ ವೈದ್ಯಕೀಯ ಪರೀಕ್ಷೆ ಮತ್ತು ಮಾದರಿ ಧ್ವನಿ ಪರೀಕ್ಷೆಗೂ ನಿರಾಕರಿಸಿದ್ದಳೆಂದು ವರದಿಯಲ್ಲಿ ದಾಖಲಿಸಲಾಗಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ