Select Your Language

Notifications

webdunia
webdunia
webdunia
webdunia

ನಂದನ್ ನಿಲೇಕಣಿ, ಪತ್ನಿ ರೋಹಿಣಿಯ ಒಟ್ಟು ಆಸ್ತಿ ಮೌಲ್ಯ 7,700 ಕೋಟಿ ರೂ.

ನಂದನ್ ನಿಲೇಕಣಿ, ಪತ್ನಿ ರೋಹಿಣಿಯ ಒಟ್ಟು ಆಸ್ತಿ ಮೌಲ್ಯ 7,700 ಕೋಟಿ ರೂ.
, ಶುಕ್ರವಾರ, 21 ಮಾರ್ಚ್ 2014 (11:30 IST)
PR
PR
ಬೆಂಗಳೂರು: ಬೆಂಗಳೂರು ದಕ್ಷಿಣಕ್ಷೇತ್ರದಲ್ಲಿ ಕಣಕ್ಕಿಳಿಯುವ ಮುಂಚೆ ತಮ್ಮ ಆಸ್ತಿಯನ್ನು ಬಹಿರಂಗಮಾಡಿರುವ ಇನ್ಫೋಸಿಸ್ ಸಹ ಸಂಸ್ಥಾಪಕ ಮತ್ತು ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ, ತಮ್ಮ ಮತ್ತು ಪತ್ನಿ ರೋಹಿಣಿ ನಿಲೇಕಣಿ ಅವರ ಒಟ್ಟು ಆಸ್ತಿಮೌಲ್ಯ 7,700 ಕೋಟಿ ರೂ. ಎಂದು ಘೋಷಿಸಿದ್ದಾರೆ.ನಾನು ಐಐಟಿ ಪದವಿ ಪಡೆದ ಬಳಿಕ ಜೇಬಿನಲ್ಲಿ 200 ರೂ. ಇಟ್ಟುಕೊಂಡು ಕಾರ್ಯಾರಂಭಿಸಿದೆ. ನಾವು 10,000 ರೂ.ನಲ್ಲಿ ಇನ್ಫೋಸಿಸ್ ಸ್ಥಾಪಿಸಿದೆವು ಎಂಬ ಅವರ ಮಾತನ್ನು ಉಲ್ಲೇಖಿಸಿ ನಿಲೇಕಣಿ ಮಾಧ್ಯಮ ತಂಡ ಹೇಳಿದೆ. ನಿಲೇಕಣಿ ಇಂದು ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿ 'ಜನತೆ ಬದಲಾವಣೆ ಬಯಸಿದ್ದಾರೆ. ಬೆಂಗಳೂರಿನ ಜನರಿಗೆ ಒಳ್ಳೆಯ ಅವಕಾಶಗಳು ಸಿಗಬೇಕು. ಬೆಂಗಳೂರಿಗೆ ಉತ್ತಮ ಮೂಲಸೌಲಭ್ಯ ಒದಗಿಸಬೇಕು ಎನ್ನುವುದು ತಮ್ಮ ಗುರಿ' ಎಂದು ಹೇಳಿದ್ದಾರೆ.

ಕಂಪನಿಯ ಯಶಸ್ಸಿನಿಂದ ನಂದನ್ ಮತ್ತು ರೋಹಿಣಿ 7,700 ಕೋಟಿ ರೂ. ಆಸ್ತಿಯನ್ನು ಸಂಪಾದಿಸಲು ಸಾಧ್ಯವಾಯಿತು ಎಂದು ಮಾಧ್ಯಮ ತಂಡ ಬಿಡುಗಡೆ ಮಾಡಿದ ಪ್ರಕಟಣೆ ತಿಳಿಸಿದೆ.ನಿಲೇಕಣಿ ಅವರ ಎದುರಾಳಿ ಮತ್ತು ಐದು ಬಾರಿ ಲೋಕಸಭೆ ಸದಸ್ಯ ಅನಂತ ಕುಮಾರ್ ತಮ್ಮ ಪತ್ನಿ ತೇಜಸ್ವಿನಿಗಿಂತ ಕಡಿಮೆ ಆಸ್ತಿಯಿದೆಯೆಂದು ಘೋಷಿಸಿದ್ದಾರೆ.

webdunia
PR
PR
ನಿನ್ನೆ ಅನಂತಕುಮಾರ್ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ತಮ್ಮ ಒಟ್ಟು ಆಸ್ತಿಮೌಲ್ಯ 51.12 ಲಕ್ಷ ರೂ. ಎಂದು ಘೋಷಿಸಿದ್ದಾರೆ. ತೇಜಸ್ವಿನಿ 3.86 ಕೋಟಿ ಆಸ್ತಿ ಹೊಂದಿದ್ದಾರೆ. ಕುಟುಂಬದ ಒಟ್ಟು ಆಸ್ತಿ 4.4 ಕೋಟಿ ರೂ. ಎಂದು ಘೋಷಿಸಿದ್ದಾರೆ. ಯುಪಿಎನ ಮಹತ್ವದ ಆಧಾರ್ ಯೋಜನೆಯ ರೂವಾರಿಯಾದ ನಿಲೇಕಣಿ, ಮಾ.9ರಂದು ಕಾಂಗ್ರೆಸ್ ಪಕ್ಷಕ್ಕೆ ಸೇರುವ ಮೂಲಕ ರಾಜಕೀಯಕ್ಕೆ ಧುಮುಕಿದ್ದಾರೆ.

ನಮ್ಮ ಬಹುತೇಕ ಆಸ್ತಿ ಶೇ.80ರಷ್ಟು ಇನ್ಫೋಸಿಸ್ ಷೇರುಗಳಲ್ಲಿದೆ. ಇನ್ಫೋಸಿಸ್ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಿದಾಗ ಈ ಆಸ್ತಿ ಸಂಪಾದಿಸಲಾಯಿತು. ಉದ್ಯೋಗಿಗಳ ಸ್ಟಾಕ್ ಮಾಲೀಕತ್ವ ಯೋಜನೆಯಡಿ ಉದ್ಯೋಗಿಗಳಲ್ಲಿ ಕೂಡ ಕಂಪನಿ ಸಂಪತ್ತು ಹಂಚಿಕೆ ಮಾಡಿದೆ.ತಮ್ಮ ಸಂಪತ್ತು ಸಂಪೂರ್ಣವಾಗಿ ಪಾರದರ್ಶಕವೆಂದು ಹೇಳಿದ ಅವರು ತಾವು ಅಕ್ರಮವಾಗಿ ಯಾವುದೇ ಹಣ ಸಂಪಾದಿಸಿಲ್ಲ. ಆದರೆ ದೇಶದ ಹೊರಗೆ ಹೂಡಿಕೆ ಮಾಡುವ ಮೂಲಕ ಬಚ್ಚಿಟ್ಟಿಲ್ಲ ಎಂದು ನಿಲೇಕಣಿ ಹೇಳಿದರು.1999ರಿಂದ, ತಾವು ವಿವಿಧ ಧರ್ಮದತ್ತಿಗಳಿಗೆ 400 ಕೋಟಿ ರೂ.ಆಸ್ತಿಯನ್ನು ದಾನ ಮಾಡಿದ್ದೇವೆ ಎಂದು ನುಡಿದರು.

Share this Story:

Follow Webdunia kannada