Select Your Language

Notifications

webdunia
webdunia
webdunia
webdunia

ತಂಗಿಯ ಮೇಲೆ ಕಾಮುಕ ಅಣ್ಣಂದಿರಿಂದಲೇ ಅತ್ಯಾಚಾರ

ತಂಗಿಯ ಮೇಲೆ ಕಾಮುಕ ಅಣ್ಣಂದಿರಿಂದಲೇ ಅತ್ಯಾಚಾರ
, ಮಂಗಳವಾರ, 1 ಏಪ್ರಿಲ್ 2014 (11:02 IST)
ಶಿವಮೊಗ್ಗ: ಅಪ್ರಾಪ್ತ ವಯಸ್ಕ ತಂಗಿಯ ಮೇಲೆ ಅಣ್ಣಂದಿರೇ ಅತ್ಯಾಚಾರವೆಸಗಿದ ಹೀನ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ರಾಹುಲ್, ಆಕಾಶ್, ಸತೀಶ್ ಎಂಬವರು ನನ್ನ ಮೊದಲ ಪತ್ನಿಯ ಮಕ್ಕಳಾಗಿದ್ದು, ನನ್ನ ಎರಡನೇ ಪತ್ನಿಯ ಪುತ್ರಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಬಾಲಕಿಯ ತಂದೆ ದೂರು ನೀಡಿದ್ದಾರೆ. ಸಂಬಂಧದಲ್ಲಿ ಅಣ್ಣಂದಿರಾಗಬೇಕಿದ್ದ ಈ ಕಾಮುಕರು ಸ್ವಯಂ ತಂಗಿಯ ಮೇಲೆ ಅತ್ಯಾಚಾರವೆಸಗಿ ತಮ್ಮ ಕಾಮಲಾಲಸೆಯನ್ನು ತೀರಿಸಿಕೊಂಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಬಾಲಕಿ ಋತುಮತಿಯಾಗದ ಕಾರಣ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಗರ್ಭಿಣಿ ಆಗಿರುವುದನ್ನು ಕಂಡು ತಂದೆ ಗಾಬರಿಯಾದರು. ನಾನು ಹೆಚ್ಚಿಗೆ ಕೆಲಸದ ಸಲುವಾಗಿ ದೂರದ ಊರುಗಳಿಗೆ ಹೋಗುತ್ತಿದ್ದರಿಂದ ನನಗೆ ಈ ವಿಷಯ ತಿಳಿದುಬರಲೇ ಇಲ್ಲ ಎಂದು ತಂದೆ ದುಃಖದಿಂದ ಹೇಳಿದ್ದಾರೆ. ನನ್ನ ಮಗಳಿಗೆ ಚಿತ್ರಹಿಂಸೆ ಕೊಟ್ಟು ಅತ್ಯಾಚಾರ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Share this Story:

Follow Webdunia kannada