Select Your Language

Notifications

webdunia
webdunia
webdunia
webdunia

ಡೆಂಗ್ಯು ಜ್ವರ ಕುರಿತು ಎಚ್ಚರವಿರಲಿ

ಡೆಂಗ್ಯು ಜ್ವರ ಕುರಿತು ಎಚ್ಚರವಿರಲಿ
ಬೆಂಗಳೂರು , ಶುಕ್ರವಾರ, 31 ಮೇ 2013 (14:31 IST)
PR
PR
ಡೆಂಗ್ಯು ಜ್ವರವು ಮೂರು ವಿಧಗಳಲ್ಲಿದ್ದು,ಸಾಮಾನ್ಯ ಡೆಂಗ್ಯು ಜ್ವರ,ರಕ್ತಸ್ರಾವದ ಡೆಂಗ್ಯು ಜ್ವರ, ಪ್ರಜ್ಞೆ ತಪ್ಪಿಸುವ ಡೆಂಗ್ಯು ಜ್ವರ.ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವ ತೀವ್ರ ಜ್ವರ,ಸ್ನಾಯುಗಳಲ್ಲಿ ತೀವ್ರ ತರದ ನೋವು,ಹಣೆಯ ಮುಂಭಾಗದಲ್ಲಿ ಹಾಗೂ ಕಣ್ಣುಗುಡ್ಡಗಳಲ್ಲಿ ನೋವು ಡೆಂಗ್ಯು ಜ್ವರದ ಲಕ್ಷಣಗಳು.

ರಕ್ತಸ್ರಾವದ ಡೆಂಗ್ಯು ಜ್ವರದಲ್ಲಿ ಮೇಲಿನ ಲಕ್ಷಣಗಳೊಂದಿಗೆ ಮೈಮೇಲೆ ಕೆಂಪಗಿನ ಸಣ್ಣಸಣ್ಣ ಗಂಧೆಗಳು ಕಂಡುಬರುತ್ತವೆ.ಮೂಗಿನಲ್ಲಿ ವಸಡಿನಲ್ಲಿ ರಕ್ತಸ್ರಾವದ ಚಿಹ್ನೆ,ಮೂತ್ರ ಕೆಂಪಾಗಿರುವುದು,ಕಪ್ಪಗಿನ ಮಲ ವಿಸರ್ಜನೆ, ಕಣ್ಣು ಕೆಂಪಾಗಿರುವಂತಹ ತೊಂದರೆಗಳುಂಟಾಗಬಹುದು. ಡೆಂಗ್ಯು ಸೋಂಕಿಗೆ ಕಾರಣವಾಗಿರುವ ವೈರಸ್‌ನ ಪ್ರಭೇದ ತೀವ್ರ ಸ್ವರೂಪದ್ದಾಗಿದ್ದಾಗ ಅಪಾಯಕಾರಿ ಡೆಂಗ್ಯು ಲಕ್ಷಣಗಳು ಕಂಡು ಬರುತ್ತವೆ.

ಡೆಂಗ್ಯು ಜ್ವರ ವೈರಸ್‌ನಿಂದುಂಟಾಗುವ ರೋಗವಾಗಿದ್ದು ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಇರುವುದಿಲ್ಲ.ರೋಗಲಕ್ಷಣಗಳಿಗೆ ಅನುಸಾರವಾಗಿ ಚಿಕಿತ್ಸೆ ನೀಡಲಾಗುತ್ತದೆ. ಸಾಮಾನ್ಯ ಜ್ವರ ಕಂಡು ಬಂದಾಗ ಮನೆಯಲ್ಲಿದ್ದುಕೊಂಡು ಚಿಕಿತ್ಸೆ ಪಡೆಯಬಹುದು. ರಕ್ತಸ್ರಾವದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಸುಸಜ್ಜಿತ ಆಸ್ಪತ್ರೆಗೆ ದಾಖಲಾಗಿ ಮರಣದ ಅಪಾಯವನ್ನು ತಡೆಗಟ್ಟಬಹುದು.

ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಹಾಗೂ ವಯಸ್ಸಾದವರಿಗೆ ಡೆಂಗ್ಯು ಜ್ವರದ ತೊಂದರೆಯುಂಟಾದಾಗ ಅಪಾಯದ ಪ್ರಮಾಣ ಜಾಸ್ತಿ ಇರುತ್ತದೆ.
ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಣ ಮಾಡಲು ಯಾವುದೇ ಲಸಿಕೆ ಲಭ್ಯವಿರುವುದಿಲ್ಲ.

ಜಾಗ್ರತ ಜೀವನ ಕ್ರಮದಿಂದ ರೋಗ ಬಾರದಂತೆ ರಕ್ಷಣೆ ಪಡೆಯಬಹುದು. ಸೊಳ್ಳೆ ಬೆಳವಣಿಗೆಯಾಗದಂತೆ ಕ್ರಮ ಕೈಗೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮನೆಯ ಪರಿಸರದಲ್ಲಿರುವ ಗಿಡಗಂಟೆಗಳನ್ನು ಸ್ವಚ್ಛಗೊಳಿಸುವುದು,ಹಗಲಲ್ಲಿ ಧೂಪದ ಹೊಗೆ ಹಾಕುವುದು,ಡೆಂಗ್ಯು ಸಮಸ್ಯಾತ್ಮಕ ಪ್ರದೇಶಗಳಲ್ಲಿ ಕೆಲಸ ಮಾಡುವಾಗ ಸೊಳ್ಳೆ ನಿರೋಧಕ ಎಣ್ಣೆ ಅಥವಾ ಕ್ರೀಮ್ ಹಚ್ಚುವುದು ಇತ್ಯಾದಿ ಕ್ರಮಗಳಿಂದ ಸೊಳ್ಳೆ ಕಚ್ಚದಂತೆ ರಕ್ಷಣೆ ಪಡೆಯಬೇಕು.

Share this Story:

Follow Webdunia kannada