Select Your Language

Notifications

webdunia
webdunia
webdunia
webdunia

ಡಿನೋಟಿಫಿಕೇಶನ್‌ ಪ್ರಕರಣ: ಯಡಿಯೂರಪ್ಪ ಅರ್ಜಿ ವಜಾ

ಡಿನೋಟಿಫಿಕೇಶನ್‌ ಪ್ರಕರಣ: ಯಡಿಯೂರಪ್ಪ ಅರ್ಜಿ ವಜಾ
ಬೆಂಗಳೂರು , ಮಂಗಳವಾರ, 31 ಜನವರಿ 2012 (11:09 IST)
WD
ತಮ್ಮ ವಿರುದ್ಧ ಸಲ್ಲಿಸಿದ್ದ ಡಿನೋಟಿಫಿಕೇಶನ್‌ ಕುರಿತ 2 ಹಾಗೂ 3ನೇ ಪ್ರಕರಣಗಳನ್ನು ರದ್ದುಮಾಡುವಂತೆ ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಏಕ ಸದಸ್ಯ ಪೀಠವು ಮಂಗಳವಾರ ವಜಾಗೊಳಿಸಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಲೋಕಾಯುಕ್ತ ಕೋರ್ಟ್‌ ಬಿಎಸ್‌ವೈ ಅವರ ವಿರುದ್ಧ ತನಿಖೆಗೆ ಲೋಕಾಯುಕ್ತ ಕೋರ್ಟ್‌ ಅನುಮತಿ ನೀಡಿರುವುದು ಸರಿಯಾಗಿದೆ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಈ ಪ್ರಕರಣದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು 24 ದಿನ ಜೈಲುಶಿಕ್ಷೆಯನ್ನು ಅನುಭವಿಸಿದ್ದರು. ಹೈಕೋರ್ಟ್‌ ಏಕ ಸದಸ್ಯ ಪೀಠವು ನೀಡಿದ್ದ ಜಾಮೀನಿನ ಮೇಲೆ ಯಡಿಯೂರಪ್ಪ ಬಿಡುಗಡೆಯಾಗಿದ್ದರು.

ಬೆಂಗಳೂರಿನ ಅರಕೆರೆ, ದೇವರಚಿಕ್ಕನಹಳ್ಳಿ ಮತ್ತು ಗೆದ್ದಲಹಳ್ಳಿ ಅಕ್ರಮ ಡಿನೋಟಿಫಿಕೇಶನ್ ಸಂಬಂಧ ಯಡಿಯೂರಪ್ಪ ವಿರುದ್ಧ ವಕೀಲರಾದ ಸಿರಾಜೀನ್ ಪಾಷಾ ಮತ್ತು ಎನ್ ಕೆ ಬಾಲರಾಜ್ 2011ರ ಜನವರಿ 21ರಂದು ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಯಡಿಯೂರಪ್ಪ ಅವರು ಪ್ರಕರಣ ರದ್ದು ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಲೋಕಾಯುಕ್ತ ಕೋರ್ಟ್‌ ತಿರಸ್ಕರಿಸಿದ್ದ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು.

Share this Story:

Follow Webdunia kannada