Select Your Language

Notifications

webdunia
webdunia
webdunia
webdunia

ಡಿಕೆಶಿ ಸೇರಿದಂತೆ ಏಳು ಶಾಸಕರ ಪ್ರಮಾಣ ವಚನವಿಲ್ಲ

ಡಿಕೆಶಿ ಸೇರಿದಂತೆ ಏಳು ಶಾಸಕರ ಪ್ರಮಾಣ ವಚನವಿಲ್ಲ
ಬೆಂಗಳೂರು , ಶುಕ್ರವಾರ, 31 ಮೇ 2013 (15:54 IST)
PR
PR
ಹದಿನಾಲ್ಕನೆ ವಿಧಾನಸಭೆಗೆ ಆಯ್ಕೆಯಾದ ಒಟ್ಟು 223 ಶಾಸಕರ ಪೈಕಿ 216 ಮಂದಿ ಪ್ರಮಾಣ ವಚನ ಸ್ವೀಕರಿಸಿದ್ದು, ಡಿ.ಕೆ.ಶಿವಕುಮಾರ್ ಸೇರಿದಂತೆ 7 ಮಂದಿ ಈವರೆಗೂ ಪ್ರಮಾಣ ವಚನ ಸ್ವೀಕರಿಸಿಲ್ಲ.

ಇಂದು ನಿಗದಿಯಂತೆ 77 ಮಂದಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಬೇಕಿತ್ತು. ಆದರೆ ಕಾಂಗ್ರೆಸ್ ಶಾಸಕರಾದ ಕನಕಪುರ ಕ್ಷೇತ್ರದ ಡಿ.ಕೆ.ಶಿವಕುಮಾರ್, ಬೆಳಗಾವಿ ಉತ್ತರ ಕ್ಷೇತ್ರದ ಫಿರೋಜ್ ಸೇಟ್, ಜೆಡಿಎಸ್ ಶಾಸಕರಾದ ಚಾಮರಾಜಪೇಟೆ ಕ್ಷೇತ್ರದ ಜಮೀರ್ ಅಹ್ಮದ್ ಖಾನ್, ಹಾಸನ ಕ್ಷೇತ್ರದ ಎಚ್.ಎಸ್.ಪ್ರಕಾಶ್, ಬಿಎಸ್ಸಾರ್ ಪಕ್ಷದ ಶಾಸಕರಾದ ಶ್ರೀರಾಮುಲು, ಸುರೇಶ್‌ಬಾಬು, ಬಿಜೆಪಿಯ ಜಗದೀಶ್‌ಕುಮಾರ್ ಪ್ರಮಾಣ ವಚನ ಸ್ವೀಕರಿಸಲಿಲ್ಲ.

ಇವರು ಪ್ರಮಾಣ ವಚನ ಸ್ವೀಕರಿಸುವವರೆಗೂ ವಿಧಾನಸಭೆಯ ಸದಸ್ಯರೆಂದು ಪರಿಗಣಿಸಲ್ಪಡುವುದಿಲ್ಲ. ಅಧಿವೇಶನದ ಚರ್ಚೆಯಲ್ಲಿ ಭಾಗವಹಿಸುವಂತಿಲ್ಲ ಮತ್ತು ಮತದಾನ ಮಾಡುವಂತಿಲ್ಲ.

Share this Story:

Follow Webdunia kannada