Select Your Language

Notifications

webdunia
webdunia
webdunia
webdunia

ಜ.16ರಿಂದ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ

ಜ.16ರಿಂದ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ
ಬೆಂಗಳೂರು , ಬುಧವಾರ, 19 ನವೆಂಬರ್ 2008 (12:03 IST)
ಸುಚಿತ್ರಾ ಫಿಲ್ಮ್ ಸೊಸೈಟಿ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಜ.16 ರಿಂದ 22 ರವರೆಗೆ 3ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಪ್ತಾಹ ನಡೆಯಲಿದೆ ಎಂದು ಸಪ್ತಾಹ ಸಮಿತಿ ಅಧ್ಯಕ್ಷ ಹಿರಿಯ ಪತ್ರಕರ್ತ ವಿ.ಎನ್.ಸುಬ್ಬರಾವ್ ತಿಳಿಸಿದ್ದಾರೆ.

ವಿಷನ್ ಸಿನಿಮಾಸ್ ಮಲ್ಟಿಪ್ಲೆಕ್ಸ್, ಕೆ.ಎಚ್.ಪಾಟೀಲ್ ಸಭಾಂಗಣ ಮತ್ತು ಸುಚಿತ್ರಾ ಸಭಾಂಗಣದಲ್ಲಿ ನಡೆಯಲಿದೆ. ಚಿತ್ರೋತ್ಸವದಲ್ಲಿ 90 ವಿದೇಶಿ ಚಿತ್ರಗಳು ಸೇರಿದಂತೆ ಒಟ್ಟು 120 ಚಿತ್ರಗಳು ಹಾಗೂ ಅಂತಾರಾಷ್ಟ್ರೀಯ ಸಾಕ್ಷ್ಯಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಚಲನಚಿತ್ರ ಅಮೃತ ಮಹೋತ್ಸವದ ಪ್ರಯುಕ್ತ ಮೂರು ದಿನ ವಿಚಾರ ಸಂಕಿರಣಗಳು ನಡೆಯಲಿವೆ. ಚಲನಚಿತ್ರೋತ್ಸವದ ಅಂತಿಮ ದಿನದಂದು ವಿವಿಧ ಭಾಷೆಗಳಲ್ಲಿ 65ಕ್ಕೂ ಹೆಚ್ಚು ಚಿತ್ರ ನಿರ್ಮಾಣ ಮಾಡಿರುವ ಬಿ.ಎಸ್.ರಂಗಾ ಅವರಿಗೆ ಸನ್ಮಾನ ಮಾಡಲಾಗುವುದು ಎಂದರು.

ಒಟ್ಟು 70 ಲಕ್ಷ ರೂ.ವೆಚ್ಚದಲ್ಲಿ ನಡೆಯುವ ಈ ಚಿತ್ರೋತ್ಸವಕ್ಕೆ ಸರ್ಕಾರ 25 ಲಕ್ಷ ರೂ. ನೀಡಲಿದೆ. ಇತರ ಪ್ರಾಯೋಜಕರು 50 ಲಕ್ಷ ರೂ. ಭರಿಸಲಿದ್ದಾರೆ. ಒಂದು ವಾರದ ಚಿತ್ರ ವೀಕ್ಷಣೆಗೆ 500 ರೂ. ಹಾಗೂ ವಿದ್ಯಾರ್ಥಿಗಳಿಗೆ 300 ರೂ.ಪ್ರವೇಶ ದರವನ್ನು ನಿಗದಿಪಡಿಸಲಾಗಿದೆ.

Share this Story:

Follow Webdunia kannada