Select Your Language

Notifications

webdunia
webdunia
webdunia
webdunia

ಜ್ಯೋತಿಷಿಗಳಿಗೆ ಷುರುವಾಯ್ತು ಸಂಕಟ: ಮೂಢನಂಬಿಕೆಗಳ ವಿರುದ್ಧ ಮಸೂದೆ

ಜ್ಯೋತಿಷಿಗಳಿಗೆ ಷುರುವಾಯ್ತು ಸಂಕಟ: ಮೂಢನಂಬಿಕೆಗಳ ವಿರುದ್ಧ ಮಸೂದೆ
, ಶನಿವಾರ, 19 ಅಕ್ಟೋಬರ್ 2013 (17:44 IST)
PR
PR
ಬೆಂಗಳೂರು: ಮಹಾರಾಷ್ಟ್ರ ಮಾದರಿಯಲ್ಲಿ ಮೂಢನಂಬಿಕೆ ತಡೆ ಮಸೂದೆಯ ಕರಡು ಪ್ರತಿ ತಯಾರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮೌಢ್ಯ, ಅಜ್ಞಾನಗಳಿಗೆ ಬ್ರೇಕ್ ಹಾಕುವುದು ಇದರ ಉದ್ದೇಶವಾಗಿದೆ. ಇದಕ್ಕಾಗಿ ಅನೇಕ ವಿಚಾರವಾದಿಗಳು ಮಸೂದೆಯಲ್ಲಿ ಅಳವಡಿಸಿಕೊಳ್ಳಲು ಕೆಲವು ಶಿಫಾರಸುಗಳನ್ನು ಮಂಡಿಸಿದ್ದಾರೆ. ಭವಿಷ್ಯ ಫಲ , ನಕ್ಷತ್ರ, ದಶಾಗೋಚರ ಸುಳ್ಳು ಜಾತಕ ನಿಲ್ಲಿಸಬೇಕು.

ಜ್ಯೋತಿಷಿಗಳ ವಿರುದ್ಧ ದೂರು ದಾಖಲಾದ್ರೆ ದಂಡ ವಸೂಲಿ ಮಾಡಬಹುದು. ವಾಸ್ತು ಹೆಸರಿನಲ್ಲಿ ಹಣ ವಸೂಲಿ ಮಾಡೋದಕ್ಕೆ ಕಡಿವಾಣ ಹಾಕಬೇಕು, ಪರೋಕ್ಷವಾಗಿ ಜ್ಯೋತಿಷ್ಯ ಹಾಗು ವಾಸ್ತುವನ್ನು ನಿಷೇಧಿಸಲು ಶಿಫಾರಸು, ಪವಾಡ, ದೇವ ಮಾನವ, ಮಂತ್ರಿ ಸಿದ್ಧಿ ಮಾಡೋದನ್ನು ತಡೆಯಬೇಕು.
ಮತ್ತಷ್ಟು ಮಾಹಿತಿ ಮುಂದಿನ ಪುಟದಲ್ಲಿ

webdunia
PR
PR
ವಾಮಾಚಾರದ ಹೆಸರಿನಲ್ಲಿ ಶೋಷಣೆಗೆ ಕಡಿವಾಣ ಹಾಕಬೇಕು.ಅಗೋಚರ ಶಕ್ತಿ ಸಿದ್ಧಿಗಾಗಿ ಅನಿಷ್ಟ ಆಚರಣೆಯನ್ನು ತಡೆಯಬೇಕು. ನಿಧಿ, ಹೆಸರಿನಲ್ಲಿ ಪ್ರಾಣಿ, ನರಬಲಿ ಕೊಡೋದನ್ನು ತಡೆಯಬೇಕು. ಸುಳ್ಳು ಪವಾಡ ಪ್ರದರ್ಶನ ಪ್ರಚಾರಕರನ್ನು ಬಂಧಿಸಬೇಕು. ದೈವ, ನಾಗ, ಯಕ್ಷದ ಹೆಸರಲ್ಲಿ ವಂಚಿಸೋದನ್ನು ತಡೆಯಬೇಕು. ಬರಿಗೈನಿಂದ ಆಪರೇಷನ್ ಮಾಡುವವರನ್ನು ಬಂಧಿಸಬೇಕು.ಭ್ರೂಣದ ಲಿಂಗ ಬದಲಿಸ್ತೀವಿ ಅನ್ನೋರಿಗೆ ಕಡಿವಾಣ ಹಾಕಬೇಕು.

ಬೆತ್ತಲೆ ಮೆರವಣಿಗೆ ನಿಷೇಧಿಸಬೇಕು. ಮಂತ್ರ, ಬೂದಿ ಹಾಕಿ ಬೆದರಿಕೆ ಹಾಕೋದನ್ನು ನಿಷೇಧಿಸಬೇಕು. ನಾಯಿ, ಹಾವು, ಚೇಳು ಕಚ್ಚಿದ್ರೆ ಮಂತ್ರದಿಂದ ಚಿಕಿತ್ಸೆಗೆ ತಡೆಯಬೇಕು. ದೈವಪೂಜೆ, ನಾಗಪೂಜೆ ಕೂಡ ಮೂಢನಂಬಿಕೆಯಾಗಿದೆ. ಮಂತ್ರವಾದಿಗಳ ಕ್ರೌರ್ಯ, ಹಿಂಸೆಯನ್ನು ತಡೆಯಬೇಕು ಮುಂತಾದ ಶಿಫಾರಸುಗಳನ್ನು ವಿಚಾರವಾದಿಗಳು ಮಂಡಿಸಿದ್ದಾರೆ.

Share this Story:

Follow Webdunia kannada