Webdunia - Bharat's app for daily news and videos

Install App

ಜನಾರ್ದನ ಪೂಜಾರಿಗೆ ಸೆಡ್ಡುಹೊಡೆದ ಹರ್ಷ ಮೊಯ್ಲಿ

Webdunia
ಭಾನುವಾರ, 19 ಜನವರಿ 2014 (12:13 IST)
PR
ಕೆಪಿಸಿಸಿಯು ಹೈಕಮಾಂಡ್‌ಗೆ ಕಳುಹಿಸಿರುವ ಮಂಗಳೂರು ಲೋಕಸಭಾ ಕ್ಷೇತ್ರದ ಸಂಭವನೀಯರ ಪಟ್ಟಿಯಲ್ಲಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರ ಪುತ್ರ ಹರ್ಷ ಮೊಯ್ಲಿ ಅವರ ಹೆಸರು ದಿಢೀರ್‌ ಸೇರ್ಪಡೆಗೊಂಡಿದೆ.

ಹತ್ತು ಹಲವು ಸಭೆಗಳನ್ನು ನಡೆಸಿ, ಸ್ಥಳೀಯ ನಾಯಕರ ಅಭಿಪ್ರಾಯ ಪಡೆದ ನಂತರ ಕೆಪಿಸಿಸಿಯು ಈ ಕ್ಷೇತ್ರಕ್ಕೆ ಮಾಜಿ ಕೆಪಿಸಿಸಿ ಅಧ್ಯಕ್ಷ ಜನಾರ್ದನ ಪೂಜಾರಿ ಅವರ ಏಕೈಕ ಹೆಸರು ಶಿಫಾರಸು ಮಾಡಿತ್ತು. ಆದರೆ, ಈ ಸಂಭವನೀಯರ ಪಟ್ಟಿ ದೆಹಲಿ ಮುಟ್ಟುವ ವೇಳೆಗೆ ಏಕಾಏಕಿ ಹರ್ಷ ಮೊಯ್ಲಿ ಹೆಸರು ಸೇರ್ಪಡೆಯಾಗುವ ಮೂಲಕ ಕೆಪಿಸಿಸಿ ವಲಯದಲ್ಲಿ ಭಾರಿ ಸಂಚಲನ ಉಂಟು ಮಾಡಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆಯಲ್ಲಿ ಹಾಲಿ ಸಂಸದರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳನ್ನು ಹೊರತುಪಡಿಸಿದರೆ ಬಳ್ಳಾರಿ (ಎನ್‌.ವೈ. ಹನುಮಂತಪ್ಪ) ಹಾಗೂ ಮಂಗಳೂರು (ಜನಾರ್ದನ ಪೂಜಾರಿ) ಕ್ಷೇತ್ರಗಳಿಗೆ ಮಾತ್ರ ಒಂದೇ ಹೆಸರು ಸೂಚಿತವಾಗಿತ್ತು. ತನ್ಮೂಲಕ ರಾಜ್ಯದ 28 ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳಲ್ಲಿ 11 ಮಂದಿಗೆ ಬಹುತೇಕ ಟಿಕೆಟ್‌ ಖಾತರಿಗೊಂಡಿದೆ ಎಂದೇ ಕೆಪಿಸಿಸಿಯು ಬಿಂಬಿಸಿತ್ತು.

ಚುನಾವಣಾ ಸಮಿತಿಯ ಸದಸ್ಯರಿಗೆ ಸಭೆಯ ನಂತರ ವಿತರಿಸಲಾದ ಪಟ್ಟಿಯಲ್ಲೂ ಮಂಗಳೂರು ಕ್ಷೇತ್ರದಿಂದ ಪೂಜಾರಿ ಅವರ ಹೆಸರನ್ನು ಮಾತ್ರ ಉಲ್ಲೇಖೀಸಲಾಗಿತ್ತು. ಆದರೆ, ಕಡೆ ಕ್ಷಣದಲ್ಲಿ ಬದಲಾವಣೆ ನಡೆದಿದೆ. ಈ ಬದಲಾವಣೆಯ ಹಿಂದಿನ ಕಾರಣ ಮಾತ್ರ ನಿಗೂಢವಾಗಿದೆ. ಹೀಗೆ ಮಂಗಳೂರು ಕ್ಷೇತ್ರಕ್ಕೆ ಸೂಚಿತವಾಗಿದ್ದ ಒಂದೇ ಹೆಸರು ಈಗ ಡಬಲ್‌ ಆಗಿದೆ ಎಂಬುದು ಬಹಿರಂಗಗೊಂಡಿದ್ದು ಸಹ ಈ ಪಟ್ಟಿ ಹೈಕಮಾಂಡ್‌ ಮುಟ್ಟಿದ ನಂತರವೇ.

ಎಐಸಿಸಿಯಲ್ಲಿ ಪ್ರಮುಖ ಹುದ್ದೆಯಲ್ಲಿರುವ ರಾಜ್ಯದ ನಾಯಕರೊಬ್ಬರು 'ಉದಯವಾಣಿ'ಗೆ ಈ ವಿಷಯ ಖಚಿತಪಡಿಸಿದ್ದು, 'ರಾಜ್ಯ ಚುನಾವಣಾ ಸಮಿತಿ ಸಭೆಯಲ್ಲಿ ಆಖೈರುಗೊಂಡ ಸಂಭವನೀಯರ ಪಟ್ಟಿಯಲ್ಲಿ ಮಂಗಳೂರಿನಿಂದ ಜನಾರ್ದನ ಪೂಜಾರಿ ಅವರ ಹೆಸರು ಮಾತ್ರವಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ದೆಹಲಿಗೆ ತಲುಪಿರುವ ಪಟ್ಟಿಯಲ್ಲಿ ಜನಾರ್ದನ ಪೂಜಾರಿ ಅವರ ಹೆಸರಿನ ಜತೆಗೆ ಹರ್ಷ ಮೊಯ್ಲಿ ಅವರ ಹೆಸರು ಸಹ ಇದೆ' ಎಂದು ತಿಳಿಸಿದರು.

ಹೇಗೆ ನಡೆಯಿತು ಈ ಜಾದೂ?:

ಸಂಭವನೀಯರ ಪಟ್ಟಿಯಲ್ಲಿ ಇದ್ದ ಒಂಟಿ ಹೆಸರು ದೆಹಲಿ ತಲುಪುವ ವೇಳೆಗೆ ಜಂಟಿಯಾಗಿದ್ದು ಹೇಗೆ? ಇಂತಹದೊಂದು ಜಾದೂ ನಡೆಯಲು ಕಾರಣವೇನು ಎಂಬ ಬಗ್ಗೆ ಕಾಂಗ್ರೆಸ್‌ ವಲಯದಲ್ಲಿ ಕುತೂಹಲಕರ ಚರ್ಚೆಗಳು ನಡೆದಿವೆ. ಈ ಪೈಕಿ ಪ್ರಮುಖವಾದುದು- ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರ ಒತ್ತಡ ಭರಿಸಲಾಗದೇ ರಾಜ್ಯ ನಾಯಕರು ಅನಿವಾರ್ಯವಾಗಿ ಹರ್ಷ ಮೊಯ್ಲಿ ಹೆಸರು ಸೇರಿಸಿದರು ಎಂಬುದು.

ಬ್ಲಾಕ್‌ ಮಟ್ಟದಿಂದ ಹಾಗೂ ಸ್ಥಳೀಯ ನಾಯಕರಿಂದ ಪೂಜಾರಿ ಅವರ ಹೆಸರು ಮಾತ್ರ ಸೂಚಿತವಾಗಿದ್ದರಿಂದ ಕೆಪಿಸಿಸಿಯು ಸಹಜವಾಗಿಯೇ ಜನಾರ್ದನ ಪೂಜಾರಿ ಅವರ ಒಂಟಿ ಹೆಸರನ್ನು ಸಂಭವನೀಯರ ಪಟ್ಟಿಯಲ್ಲಿ ಸೇರಿಸಿತ್ತು. ಇದಕ್ಕೆ ರಾಜ್ಯ ಚುನಾವಣಾ ಸಮಿತಿ ಸಭೆಯಲ್ಲೂ ಅನುಮೋದನೆ ದೊರಕಿತ್ತು.

ಈ ವಿಷಯ ಬಹಿರಂಗಗೊಂಡ ನಂತರ ಕ್ರುದ್ಧರಾದ ವೀರಪ್ಪ ಮೊಯ್ಲಿ ಅವರು, ಮಂಗಳೂರಿನಿಂದ ಸ್ಪರ್ಧಿಸಲು ಹರ್ಷ ಮೊಯ್ಲಿ ಅವರು ಆಸಕ್ತಿ ತೋರಿರುವಾಗ ಒಂಟಿ ಹೆಸರು ಶಿಫಾರಸು ಮಾಡಲು ಕಾರಣವೇನು ಎಂದು ರಾಜ್ಯ ನಾಯಕರನ್ನು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಮಣಿದ ರಾಜ್ಯ ನಾಯಕರು ಕಡೆ ಕ್ಷಣದಲ್ಲಿ ಹರ್ಷ ಮೊಯ್ಲಿ ಹೆಸರು ಸೇರ್ಪಡೆ ಮಾಡಿದರು ಎನ್ನುತ್ತವೆ ಮೂಲಗಳು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments