Select Your Language

Notifications

webdunia
webdunia
webdunia
webdunia

ಜಗದೀಶ್ ಶೆಟ್ಟರ್‌ಗೆ ಒಲಿದು ಬಂದ ವಿಪಕ್ಷ ನಾಯಕನ ಸ್ಥಾನ

ಜಗದೀಶ್ ಶೆಟ್ಟರ್‌ಗೆ ಒಲಿದು ಬಂದ ವಿಪಕ್ಷ ನಾಯಕನ ಸ್ಥಾನ
ಬೆಂಗಳೂರು , ಗುರುವಾರ, 23 ಜನವರಿ 2014 (11:45 IST)
PR
PR
ಬಿಜೆಪಿಗೆ ವಿಧಾನಸಭೆ ವಿಪಕ್ಷ ನಾಯಕನ ಪಟ್ಟ ಸಿಕ್ಕಿದ್ದು, ಜಗದೀಶ್ ಶೆಟ್ಟರ್ ಅವರು ವಿಪಕ್ಷ ನಾಯಕರಾಗಿದ್ದಾರೆ. ಕೆಜೆಪಿಯಿಂದ ನಾಲ್ಕು ಜನ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದು, ಬಿಜೆಪಿ ಸಂಖ್ಯಾಬಲ 44ಕ್ಕೆ ಏರಿರುವುದರಿಂದ ಶೆಟ್ಟರ್ ಅವರಿಗೆ ವಿಪಕ್ಷ ನಾಯಕನ ಸ್ಥಾನ ಒಲಿದುಬಂದಿದೆ. ಈ ಕುರಿತು ಸ್ಪೀಕರ್ ಕಾಗೋಡು ತಿಮ್ಮಪ್ಪ ಅಧಿಕೃತ ಘೋಷಣೆ ಮಾಡಿದ್ದಾರೆ. 44 ಸ್ಥಾನ ಪಡೆದು ಬಿಜೆಪಿ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಬಿಜೆಪಿ ಮತ್ತು ಜೆಡಿಎಸ್ ಸಮಾನ ಸ್ಥಾನ ಪಡೆದಿದ್ದರಿಂದ ಕ್ಷೇತ್ರಗಳ ಒಟ್ಟು ಮತಗಳಿಕೆ ಆಧಾರದ ಮೇಲೆ ಜೆಡಿಎಸ್ ಪ್ರತಿಪಕ್ಷದ ಸ್ಥಾನಮಾನ ಪಡೆದಿತ್ತು. ಆದರೆ ಈಗ ಬಿಜೆಪಿ ಸಂಖ್ಯಾಬಲ ಹೆಚ್ಚಿದ್ದರಿಂದ ಶೆಟ್ಟರ್‌ಗೆ ವಿಪಕ್ಷ ನಾಯಕನ ಸ್ಥಾನ ಒಲಿದುಬಂದಿದೆ.

Share this Story:

Follow Webdunia kannada