Select Your Language

Notifications

webdunia
webdunia
webdunia
webdunia

ಚಿಕಿತ್ಸೆಗೆ ಬಂದಿದ್ದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ನಕಲಿ ವೈದ್ಯ

ಚಿಕಿತ್ಸೆಗೆ ಬಂದಿದ್ದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ನಕಲಿ ವೈದ್ಯ
ಶಿಡ್ಲಘಟ್ಟ , ಸೋಮವಾರ, 2 ಡಿಸೆಂಬರ್ 2013 (18:13 IST)
PR
PR
ಶಿಡ್ಲಘಟ್ಟ: ಚಿಕಿತ್ಸೆಗೆ ಬಂದಿದ್ದ ಬಾಲಕಿ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ ನಕಲಿ ವೈದ್ಯನ ವೆಂಕಟೇಶ್‌ನನ್ನು ಜನರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ವರದಿಯಾಗಿದೆ. ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನ ದ್ಯಾವಪ್ಪನಗುಡಿ ಗ್ರಾಮದಲ್ಲಿ ಬಾಲಕಿಯೊಬ್ಬಳು ಚಿಕಿತ್ಸೆ ಪಡೆಯಲು ಕ್ಲಿನಿಕ್‌ಗೆ ಬಾಲಕಿಗೆ ಬಿಟ್ಟು ಬಿಟ್ಟು ಜ್ವರ ಬರುತ್ತಿದ್ದರಿಂದ ವೈದ್ಯರನ್ನು ಕಾಣಲು ಬಂದಿದ್ದಳು. ಬಾಲಕಿಗೆ ಚುಚ್ಚುಮದ್ದು ನೀಡುವ ಸಂದರ್ಭದಲ್ಲಿ ವೈದ್ಯ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರಕ್ಕೆ ಯತ್ನಿಸಿದ.

ತಕ್ಷಣವೇ ಬಾಲಕಿ ತಪ್ಪಿಸಿಕೊಂಡು ಹೊರಕ್ಕೆ ಓಡಿಬಂದಿದ್ದರಿಂದ ಬಚಾವಾದಳು. ಸುತ್ತಮುತ್ತಲಿನ ಜನರು ವೈದ್ಯನಿಗೆ ಚೆನ್ನಾಗಿ ಥಳಿಸಿದ ಬಳಿಕ ವೆಂಕಟೇಶ್ ಇನ್ನೊಬ್ಬರ ಬೈಕಿನಲ್ಲಿ ಹತ್ತಿಕೊಂಡು ಪರಾರಿಯಾದನೆಂದು ತಿಳಿದುಬಂದಿದೆ. ತಾನು ಚಿಂತಾಮಣಿಯ ವಾಸಿ ಎಂದು ಹೇಳಿಕೊಂಡಿದ್ದ.

Share this Story:

Follow Webdunia kannada