Select Your Language

Notifications

webdunia
webdunia
webdunia
webdunia

ಚಂಬೋ ಚಂಬು..... ಶಾಸಕನಿಂದ ಸರ್ಕಾರಕ್ಕೆ ನಾಮ!

ಚಂಬೋ ಚಂಬು..... ಶಾಸಕನಿಂದ ಸರ್ಕಾರಕ್ಕೆ ನಾಮ!
ಬೆಂಗಳೂರು , ಶುಕ್ರವಾರ, 29 ನವೆಂಬರ್ 2013 (12:14 IST)
PR
PR
ಶಾಸಕನೊಬ್ಬ ಸರ್ಕಾರಕ್ಕೆ ನಾಮ ಹಾಕುವಂತಹ ಕೆಲಸ ಮಾಡಿದ್ದಾನೆ. ಅದೂ ಇತ್ತೀಚಿನ ದಿನಗಳಲ್ಲಿ ಅಲ್ಲ...! ಹಲವು ವರ್ಷಗಳಿಂದ ಸರ್ಕಾರಕ್ಕೆ ನಾಮ ಹಾಕುತ್ತಲೇ ಬಂದಿದ್ರೂ ಸರ್ಕಾರಕ್ಕೆ ಮಾತ್ರ ಈ ಬಗ್ಗೆ ಗೊತ್ತೇ ಆಗಿಲ್ಲ..! ಸಂವಿಧಾನದ ನಿಯಮಗಳನ್ನು ಲೆಕ್ಕಿಸದೇ, ಸರ್ಕಾರಕ್ಕೆ ವಂಚಿಸುವ ಮೂಲಕ ಒಳಗೊಳಗೇ ದುಡ್ಡು ಮಾಡಿಕೊಳ್ತಿದ್ದಾನೆ ಈ ಖತರ್ನಾಕ್‌ ಶಾಸಕ.. ಯಾರವರು ಅಂತೀರಾ? ಈ ಸುದ್ದಿ ಓದಿ..

ಯಲಹಂಕ ಕ್ಷೇತ್ರದ ಜನಪ್ರತಿನಿಧಿ ಕಂ ಬಿಜೆಪಿಯ ಶಾಸಕ ಎಸ್‌ ಆರ್‌ ವಿಶ್ವನಾಥ್‌ ಇಂತಹ ಖತರ್ನಾಕ್‌ ಕೆಲಸ ಮಾಡಿರುವ ಶಾಸಕ. ಎಸ್‌ ಆರ್‌ ವಿಶ್ವನಾಥ್‌ ಅವರು 1985ರಲ್ಲಿ ಎಚ್‌ಎಎಲ್‌ ಮೆಕಾನಿಕ್‌ ಉದ್ಯೋಗಕ್ಕೆ ಸೇರಿದ್ದರು. ಉದ್ಯೋಗದಲ್ಲಿದ್ದುಕೊಂಡೆ 2000ರಲ್ಲಿ ಹೆಸರಘಟ್ಟ ಜಿಲ್ಲಾ ಪಂಚಾಯ್ತಿಯ ಸದಸ್ಯರಾಗಿ ಆಯ್ಕೆಯಾದರು. ಸಂವಿಧಾನಿಕ ನಿಯಮದ ಪ್ರಕಾರ ಸರ್ಕಾರಿ ನೌಕರನಾದವನು ಚುನಾವಣೆಗೆ ಸ್ಪರ್ಧಿಸುವ ಮುನ್ನ ತನ್ನ ಉದ್ಯೋಗಕ್ಕೆ ರಾಜೀನಾಮೆ ನೀಡಬೇಕು. ಆದರೆ, ಮೆಕಾನಿಕ್‌ ಉದ್ಯೋಗಕ್ಕೆ ರಾಜೀನಾಮೆ ನೀಡದೆ, ಕೆಲಸದಲ್ಲಿ ಮುಂದುವರಿದು ವೇತನ ಕೂಡ ಪಡೆದಿದ್ದಾರೆ ಈ ಶಾಸಕ ಮಹಾಶಯ..!

ಹೆಚ್‌ಎಎಲ್‌ನಿಂದ ವೇತನ ಮತ್ತು ಜಿಲ್ಲಾ ಪಂಚಾಯತಿ ವತಿಯಿಂದ ಐದು ವರ್ಷಗಳ ಕಾಲ ಗೌರವಧನ ಎರಡನ್ನೂ ಪಡೆದುಕೊಂಡಿದ್ದಾರೆ. ಆದ್ರೆ 2008ರಲ್ಲಿ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ನಂತರ ಮೆಕಾನಿಕ್‌ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದಾರೆ..! ಈ ಮೂಲಕ ಶಾಸಕರು ಕಾನೂನು ಉಲ್ಲಂಘನೆ ಮಾಡಿದ್ದಾರೆ. ಅಷ್ಟೆ ಅಲ್ಲ, ಸರ್ಕಾರಕ್ಕೆ ಆರ್ಥಿಕವಾಗಿ ನಷ್ಟ ಉಂಟು ಮಾಡಿದ್ದಾರೆ.

ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ವಿ.ಶಶಿಧರ್‌ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್‌. ಬೋಪಣ್ಣ ಅವರು, ಶಾಸಕ ವಿಶ್ವನಾಥ್‌ ಅವರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ. ಅಷ್ಟೆ ಅಲ್ಲ, ಈ ಸಂಬಂಧ ಶಾಸಕರ ವಿರುದ್ಧ ಎಫ್ಐಆರ್‌ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಗೃಹ ಇಲಾಖೆ ಮತ್ತು ಯಲಹಂಕ ಠಾಣಾಧಿಕಾರಿಗೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

Share this Story:

Follow Webdunia kannada