Select Your Language

Notifications

webdunia
webdunia
webdunia
webdunia

ಗುಲ್ಬರ್ಗಾದಲ್ಲಿ ಭೀಕರ ರಸ್ತೆ ಅಪಘಾತಕ್ಕೆ 5 ಬಲಿ

ಗುಲ್ಬರ್ಗಾದಲ್ಲಿ ಭೀಕರ ರಸ್ತೆ ಅಪಘಾತಕ್ಕೆ 5 ಬಲಿ
ಗುಲ್ಬಾರ್ಗಾ , ಸೋಮವಾರ, 22 ಡಿಸೆಂಬರ್ 2008 (15:31 IST)
ಗುಲ್ಬಾರ್ಗಾದ ಚಿತ್ತಾಪುರದ ನಾಲವಾರ ಎಂಬಲ್ಲಿ ಸಂಭವಿಸಿರವ ಭೀಕರ ರಸ್ತೆ ಅಪಘಾತದಲ್ಲಿ ಐದು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಇತರ 35 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಏಳು ಮಂದಿಯ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಬಹುದೆಂದು ಭೀತಿ ಪಡಲಾಗಿದೆ.

ಮದುವೆ ದಿಬ್ಬಣವನ್ನು ಒಯ್ಯುತ್ತಿದ್ದ ಲಾರಿ ಅಪಘಾತಕ್ಕೆ ಒಳಗಾಗಿದ್ದು, ಚಾಲಕನ ನಿರ್ಲಕ್ಷ್ಯದ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಲಾರಿಯಲ್ಲಿ 200ಕ್ಕಿಂತಲೂ ಅಧಿಕ ಮಂದಿ ಪ್ರಯಾಣಿಸುತ್ತಿದ್ದರು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೃತರೆಲ್ಲರೂ ನಂದೂರು ತಾಂಡಾಕ್ಕೆ ಸೇರಿದವರಾಗಿದ್ದಾರೆ. ಅಪಘಾತದ ಸ್ಥಳಕ್ಕೆ ಪೊಲೀಸರು ಧಾವಿಸಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.

Share this Story:

Follow Webdunia kannada