Select Your Language

Notifications

webdunia
webdunia
webdunia
webdunia

ಗಣಿ ಹಗರಣ : ಅಧಿಕಾರಿಗಳ ವಿರುದ್ಧ ತನಿಖೆ

ಗಣಿ ಹಗರಣ : ಅಧಿಕಾರಿಗಳ ವಿರುದ್ಧ ತನಿಖೆ
ಬೆಂಗಳೂರು , ಭಾನುವಾರ, 29 ಸೆಪ್ಟಂಬರ್ 2013 (11:17 IST)
PR
ಗಣಿ ಹಗರಣದ ತನಿಖೆ ಮತ್ತೆ ಕಾವೇರಿದೆ . ರಾಜ್ಯದಲ್ಲಿ ಬೇಲೆಕೇರಿ ಕಬ್ಬಿಣ ಅದಿರು ಅಕ್ರಮ ರಫ್ತು ಪ್ರಕರಣ ದಿನೇ ದಿನೇ ಹೋಸರೂಪ ಪಡೆಯುತ್ತಿದೆ. ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ನಿರ್ದೇಶಕ ಕ್ಯಾಪ್ಟನ್ ಆರ್. ಮೋಹನ್ ಅವರನ್ನು ಮತ್ತು ಇತರೇ 24 ಅಧಿಕಾರಿಗಳ ಮೇಲೆ ಜಂಟಿ ಇಲಾಖೆ ತನಿಖೆಗೆ ಸರ್ಕಾರ ಆದೇಶ ಹೊರಡಿಸಿದೆ.

ಬೇಲೆಕೇರಿ ಬಂದರಿನಲ್ಲಿ ಕಬ್ಬಿಣ ಅದಿರು ವಿದೇಶಕ್ಕೆ ರಫ್ತು ಮಾಡುತ್ತಿದ್ದ ಸಂಸ್ಥೆಗಳಲ್ಲಿ ಒಂದಾದ ಅದಾನಿ ಎಂಟರ್‌ಪ್ರೈಸಸ್, ಅಹಮದಾಬಾದ್ ಸಂಸ್ಥೆಯಿಂದ ಅಕ್ರಮವಾಗಿ ಹಣ ಪಡೆದಿರುವ ಪ್ರಕರಣದಲ್ಲಿ 24 ಅಧಿಕಾರಿಗಳ ಮೇಲೆ ತನಿಖೆ ನಡೆಯಲಿದೆ.

ಸಿವಿಲ್ ಸೇವಾ ನಿಯಮಗಳು 1957ರ ನಿಯಮ 13ರನ್ವಯ 11ನೇ ನಿಯಮ 2ನೇ ಉಪ ನಿಯಮದಡಿ ಜಂಟಿ ಇಲಾಖಾ ವಿಚಾರಣೆ ನಡೆಸಲು ಕ್ರಮ ಕೈಗೊಳ್ಳಲು ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಡಿ.ವಿ. ಶೇಟ ಅವರನ್ನು ವಿಚಾರಣಾಧಿಕಾರಿಯಾಗಿ ನೇಮಿಸಲಾಗಿದೆ. ಲೋಕೋಪಯೋಗಿ,ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಅವರನ್ನು ಮಂಡನಾಧಿಕಾರಿಯಾಗಿ ನೇಮಿಸಲಾಗಿದೆ. ವಿಚಾರಣಾಧಿಕಾರಿಯವರು ನಿಯಮಾನುಸಾರ ವಿಚಾರಣೆ ಕೈಗೊಂಡು ಮೂರು ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚಿಸಲಾಗಿದೆ.

Share this Story:

Follow Webdunia kannada