Select Your Language

Notifications

webdunia
webdunia
webdunia
webdunia

ಗಡ್ಡ, ಮೀಸೆ ಬೆಳೆದ ಹುಡುಗಿಗೆ ಗಂಡಾಗಿ ಮಾರ್ಪಡಲು ಶಸ್ತ್ರಚಿಕಿತ್ಸೆ

ಗಡ್ಡ, ಮೀಸೆ ಬೆಳೆದ ಹುಡುಗಿಗೆ ಗಂಡಾಗಿ ಮಾರ್ಪಡಲು ಶಸ್ತ್ರಚಿಕಿತ್ಸೆ
, ಸೋಮವಾರ, 31 ಮಾರ್ಚ್ 2014 (15:30 IST)
ಬೆಂಗಳೂರು: ಈ ಹುಡುಗಿಗೆ ಹುಡುಗನಾಗಿ ಪರಿವರ್ತನೆಯಾಗುವ ಹುಚ್ಚು! ಆದರೆ ಅವಳಿಗೆ ಆ ಹುಚ್ಚು ಬರಲು ಕಾರಣವೇನೆಂದರೆ ಅವಳ ದೇಹದಲ್ಲಿ ಇದ್ದಕ್ಕಿದ್ದಂತೆ ಆಗುತ್ತಿರುವ ಬದಲಾವಣೆಗಳು. ಈಕೆಯ ಜನನಾಂಗದಲ್ಲಿ ಕೂಡ ಇದ್ದಕ್ಕಿದ್ದಂತೆ ವ್ಯತ್ಯಾಸವಾಗಿ ಲಿಂಗ ಪರಿವರ್ತನೆಗೆ ವೈದ್ಯರು ನಿರ್ಧರಿಸಿದ್ದಾರೆ. ಅಂದರೆ ಅವಳಾಗಿದ್ದ ಈ ಹುಡುಗಿ ಲಿಂಗ ಪರಿವರ್ತನೆಯಾದ ನಂತರ ಅವನಾಗಲಿದ್ದಾನೆ. ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾದ ಹುಡುಗಿಗೆ 16 ವರ್ಷಗಳು ತುಂಬಿದ ನಂತರ ಪುರುಷ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಿದವು.

ಮುಖದಲ್ಲಿ ಗಡ್ಡ, ಮೀಸೆಗಳು ಬೆಳೆಯಲಾಂಭಿಸಿತು. ಧ್ವನಿ ಪುರುಷರ ಧ್ವನಿಗೆ ಪರಿವರ್ತನೆಯಾಯಿತು. ಪುರುಷ ಹಾರ್ಮೋನುಗಳು ದೇಹದಲ್ಲಿ ಉತ್ಪತ್ತಿಯಾಗತೊಡಗಿದವು. ಊರಲ್ಲಿ ಕೆಲವರು ಅವಾಚ್ಯ ಶಬ್ದಗಳಿಂದ ಚುಡಾಯಿಸಲು ಆರಂಭಿಸಿದಾಗ ತೀವ್ರವಾಗಿ ನೊಂದ ಹುಡುಗಿ ಸ್ತ್ರೀರೋಗ ತಜ್ಞೆಯನ್ನು ಭೇಟಿಯಾದರು. ಅವರು ಹುಡುಗಿಯ ದೇಹದಲ್ಲಿ ಪುರುಷ ಹಾರ್ಮೋನುಗಳು ಉತ್ಪತ್ತಿಯಾಗುತ್ತಿದ್ದು, ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಗಂಡಾಗಿ ಪರಿವರ್ತನೆಯಾಗುವುದಕ್ಕೆ ಸೂಚಿಸಿದರು. ಆದರೆ ಶಸ್ತ್ರಚಿಕಿತ್ಸೆಗೆ ಅಗತ್ಯವಾದ ಹಣ ಕುಟುಂಬದಲ್ಲಿ ಇರಲಿಲ್ಲವಾದ್ದರಿಂದ, ಹುಡುಗಿಗೆ ನಾರಾಯಣ ಆಸ್ಪತ್ರೆ ನೆರವು ನೀಡಿ ಉಚಿತವಾಗಿ ಶಸ್ತ್ರಚಿಕಿತ್ಸೆ ನೀಡಲು ನಿರ್ಧರಿಸಿದೆ.

Share this Story:

Follow Webdunia kannada