Webdunia - Bharat's app for daily news and videos

Install App

ಕೌಟುಂಬಿಕ ಕಲಹಕ್ಕೆ ಕವರೇಜ್ ನೀಡುವ ಸುದ್ದಿ ಚಾನೆಲ್‌ಗಳು: ಸಿದ್ದರಾಮಯ್ಯ ಟೀಕೆ

Webdunia
ಶನಿವಾರ, 28 ಸೆಪ್ಟಂಬರ್ 2013 (19:33 IST)
PR
PR
ಬೆಂಗಳೂರು: ಸಮಾಜದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳು ಹೆಚ್ಚಾಗಿವೆ. ಸುದ್ದಿಪತ್ರಿಕೆಗಳು ಜನರಿಗೆ ಧ್ವನಿ ನೀಡಬೇಕು. ಆಗಲೇ ಅವುಗಳ ಕರ್ತವ್ಯವನ್ನು ನಿಜವಾಗಿ ಈಡೇರಿಸಿದಂತಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ತಿಳಿಸಿದ್ದಾರೆ. ಕನ್ನಡ ಸುದ್ದಿಪತ್ರಿಕೆ ವಾರ್ತಾಭಾರತಿಯ 11ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಇಂದು ಅನೇಕ ಸುದ್ದಿ ಮಾಧ್ಯಮಗಳು ವಿಶೇಷವಾಗಿ ಟಿವಿ ಸುದ್ದಿ ಚಾನೆಲ್‌ಗಳು ಕೌಟುಂಬಿಕ ಸಂಘರ್ಷಗಳನ್ನು ಹೆಚ್ಚು ಪ್ರಸಾರ ಮಾಡುತ್ತವೆ. ಪತಿ ಮತ್ತು ಪತ್ನಿ ಕಲಹಕ್ಕೆ ರಾಷ್ಟ್ರೀಯ ಬಿಕ್ಕಟ್ಟಿನಂತೆ ಕವರೇಜ್ ನೀಡುತ್ತವೆ ಎಂದು ಸಿದ್ದರಾಮಯ್ಯ ಹೇಳಿದರು.

ಕೋಮುವಾದಿ ರಾಜಕೀಯಕ್ಕೆ ಜಾಗ ನೀಡುವುದರ ವಿರುದ್ಧ ಅವರು ಮಾಧ್ಯಮ ಕೇಂದ್ರಗಳನ್ನು ಎಚ್ಚರಿಸಿದರು. ಮುಸ್ಲಿಂ ವ್ಯವಸ್ಥಾಪನೆಯ ಸುದ್ದಿಪತ್ರಿಕೆಯಾಗಿದ್ದರೂ ಸಮಾಜದ ಎಲ್ಲ ವರ್ಗಗಳ ನೋವಿಗೆ ಸ್ಪಂದಿಸುತ್ತಿರುವ ವಾರ್ತಾ ಭಾರತಿಯನ್ನು ಅವರು ಶ್ಲಾಘಿಸಿದರು.
ದಲಿತರಿಗೆ ಅವಕಾಶವಿಲ್ಲ- ಮುಂದಿನ ಪುಟ ನೋಡಿ

PR
PR
ಭಾರತದ ಮಾಧ್ಯಮದ ಮುಖ್ಯವಾಹಿನಿಯಲ್ಲಿ ಬೆರಳೆಣಿಕೆಯಷ್ಟು ಸಂಖ್ಯೆಯ ದಲಿತ ಪತ್ರಕರ್ತರು ಇರುವ ಬಗ್ಗೆ ಹಿಂದು ಪತ್ರಿಕೆಯ ಮಾಜಿ ಮುಖ್ಯ ಸಂಪಾದಕ ಎನ್. ರಾಮ್ ವಿಷಾದಿಸಿದರು.ಅನೇಕ ಅರ್ಹ ಮತ್ತು ವಿದ್ಯಾವಂತ ದಲಿತರಿದ್ದರೂ ಅವರಿಗೆ ಮಾಧ್ಯಮದಲ್ಲಿ ಅವಕಾಶಗಳು ಸಿಗುತ್ತಿಲ್ಲ. ಮುಸ್ಲಿಮರ ಪರಿಸ್ಥಿತಿ ಕೂಡ ಇದಕ್ಕೆ ಭಿನ್ನವಾಗಿಲ್ಲ ಎಂದು ಹೇಳಿದರು.

ಭಾರತದಲ್ಲಿ ಸುದ್ದಿ ಮಾಧ್ಯಮ ಬೆಳವಣಿಗೆ ಸಾಧಿಸಿರುವುದಕ್ಕೆ ದೇಶದ ಹಿಂದುಳಿದಿರುವಿಕೆ ಮುಖ್ಯ ಕಾರಣವಾಗಿದೆ ಎಂದು ರಾಮ್ ಹೇಳಿದರು. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸುದ್ದಿಪತ್ರಿಕೆಗಳ ಅವನತಿಗೆ ಬದಲಾಗಿ ಆನ್‌ಲೈನ್ ಪತ್ರಿಕೋದ್ಯಮದ ಬೆಳವಣಿಗೆ ಹೆಚ್ಚಿತು. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಅಂತರ್ಜಾಲದ ವೀಕ್ಷಣೆ ಶೇ. 75ರಿಂದ 80ರಷ್ಟಿದ್ದರೆ ಭಾರತದಲ್ಲಿ ಶೇ. 11ಕ್ಕಿಂತ ಕಡಿಮೆಯಿದೆ. ಈ ಹಿಂದುಳಿದಿರುವಿಕೆಯಿಂದ ಮುದ್ರಣ ಮತ್ತು ಟೆಲಿವಿಷನ್ ಮೀಡಿಯಾಕ್ಕೆ ವರವಾಗಿ ಪರಿಣಮಿಸಿದೆ ಎಂದು ರಾಮ್ ಹೇಳಿದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments