Select Your Language

Notifications

webdunia
webdunia
webdunia
webdunia

ಕೋಟ್ಯಂತರ ರೂ. ಅಕ್ರಮ ಆಸ್ತಿ ಸಂಪಾದಿಸಿದ ಮೆಸ್ಕಾಂ ಡ್ರೈವರ್

ಕೋಟ್ಯಂತರ ರೂ. ಅಕ್ರಮ ಆಸ್ತಿ ಸಂಪಾದಿಸಿದ ಮೆಸ್ಕಾಂ ಡ್ರೈವರ್
, ಮಂಗಳವಾರ, 26 ನವೆಂಬರ್ 2013 (17:03 IST)
PR
PR
ಶಿವಮೊಗ್ಗ: 47 ಲಕ್ಷ ರೂ. ಮೌಲ್ಯದ ಮನೆ, 11 ಲಕ್ಷ ರೂ. ಮೌಲ್ಯದ ಆಭರಣ, 2.5 ಲಕ್ಷ ಮೌಲ್ಯದ ಸೈಟ್, 10 ಲಕ್ಷ ರೂ. ಮೌಲ್ಯದ ಪೀಠೋಪಕರಣ,2 ಬೈಕ್, 7.5 ಲಕ್ಷ ರೂ. ಮೌಲ್ಯದ ಕಾರು-ಇವೆಲ್ಲವೂ ಮೆಸ್ಕಾಂ ಡ್ರೈವರ್ ಕ್ಲೆಮೆಂಟ್ ರಾಯನ್ ಎಂಬವರ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದಾಗ ಸಿಕ್ಕಿದ ಸಂಪತ್ತು. ಶಿವಮೊಗ್ಗದ ನಂಜಪ್ಪ ಬಡಾವಣೆಯಲ್ಲಿರುವ ಮೆಸ್ಕಾಂ ಡ್ರೈವರ್ 'ಸೇಂಟ್ ಆಂಥೋನಿ' ನಿವಾಸದ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು.

ಮೆಸ್ಕಾಂ ಡ್ರೈವರ್ ಕ್ಲೆಮಂಟ್ ರಾಯನ್ ಇಷ್ಟೆಲ್ಲಾ ಆಸ್ತಿ ಮಾಡಲು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ಉದ್ಭವಿಸಿದೆ. ಲೋಕಾಯುಕ್ತ ಎಸ್.ಪಿ. ಶ್ರೀಧರ್ ಈ ಕುರಿತು ವಿವರಣೆ ನೀಡಿದರು.

Share this Story:

Follow Webdunia kannada