Select Your Language

Notifications

webdunia
webdunia
webdunia
webdunia

ಕೇಂದ್ರದ 100 ಹಗರಣಗಳು ಮತ್ತು ರಾಜ್ಯದ 101 ತಪ್ಪುಗಳು "ಲೀಕ್‌"

ಕೇಂದ್ರದ 100 ಹಗರಣಗಳು ಮತ್ತು ರಾಜ್ಯದ 101 ತಪ್ಪುಗಳು
ಬೆಂಗಳೂರು , ಶನಿವಾರ, 31 ಆಗಸ್ಟ್ 2013 (11:25 IST)
PR
PR
ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಗರಣಗಳು ಮತ್ತು ತಪ್ಪುಗಳನ್ನು ಜನರ ಮುಂದೆ ಕೊಂಡೊಯ್ಯುವ ಪ್ರಯತ್ನವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. ಈ ಸಂಬಂಧ ರಾಜ್ಯ ಬಿಜೆಪಿ ನಾಯಕರುಗಳು "ಕೇಂದ್ರ ಸರ್ಕಾರದ 100 ಹಗರಣಗಳು ಮತ್ತು ರಾಜ್ಯ ಸರ್ಕಾರದ 100 ದಿನಗಳಲ್ಲಿ ಮಾಡಿದ 101 ತಪ್ಪುಗಳು" ಎಂಬ ಎರಡು ಪುಸ್ತಕವನ್ನು ಬಿಡುಗಡೆ ಮಾಡಿದೆ. ಈ ಮೂಲಕ ಕಾಂಗ್ರೆಸ್‌ನ ಹಗರಣಗಳನ್ನು "ಲೀಕ್‌" ಮಾಡುವ ಯತ್ನಕ್ಕೆ ಬಿಜೆಪಿ ಸಿದ್ಧವಾಗಿದೆ.

2014 ರ ಲೋಕಸಭಾ ಚುನಾವಣೆಯ ನಿಮಿತ್ತ ಇಂತಹ ನಿರ್ಧಾರವನ್ನು ಕೈಗೊಂಡಿದ್ದು ಸರ್ಕಾರದ ವಿರುದ್ಧವಾದ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಜನರಿಗೆ ಕಾಂಗ್ರೆಸ್‌ ಸರ್ಕಾರದ ದುರಾಡಳಿತದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಅಷ್ಟೆ ಅಲ್ಲ, ಜನರನ್ನು ಬಿಜೆಪಿಯತ್ತ ಸೆಳೆಯುವ ಉದ್ದೇಶವೂ ಇದರಲ್ಲಿದೆ ಎಂಬುದು ಗಮನಾರ್ಹ.

ಈ ಹಿಂದೆ ರಾಹುಲ್ ಗಾಂದಿಯವರು ಕಾರ್ಯಕರ್ತರ ಸಭೇಯಲ್ಲಿ "ವಿರೋಧ ಪಕ್ಷಗಳು ಮಾಡುವ ಹಗರಣಗಳನ್ನು ದಾಖಲೆ ಸಮೇತ ತೋರಿಸುವುದರ ಮೂಲಕ ಅವರ ಬಾಯನ್ನು ಮುಚ್ಚಬೇಕು. ಇದಕ್ಕಾಗಿ ಎಲ್ಲಾ ಕಾರ್ಯಕರ್ತರು ಪಣತೊಡಬೇಕು" ಎಂದು ಕರೆ ನೀಡಿದ್ದರು. ಆದರೆ ಇದೀಗ ಬಿಜೆಪಿಯೇ ಕಾಂಗ್ರೆಸ್‌ ವಿರುದ್ಧದ ಪುಸ್ತಕವನ್ನು ಹೊರ ತಂದಿದೆ. ಈ ಪುಸ್ತಕದಲ್ಲಿ ಆಡಳಿತದಲ್ಲಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಹಗರಣಗಳು ಮತ್ತು ತಪ್ಪುಗಳನ್ನು "ಲೀಕ್" ಮಾಡುತ್ತಿದೆ ಬಿಜೆಪಿ.

webdunia
PR
PR
ಬೆಂಗಳೂರಿನ ಬಿಜೆಪಿ ಕಛೇರಿಯಲ್ಲಿ ಈ ಪುಸ್ತಕಗಳನ್ನು ಬಿಡುಗಡೆ ಮಾಡಲಾಗಿದೆ. ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಬಿಜೆಪಿಯ ರಾಜ್ಯಾಧ್ಯಾಕ್ಷ ಪ್ರಹಲ್ಲಾದ್‌ ಜೋಷಿ, ಅನಂತಕುಮಾರ್‌, ಮಾಜಿ ಸಿಎಂ ಜಗದೀಶ್‌ ಶೇಟ್ಟರ್‌ ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿ ಪಾಲ್ಗೊಂಡಿದ್ದರು.

ಇನ್ನು ಚುನಾವಣೆ ಹತ್ತಿರವಾಗುತ್ತಿದ್ದಂತೆ ಒಂದೊಂದು ಪಕ್ಷಗಳ ಹಗರಣಗಳು, ತಪ್ಪುಗಳು ಪುಸ್ತಕ ರೂಪದಲ್ಲಿ ಲೀಕ್‌ ಆಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನು ಯಾವ ಯಾವ ಹಗರಣಗಳು ಲೀಕ್ ಆಗಲಿವೆಯೋ ಕಾದು ನೋಡಬೇಕಿದೆ.

Share this Story:

Follow Webdunia kannada