Webdunia - Bharat's app for daily news and videos

Install App

ಕೆರಳಿದ ಕಾಮ : ಹುಡುಗನನ್ನೇ ರೇಪ್ ಮಾಡಿದ ಬ್ಯಾಡ್‌ ಬಾಯ್ಸ್

Webdunia
ಸೋಮವಾರ, 31 ಮಾರ್ಚ್ 2014 (15:33 IST)
ಕಾಮಕ್ಕೆ ಕಣ್ಣಿಲ್ಲ ಅಂತಾರೆ. ಅದು ನಿಜವಿರಬೇಕು. ಯಾಕಂದ್ರೆ ಕಾಮದ ಮದವೇರಿದ ಇಬ್ಬರು ಹುಡುಗರು 8 ವರ್ಷದ ಹುಡುಗನನ್ನು ತಮ್ಮ ಕಾಮ ತೃಷೆ ನೀಗಿಸಿಕೊಳ್ಳಲು ಬಳಸಿಕೊಂಡಿರುವ ವಿಚಿತ್ರ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ರಿಜ್ವಾನ್ ಮತ್ತು ಸೋಯಿಲ್ ಎಂಬ ಇಬ್ಬರು ವ್ಯಕ್ತಿಗಳೇ ಹುಡುಗನನ್ನು ರೇಪ್ ಮಾಡಿದ ಕಾಮಾಂಧರು. ಮೈಸೂರಿನವರೇ ಆದ ಆರಿಫ್‌ ಎಂಬುವವರ ಮಗ ನಾಲ್ಕನೇ ತರಗತಿಯನ್ನು ಓದುತ್ತಿದ್ದ. ಎಂಟು ವರ್ಷದ ಬಾಲಕ ಶಾಲೆಯಿಂದ ತೆರಳುತ್ತಿರುವಾಗ ಹುಡುಗನನ್ನು ಅಡ್ಡಗಟ್ಟಿ ಏನೇನೋ ಆಸೆ ತೋರಿಸಿ ಪುಸಲಾಯಿಸಿದ್ದಾರೆ. ನಂತರ ಆ ಹುಡುಗನನ್ನು ಕರೆದುಕೊಂಡು ಮಾದಾಪುರದ ಕಾಲುವೆ ಬಳಿ ಬಂದಿದ್ದಾರೆ.

ಕಾಲುವೆ ಬಳಿಗೆ ಬಂದ ನಂತರ ಹುಡುಗನ ಮೈಮೇಲಿನ ಬಟ್ಟೆಯನ್ನು ಬಿಚ್ಚಿ ಅವನ ಮೇಲೆ ರೇಪ್‌ ಮಾಡಲು ಮುಂದಾಗಿದ್ದಾರೆ. ತಮ್ಮ ಕಾಮ ತೃಷೆಯನ್ನು ನೀಗಿಸಿಕೊಳ್ಳಲು ವಿಕೃತ ಮಸ್ಥಿತಿಯನ್ನು ತಾಳಿಬಿಟ್ಟಿದ್ದಾರೆ. ನಂತರ ಹುಡುಗನನ್ನು ಕಾಲುವೆಗೆ ನೂಕಿ ಕೊಲ್ಲಲು ಪ್ರಯತ್ನಿಸಿದ್ದಾರೆ.

ಆದರೆ ಹುಡುಗನ ಚೀರಾಟ ಕೂಗಾಟವನ್ನು ಕೇಳಿದ ಸ್ಥಳೀಯರು ಅಲ್ಲಿಗೆ ದೌಡಾಯಿಸಿ ಬಂದಿದ್ದಾರೆ. ಭಯಗೊಂಡ ಕಾಮುಕ ರಿಜ್ವಾನ್ ಮತ್ತು ಸ್ನೇಹಿತ ಅಲ್ಲಿಂದ ಓಡಿ ಹೋಗಿದ್ದಾರೆ.

ಸ್ಥಳೀಯರು ಹುಡುಗನನ್ನು ಪೋಷಕರ ವಶಕ್ಕೆ ಒಪ್ಪಿಸಿದಾಗ ಬಾಲಕ ನಡೆದ ಎಲ್ಲಾ ಸಂಗತಿಯನ್ನೂ ತನ್ನ ಪೋಷಕರಿಗೆ ತಿಳಿಸಿದ್ದಾನೆ. ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಅವಿತು ಕುಳಿತಿದ್ದ ರಿಜ್ವಾನ್‌ಗೆ ಸ್ಥಳೀಯರು ಹಿಗ್ಗಾ ಮುಗ್ಗಾ ಥಳಿಸಿ, ಉದಯಗಿರಿ ಪೋಲೀಸರಿಗೆ ಒಪ್ಪಿಸಿದ್ದಾರೆ. ದೂರು ದಾಖಲಿಸಿಕೊಂಡ ಪೋಲೀಸರು ಮತ್ತೊಬ್ಬ ಪಾಪಿಗಾಗಿ ಜಾಲ ಬೀಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ