Webdunia - Bharat's app for daily news and videos

Install App

ಕುಮಾರಸ್ವಾಮಿ ಅಲ್ಲ ಹೈ ಡೀಲ್ ಕುಮಾರಸ್ವಾಮಿ: ವಿಶ್ವನಾಥ್

Webdunia
ಸೋಮವಾರ, 26 ಡಿಸೆಂಬರ್ 2011 (12:31 IST)
PR
ಸದಾ ತನ್ನ ವ್ಯಂಗ್ಯ ಮಾತುಗಳಿಂದ ಎದುರಾಳಿಗಳನ್ನು ಚುಚ್ಚುವ ಮೈಸೂರು-ಕೊಡಗು ಕ್ಷೇತ್ರದ ಸಂಸದ ಹೆಚ್.ವಿಶ್ವನಾಥ್ ಅವರು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರನ್ನು, ಕುಮಾರಸ್ವಾಮಿ ಅಲ್ಲ ಅವರೊಬ್ಬ ಹೈಡೀಲ್ ಕುಮಾರಸ್ವಾಮಿ ಎಂದು ಕಟುವಾಗಿ ಟೀಕಿಸಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಮೈಸೂರಿನ ಬಿಷಪ್ ಹೌಸ್ ಆವರಣದಲ್ಲಿ ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಯಾವಾಗ ಚುನಾವಣೆ ನಡೆಯುತ್ತೆ ಅವಾಗಲೆಲ್ಲಾ ಡೀಲ್ ಕುದುರಿಸುವ ಜಾಯಮಾನ ಹೊಂದಿರುವ ಕುಮಾರಸ್ವಾಮಿಯವರಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆಸೋಲಾಯಿತು ಎಂದರು.

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ರೇವಣ್ಣರವರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹಾಗೂ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಮಾತು ನೀಡಿದ್ದರು. ಆದರೆ ಕುಮಾರಸ್ವಾಮಿಯವರು ಕೊನೆಗಳಿಗೆಯಲ್ಲಿ ಸದಾನಂದ ಗೌಡರೊಂದಿಗೆ ಡೀಲ್ ಕುದುರಿಸಿದ್ದರಿಂದ ಕಾಂಗ್ರೆಸ್ ಸೋಲು ಕಾಣುವಂತಾಯಿತು ಎಂದು ಟೀಕಿಸಿದರು.

ರಾಜಕೀಯ ಸಿದ್ದಾಂತವೇ ಗೊತ್ತಿಲ್ಲದ ಕುಮಾರಸ್ವಾಮಿ ಬಳ್ಳಾರಿಯಲ್ಲಿ ನಡೆದ ಉಪಚುನಾವಣೆಯಲ್ಲಿ ಶ್ರೀರಾಮುಲು ಜೊತೆಗೆ ಡೀಲ್ ಕುದುರಿಸಿದ್ದರು. ಬಿ.ಎಸ್.ಯಡಿಯೂರಪ್ಪನವರಿಗೆ ಅಧಿಕಾರ ಬಿಟ್ಟುಕೊಡದೆ ವಂಚನೆ ಮಾಡಿದಲ್ಲಿಂದ ಇಲ್ಲಿಯವರೆಗೆ ಅವರೊಬ್ಬ ರಾಜಕಾರಣಿಯಾಗಿ ನಡೆದುಕೊಳ್ಳದೆ ವ್ಯವಹಾರ ಕುದುರಿಸುವುದರಲ್ಲಿಯೇ ತೊಡಗಿಸಿಕೊಂಡಿದ್ದಾರೆ ಎಂದು ಕಟುಕಿದರು.

ಸಿಎಂ ಸದಾನಂದಗೌಡರವರ ವಿರುದ್ಧವೇ ಕಾರ್ಯಕರ್ತರನ್ನು ಎತ್ತಿ ಕಟ್ಟುತ್ತಿರುವ ಯಡಿಯೂರಪ್ಪ ಅಧಿಕಾರಕ್ಕಾಗಿ ಆಂತರಿಕ ದಂಗೆ ಎಬ್ಬಿಸುವ ಕಾರ್ಯಕ್ಕೆ ಮುಂದಾಗಿದ್ದು, ಇದು ರಾಜ್ಯದ ಅಭಿವೃದ್ದಿಗೆ ಮಾರಕವಾಗಿದೆ ಎಂದು ಹೇಳಿದರು.

ಬಿ.ಎಂ.ಲವಕುಮಾರ್, ಮೈಸೂರು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments