Select Your Language

Notifications

webdunia
webdunia
webdunia
webdunia

ಕುಟುಂಬ ರಾಜಕಾರಣದತ್ತ ಜಗದೀಶ್ ಶೆಟ್ಟರ್ ಚಿತ್ತ

ಕುಟುಂಬ ರಾಜಕಾರಣದತ್ತ ಜಗದೀಶ್ ಶೆಟ್ಟರ್ ಚಿತ್ತ
ಬೆಂಗಳೂರು , ಮಂಗಳವಾರ, 13 ಆಗಸ್ಟ್ 2013 (14:19 IST)
PR
ಮಾಜಿ ಪ್ರಧಾನಿ ದೇವೆಗೌಡರು, ಯಡಿಯೂರಪ್ಪನವರು ಕುಟುಂಬ ರಾಜಕಾರಣ ಮಾಡುತ್ತಿದ್ದಾರೆಂದು ತೆಗಳುತ್ತಲೇ ಇದೀಗ ಜಗದೀಶ ಶೆಟ್ಟರ್ ಕುಟುಂಬ ರಾಜಕಾರಣ ಮಾಡಲು ಹೆಜ್ಜೆಯಿಟ್ಟಿದೆ. ಜಗದೀಶ ಶೆಟ್ಟರ್ ಶಾಸಕರಾಗಿ, ಸಚಿವರಾಗಿ, ಮುಖ್ಯಮಂತ್ರಿಯಾಗಿ ಅಧಿಕಾರವನ್ನೂ ಅನುಭವಿಸಿದ್ದಾಯಿತು. ಇದೀಗ ಪ್ರದೀಪ ಶೆಟ್ಟರ್ ಅವರನ್ನು ರಾಜಕೀಯವಾಗಿ ಬೆಳೆಸುವ ಮೂಲಕ ಕುಟುಂಬ ರಾಜಕಾರಣದ ಲೆಕ್ಕಾಚಾರ ಮಣಿದಿದ್ದಾರೆ.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಕುಟುಂಬ ರಾಜಕಾರಣಕ್ಕೆ ಮುನ್ನುಡಿ ಬರೆಯಲು ಸೋದರ ಪ್ರದೀಪ ಶೆಟ್ಟರ್ ಅವರನ್ನು ವಿಧಾನ ಪರಿಷತ್ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಸಿದ್ಧತೆ ನಡೆದಿದೆ. ಇದರ ಹಿಂದೆ ಕುಟುಂಬ ರಾಜಕಾರಣದ ಬೀಜ ಬಿತ್ತುವ ರಾಜಕೀಯ ತಂತ್ರವೊಂದು ಅಡಗಿದೆ ಎಂಬ ಸುದ್ದಿ ಬಿಜೆಪಿ ವಲಯದಲ್ಲಿ ಹರಿದಾಡುತ್ತಿದೆ.

ಹೌದು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ ಉಪಚುನಾವಣೆಯಲ್ಲಿ ಗೆಲವು ಸಲೀಸಲ್ಲ. ಹೀಗಿರುವಾಗಲೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಸಹೋದರ ಪ್ರದೀಪ್ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಹಿಂದಿನ ಕಾರಣಗಳೇನು ಎನ್ನುವ ಪ್ರಶ್ನೆ ಉದ್ಭವವಾಗಿದ್ದು, ಅದಕ್ಕೆ ಉತ್ತರ ಹುಡುಕುವ ಕಾರ್ಯ ಬಿಜೆಪಿಯಲ್ಲಿ ನಡೆದಿದೆ.

ಪ್ರದೀಪ್ ಶೆಟ್ಟರ್ ಇದೀಗ ಉಪಚುನಾವಣೆಗೆ ಕಣಕ್ಕಿಳಿಯುತ್ತಿರುವುದು ಕೇವಲ ನಾಮಮಾತ್ರ. ಇವರ ಅಸಲಿ ಉದ್ದೇಶ ಮುಂದಿನ ವಿಧಾನಸಭೆ ಚುನಾವಣೆಯೇ ಆಗಿದೆ. ಪ್ರದೀಪ ಶೆಟ್ಟರ್ ಅವರನ್ನು ಇದೀಗ ವಿಧಾನಪರಿಷತ್ ಅಭ್ಯರ್ಥಿಯಾಗಿಸುವುದರಿಂದ ಮುಂದಿನ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಅಭ್ಯರ್ಥಿಯಾಗಿಸಲು ಯಾವುದೇ ತೊಡಕಾಗುವುದಿಲ್ಲ ಎಂಬುವುದು ಶೆಟ್ಟರ್ ಕುಟುಂಬದ ಲೆಕ್ಕಾಚಾರ.

Share this Story:

Follow Webdunia kannada