Select Your Language

Notifications

webdunia
webdunia
webdunia
webdunia

ಕಿಮ್ಸ್‌ನಲ್ಲೂ ಉಗ್ರರ ಬೇರು: ವೈದ್ಯ ವಿದ್ಯಾರ್ಥಿ ಸೆರೆ

ಬೇನಜೀರ್ ಹತ್ಯೆಯಿಂದಾಗಿ ರಾಜ್ಯಕ್ಕೆ ಬಾರದ ಆರ್‌ಡಿಎಕ್ಸ್!

ಕಿಮ್ಸ್‌ನಲ್ಲೂ ಉಗ್ರರ ಬೇರು: ವೈದ್ಯ ವಿದ್ಯಾರ್ಥಿ ಸೆರೆ
ದಾವಣಗೆರೆ , ಗುರುವಾರ, 31 ಜನವರಿ 2008 (13:50 IST)
ಉಗ್ರಗಾಮಿ ಜಾಲವು ರಾಜ್ಯದಲ್ಲಿ ಎಷ್ಟರಮಟ್ಟಿಗೆ ಬೇರೂರಿದೆ ಎಂಬುದರ ಕುರಿತಾಗಿ ಆಘಾತಕಾರಿ ಸಂಗತಿಗಳು ಹೊರಬರತೊಡಗಿದ್ದು, ಕಿಮ್ಸ್ ವೈದ್ಯಕೀಯ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿ ಮಹಮದ್ ಆಸಿಫ್, ಇತ್ತೀಚೆಗೆ ಬಂಧಿಸಲಾಗಿರುವ ಲಷ್ಕರ್-ಇ-ತೊಯ್ಬಾದ ಉಗ್ರರ ಜೊತೆ ಸಂಪರ್ಕವಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಮೂಲಕ ಕರ್ನಾಟಕದಲ್ಲಿ ಉಗ್ರರ ವ್ಯವಸ್ಥಿತ ಜಾಲವು ಅಸ್ತಿತ್ವದಲ್ಲಿರುವ ಸುದ್ದಿಗೆ ಪುಷ್ಟಿ ಸಿಕ್ಕಂತಾಗಿದೆ.
ಬೇನಜೀರ್ ಹತ್ಯೆಯಿಂದ ಪೂರೈಕೆಯಾಗದ ಆರ್‌ಡಿಎಕ್ಸ್!
  ಈ ಹಿಂದೆಯೇ ಕರ್ನಾಟಕದಲ್ಲಿ ವಿದ್ವಂಸಕ ಕೃತ್ಯ ಎಸಗುವ ಬಗ್ಗೆ ಸಂಚು ರೂಪಿಸಿದ್ದರು. ಆದರೆ ಪಾಕಿಸ್ತಾನದಲ್ಲಿ ಬೇನಜೀರ್ ಹತ್ಯೆಯಿಂದ ಆರ್‌ಡಿಎಕ್ಸ್ ಪೂರೈಕೆಯಾಗಿರಲಿಲ್ಲ ಎಂದು ತನಿಖೆ ವೇಳೆ ಬಹಿರಂಗಗೊಂಡಿದೆ.      

ರಾಯಚೂರು ಜಿಲ್ಲೆಯ ಆಸಿಫ್, ರಿವಾಲ್ವರ್ ಚಾಲನೆಯ ತರಬೇತಿ ಹೊಂದಿದ್ದ ಹಾಗೂ ಶಂಕಿತ ಉಗ್ರರಾದ ಮಹಮದ್ ಗೌಸ್ ಹಾಗೂ ಸಹಚರ ಅಸಾದುಲ್ಲಾ ಜೊತೆಯಲ್ಲಿ ಹುಬ್ಬಳ್ಳಿಯಲ್ಲಿ ಕೆಲವು ತಿಂಗಳು ವಾಸವಾಗಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಮಹಮದ್ ಗೌಸ್ ಹಾಗೂ ಅಸಾದುಲ್ಲಾನನ್ನು ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ಕೆಲವು ಮಹತ್ವದ ಸುಳಿವು ದೊರೆತಿದೆ. ಇವರು ಈ ಹಿಂದೆಯೇ ಕರ್ನಾಟಕದಲ್ಲಿ ವಿದ್ವಂಸಕ ಕೃತ್ಯ ಎಸಗುವ ಬಗ್ಗೆ ಸಂಚು ರೂಪಿಸಿದ್ದರು. ಆದರೆ ಪಾಕಿಸ್ತಾನದಲ್ಲಿ ಬೇನಜೀರ್ ಹತ್ಯೆಯಿಂದ ಆರ್‌ಡಿಎಕ್ಸ್ ಪೂರೈಕೆಯಾಗಿರಲಿಲ್ಲ ಎಂದು ತನಿಖೆ ವೇಳೆ ಬಹಿರಂಗಗೊಂಡಿದೆ.

ಈ ಸಂಬಂಧ ಉತ್ತರ ಕರ್ನಾಟಕದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಬೆಳಗಾವಿಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಉಗ್ರಗಾಮಿಗಳ ಸಂಘಟನೆ ರಾಯಚೂರು ಜಿಲ್ಲೆಯಲ್ಲಿ ವ್ಯಾಪಿಸಿರುವ ಬಗ್ಗೆ ಜನರು ಆತಂಕಗೊಂಡಿದ್ದಾರೆ.

Share this Story:

Follow Webdunia kannada