Select Your Language

Notifications

webdunia
webdunia
webdunia
webdunia

ಕಲುಷಿತ ನೀರು: ಮಹಿಳೆ ಸಾವು, ಹಲವರು ಆಸ್ಪತ್ರೆಗೆ

ಕ್ರಮ ಕೈಗೊಳ್ಳದ ಜಲಮಂಡಳಿ ವಿರುದ್ಧ ಸಾರ್ವಜನಿಕರ ಆಕ್ರೋಶ

ಕಲುಷಿತ ನೀರು: ಮಹಿಳೆ ಸಾವು, ಹಲವರು ಆಸ್ಪತ್ರೆಗೆ
ಬೆಂಗಳೂರು , ಸೋಮವಾರ, 28 ಜನವರಿ 2008 (10:39 IST)
ಕಲುಷಿತ ನೀರು ಕುಡಿದ ಪರಿಣಾಮವಾಗಿ ಭಾರತೀನಗರದ ಮಹಿಳೆಯೊಬ್ಬಳು ಮೃತಪಟ್ಟಿದ್ದು, ಇದರಿಂದ ಜಲಮಂಡಳಿಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲುಷಿತ ನೀರು ಕುಡಿದು ರೇಖಾ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಅಲ್ಲದೆ, ಕಲುಷಿತ ನೀರು ಸೇವಿಸಿ ಅಸ್ವಸ್ಥರಾದ ಸುಮಾರು 150ಕ್ಕೂ ಹೆಚ್ಚು ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದ್ದು, 6 ಮಕ್ಕಳ ಪರಿಸ್ಥಿತಿ ಗಂಭೀರ ಸ್ವರೂಪ ತಾಳಿದೆ.

ಜಲಮಂಡಳಿಯು ಕಳೆದ 20 ದಿನಗಳಿಂದಲೂ ಕಲುಷಿತ ನೀರು ಬಿಡುಗಡೆ ಮಾಡುತ್ತಿದ್ದು, ಈ ಬಗ್ಗೆ ನಿವಾಸಿಗಳು ಮನವಿಯನ್ನು ಸಲ್ಲಿಸಿದರೂ ಸ್ಪಂದಿಸಿರಲಿಲ್ಲ. ಈಗ ಮಹಿಳೆ ಸಾವು ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಸ್ಥಳೀಯರು ಜಲಮಂಡಳಿಯ ಕಚೇರಿ ಮುಂದೆ ಧರಣಿ ನಡೆಸಲು ನಿರ್ಧರಿಸಿದ್ದಾರೆ.

ಜಲಮಂಡಳಿಯು ಪೂರೈಸುತ್ತಿರುವ ನೀರಿನ ಪೈಪಿನಲ್ಲಿ ಒಳಚರಂಡಿಯ ನೀರು ಮಿಶ್ರಣವಾಗುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಪಾಲಿಕೆಯು ಸೂಕ್ತ ನಿರ್ಧಾರವನ್ನು ತಾಳದ ಪರಿಣಾಮ ಈ ಸಾವು ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Share this Story:

Follow Webdunia kannada