Select Your Language

Notifications

webdunia
webdunia
webdunia
webdunia

ಕರ್ನಾಟಕದ ಶಾಸಕರ ಅಧ್ಯಯನ ಪ್ರವಾಸ ವರದಿ ಕೆಳಗಿದೆ ಓದಿ

ಕರ್ನಾಟಕದ ಶಾಸಕರ ಅಧ್ಯಯನ ಪ್ರವಾಸ ವರದಿ ಕೆಳಗಿದೆ ಓದಿ
, ಶುಕ್ರವಾರ, 28 ಫೆಬ್ರವರಿ 2014 (16:50 IST)
PR
PR
ಅಧ್ಯಯನ ಪ್ರವಾಸಗಳು ಶಾಸಕರಿಗೆ ದೇಶದ ಇತರಭಾಗಗಳಲ್ಲಿ ಮತ್ತು ವಿದೇಶಗಳಲ್ಲಿ ಇತ್ತೀಚಿನ ಸುಧಾರಣೆಗಳ ಬಗ್ಗೆ ತಿಳಿಯುವುದಕ್ಕೆ ಕಲಿಕೆಯ ಒಂದು ಭಾಗವಾಗಿದೆ. ಇಂತಹ ಪ್ರವಾಸಗಳನ್ನು ಶಾಸಕರಿಗೆ ಮತ್ತು ಎಂಪಿಗಳಿಗೆ ಹಮ್ಮಿಕೊಳ್ಳುವುದಕ್ಕೆ ತೆರಿಗೆದಾರರ ಗಣನೀಯ ಮೊತ್ತವನ್ನು ವೆಚ್ಚಮಾಡಲಾಗುತ್ತದೆ. ಆದರೆ ಶಾಸಕರು ಅಧ್ಯಯನ ಪ್ರವಾಸದ ನೆಪದಲ್ಲಿ ಮೋಜು, ಮಸ್ತಿ ನಡೆಸಿ ಹಿಂತಿರುಗಿ ಬಂದಮೇಲೆ ನಿರಾಧಾರದ ವರದಿಗಳನ್ನು ಸಲ್ಲಿಸುವುದು ನಿಜವಾಗಲೂ ನೋವು ತರುತ್ತದೆ. 15 ಶಾಸಕರು ಮತ್ತು ಕರ್ನಾಟಕದ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಅಭಿವೃದ್ಧಿ ಸಮಿತಿಗೆ ಸೇರಿದ ಪರಿಷತ್ತಿನ 8 ಸದಸ್ಯರು ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ಫಿಜಿಗೆ 2013 ಡಿ. 12ರಿಂದ 2014 ಜನವರಿ 8ವರೆಗೆ ವಿದೇಶಪ್ರವಾಸಕ್ಕೆ ತೆರಳಿದ್ದರು. ಕೆಳಗಿನವು ನಮ್ಮ ಗೌರವಾನ್ವಿತ ಶಾಸಕರು ನೀಡಿದ ವರದಿ

* ನ್ಯೂಜಿಲೆಂಡ್ ರಸ್ತೆಗಳು ಉನ್ನತ ಗುಣಮಟ್ಟದಿಂದ ಕೂಡಿವೆ. 40ರಿಂದ 50 ಕಿಮೀ ಅಂತರದಲ್ಲಿ ಸಾರ್ವಜನಿಕ ಶೌಚಾಲಯಗಳು ಆಧುನಿಕ ವಸ್ತುಗಳಿಂದ ನಿರ್ಮಾಣವಾಗಿದೆ.
* ಡಿ. 23ರಂದು ಅವರು ಕೃಷಿ ಚೆರಿ ಫಾರಂಗೆ ಭೇಟಿ ಕೊಟ್ಟರು
* ಕ್ರಾಮ್‌ವೆಲ್ ಸಂಘಟನೆಯ ಮುಖ್ಯಸ್ಥರು ನಮ್ಮನ್ನು ಫಲೋದ್ಯಾನಕ್ಕೆ ಕರೆದುಕೊಂಡು ಹೋದರು.
* ನೀರ್ಗಲ್ಲು ಪ್ರದೇಶದ ಬಗ್ಗೆ ಮಾತನಾಡುತ್ತಾ, ನಾವು 39,000 ಅಡಿ ಎತ್ತರದ ಮೌಂಟ್ ಕ್ರೂಕ್ ಮೇಲೆ ಇಳಿದೆವು. ಅಲ್ಲಿನ ವಾತಾವರಣವನ್ನು ನೋಡುತ್ತಾ 20 ನಿಮಿಷ ಕಳೆದೆವು.

webdunia
PR
PR
*ನಾವು ನಂತರ ಫೈರ್‌ಫ್ಲೈಸ್ ಗುಹೆಗಳಿಗೆ ಹೋದೆವು. ಅದು 30 ದಶಲಕ್ಷ ವರ್ಷ ಪ್ರಾಚೀನವಾದುದು. ಗುಹೆಯಲ್ಲಿ ಯಾವುದೇ ಶಬ್ದ ಪ್ರತಿಧ್ವನಿಸುತ್ತದೆ. ಆದರೆ ಈ ಗುಹೆಯಲ್ಲಿ ಯಾವುದೇ ಪ್ರತಿಧ್ವನಿ ಬರುವುದಿಲ್ಲ ಎಂದು ನಮಗೆ ತಿಳಿಸಿದರು. ಸಮಿತಿಯ ಸದಸ್ಯ ರಾಮಕೃಷ್ಣ ಸಿದ್ದಲಿಂಗಪ್ಪ ಮಹಾಭಾರತದ ಶ್ಲೋಕ ಉಚ್ಚರಿಸಿದಾಗ ಯಾವುದೇ ಪ್ರತಿಧ್ವನಿ ಬರದಿರುವುದನ್ನು ನೋಡಿ ಶಾಸಕರು ಅಚ್ಚರಿಗೊಂಡರು. ಕರ್ನಾಟಕ ವಿಧಾನಸಭೆಯ ಶಾಸಕರು ಮತ್ತು ಎಂಪಿಗಳು ನೀಡಿದ ಕೆಲವು ಶಿಫಾರಸುಗಳು ಕೂಡ ಹಾಸ್ಯಾಸ್ಪದವಾಗಿತ್ತು.

*ನ್ಯೂಜಿಲೆಂಡ್ ಆಸ್ಟ್ರೇಲಿಯಾದಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ ಸಜ್ಜಾದ ಹೈನುಗಾರಿಕೆ ಫಾರಂಗಳಿವೆ. ನಮ್ಮ ಹೈನುಗಾರಿಕೆ ಫಾರಂಗಳಲ್ಲಿ ಆ ಗುಣಮಟ್ಟ ಇರಬೇಕು.
*ಅನೇಕ ಬುಡಕಟ್ಟು ಸಮುದಾಯಗಳಿದ್ದು, ಅವರು ಸಂಘಟನೆ ಮತ್ತು ಗುಂಪನ್ನು ಮಾಡಿದ್ದಾರೆ. ಅವರ ಶಿಕ್ಷಣಕ್ಕೆ, ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ಅಭಿವೃದ್ಧಿಗೆ ಸ್ವಂತ ನಿಧಿಯನ್ನು ದೇಶಗಳು ಹೊಂದಿರುತ್ತವೆ. ನಮ್ಮ ದೇಶದಲ್ಲೂ ಇದೇ ಮಾದರಿ ವ್ಯವಸ್ಥೆ ಇರಬೇಕು.
* ಸರ್ಕಾರ ಸ್ವಚ್ಛತೆಗೆ, ವಾಹನ ಸಂಚಾರಕ್ಕೆ, ಸ್ಥಳೀಯ ಕಟ್ಟಡ ಕಾನೂನುಗಳಿಗೆ, ವಾಸ್ತುಶಾಸ್ತ್ರ ಮತ್ತು ಇತರ ಮೂಲಸೌಲಭ್ಯಗಳಿಗೆ ಹೆಚ್ಚು ಗಮನ ನೀಡುತ್ತದೆ. ನಮ್ಮ ಸರ್ಕಾರವೂ ಈ ರೀತಿ ಗಮನ ಹರಿಸಬೇಕು.
* ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸಂಚಾರ ನಿಯಂತ್ರಣ ಮತ್ತು ಸ್ವಚ್ಛತೆಗೆ ವಿಶೇಷ ಗಮನ ನೀಡುತ್ತದೆ. ಉಲ್ಲಂಘನೆಕಾರರನ್ನು ಕೂಡ ಶಿಕ್ಷಿಸುತ್ತದೆ. ನಮ್ಮ ದೇಶದಲ್ಲೂ ಇದೇ ನೀತಿಯನ್ನು ಕಡ್ಡಾಯವಾಗಿ ಅನುಷ್ಠಾನಕ್ಕೆ ತರಬೇಕೆಂದು ಸಮಿತಿ ಶಿಫಾರಸು ಮಾಡುತ್ತದೆ.

Share this Story:

Follow Webdunia kannada