Select Your Language

Notifications

webdunia
webdunia
webdunia
webdunia

ಕರುಣಾ ಪುತ್ರಿ ಮನೆಗೆ ದಾಳಿ,ಮೂವರ ಸಾವು, ಬಸ್ಸಿಗೆ ಬೆಂಕಿ

ರಾಮ ಸೇತು ಸಮುದ್ರಂ ಯೋಜನೆ: ಬುಗಿಲೆದ್ದ ವಿವಾದ

ಕರುಣಾ ಪುತ್ರಿ ಮನೆಗೆ ದಾಳಿ,ಮೂವರ ಸಾವು, ಬಸ್ಸಿಗೆ ಬೆಂಕಿ
ಬೆಂಗಳೂರು , ಬುಧವಾರ, 19 ಸೆಪ್ಟಂಬರ್ 2007 (11:25 IST)
ಕೇಂದ್ರದ ಸೇತು ಸಮುದ್ರಂ ಯೋಜನೆಯನ್ನು ಬೆಂಬಲಿಸಿ,ರಾಮ ಹಾಗೂ ರಾಮಸೇತು ಬಗ್ಗೆ ಕೀಳಾಗಿ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ಬೆಂಗಳೂರಿನಲ್ಲಿರುವ ಪುತ್ರಿ ಸೆಲ್ವಿ ಮನೆ ಮೇಲೆ ಸಂಘ ಪರಿವಾರದ ವಿಎಚ್‌ಪಿ ಕಾರ್ಯಕರ್ತರು ಮಂಗಳವಾರ ರಾತ್ರಿ ದಾಳಿ ಮಾಡಿದ್ದು, ಪ್ರತಿಭಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಅಲ್ಲದೆ ರಾಜ್ಯ ಸಾರಿಗೆ ಸಂಸ್ಥೆ ಬಸ್ ಸಂಘ ಪರಿವಾರದ ಕಾರ್ಯಕರ್ತರ ಅಕ್ರೋಶಕ್ಕೆ ಬಲಿಯಾಗಿದೆ.

ರಾಮ ಹಾಗೂ ರಾಮಸೇತು ಕುರಿತು ಹಿಂದೂ ಧಾರ್ಮಿಕ ನಂಬಿಕೆಗೆ ಕೊಡಲಿಯೇಟು ನೀಡುವಂತಹ ಹೇಳಿಕೆ ನೀಡಿದ ಕರುಣಾನಿಧಿ ವಿರುದ್ಧ ಸುಮಾರು 50 ಮಂದಿಯಷ್ಟಿದ್ದ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಬೆಂಗಳೂರಿನಲ್ಲಿರುವ ಕರುಣಾ ಅವರ ಪುತ್ರಿ ಸೆಲ್ವಿ ಮನೆಯ ಮೇಲೆ ಕಲ್ಲು ತೂರಾಟ ನಡೆಸಿ,ಕಿಟಕಿ,ಗಾಜುಗಳನ್ನು ಒಡೆದು ಹಾಕಿದ್ದರು.

ಈ ಘಟನೆ ನಡೆದ ,ಸಂದರ್ಭದಲ್ಲಿ ಸೆಲ್ವಿ ಹಾಗೂ ಆಕೆಯ ಪತಿ ಸೆಲ್ವನ್ ಮನೆಯಲ್ಲಿ ಇರಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು.

ಕರುಣಾ ಹೇಳಿಕೆ: ರಾಮಸೇತು ವಿವಾದ ನಡೆಯುತ್ತಿರವಾಗಲೇ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರು ಸುದ್ದಿಗೋಷ್ಠಿಯಲ್ಲಿ,ಸುಮಾರು 17ಸಾವಿರ ವರ್ಷಗಳ ಹಿಂದೆ ರಾಮ ಎಂಬ ಒಬ್ಬ ವ್ಯಕ್ತಿ ಇದ್ದ,ನಾವು ಆತನನ್ನು ದೇವರು ಎಂದು ಪೂಜಿಸುತ್ತೇವೆ.ಆದರೆ ಆತ ಬದುಕಿದ್ದ ಎನ್ನುವುದಕ್ಕೆ ಪುರಾವೆ ಏನಿದೆ.ಅಲ್ಲದೇ ಅಷ್ಟು ವರ್ಷಗಳ ಹಿಂದೆ ರಾಮಸೇತು ನಿರ್ಮಿಸಲು ರಾಮ ಯಾವ ಇಂಜಿನಿಯರಿಂಗ್ ಕಾಲೇಜು ಪದವೀಧರನಾಗಿದ್ದ ಎಂಬುದಾಗಿ ತೀಕ್ಷ್ಣವಾಗಿ ಪ್ರಶ್ನಿಸಿದ್ದರು.

ತಮಿಳುನಾಡು ಬಸ್ಸಿಗೆ ಬೆಂಕಿ :
ಈ ನಡುವೆ ನಿನ್ನೆ ರಾತ್ರಿ ಬೆಂಗಳೂರಿನಿಂದ ತಮಿಳುನಾಡಿಗೆ ಹೋಗುತ್ತಿದ್ದ ಬಸ್ಸಿಗೆ ಬೆಂಕಿ ನೀಡಿ ಸುಟ್ಟು ಹಾಕಿದ ಘಟನೆ ನಡೆದು 3 ಮಂದಿ ಅಸುನೀಗಿದ್ದು ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಈ ಘಟನೆಯೂ ತಡರಾತ್ರಿ 11 ಗಂಟೆಯ ಸುಮಾರಿಗೆ ನಗರದ ಹೊರವಲಯದ ಹೊಸೂರು ರಸ್ತೆಯಲ್ಲಿ ಸಂಭವಿಸಿದೆ. ಈ ಎರಡೂ ಕೃತ್ಯಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು ಆರೋಪಿಗಳಿಗಾಗಿ ವ್ಯಾಪಕ ಬಲೆ ಬೀಸಿದ್ದಾರೆ.

ಇದರಿಂದಾಗಿ ಬೆಂಗಳೂರು ತಮಿಳುನಾಡು ಬಸ್ಸು ಸಂಚಾರ ರಾತ್ರಿ ಅಸ್ತವ್ಯಸ್ತಗೊಂಡಿತ್ತು.

Share this Story:

Follow Webdunia kannada