Select Your Language

Notifications

webdunia
webdunia
webdunia
webdunia

ಕರಾಟೆ ಕಲಿಸುವ ನೆವದಲ್ಲಿ ಕಾಮದ ಶಿಕ್ಷಣ ನೀಡಿದ ಕರಾಟೆ ಮೇಸ್ಟ್ರು

ಕರಾಟೆ ಕಲಿಸುವ ನೆವದಲ್ಲಿ ಕಾಮದ ಶಿಕ್ಷಣ ನೀಡಿದ ಕರಾಟೆ ಮೇಸ್ಟ್ರು
, ಸೋಮವಾರ, 31 ಮಾರ್ಚ್ 2014 (15:33 IST)
ಬೆಳಗಾವಿ: ಬೆಳಗಾವಿಯ ಶಾಲೆಯೊಂದರ 8ನೇ ತರಗತಿ ವಿದ್ಯಾರ್ಥಿನಿಯ ಜತೆ ಪರಾರಿಯಾದ ಕರಾಟೆ ಮೇಸ್ಟ್ರನ್ನು ಪೊಲೀಸರು ಬಂಧಿಸಿ ಕೇಸು ದಾಖಲಿಸಿದ್ದಾರೆ. 8 ತರಗತಿಯ ವಿದ್ಯಾರ್ಥಿನಿಗೆ ಕರಾಟೆ ಕಲಿಸುವ ನೆಪದಲ್ಲಿ ಮೇಸ್ಟ್ರು ಪ್ರೇಮ, ಕಾಮದ ಪಾಠ ಕಲಿಸಿ ಅವಳನ್ನು ಪುಸಲಾಯಿಸಿ ಜತೆಯಲ್ಲಿ ಪರಾರಿಯಾಗಿದ್ದರು. ತಮ್ಮ ಮಗಳು ಕಾಣೆಯಾದಾಗ, ಕರಾಟೆ ಶಿಕ್ಷಕ ಮಹೇಶ್ ಕೂಡ ನಾಪತ್ತೆಯಾಗಿರುವ ವಿಚಾರ ತಿಳಿದು ಸಂಶಯದ ಆಧಾರದ ಮೇಲೆ ಬಾಲಕಿಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಮಹೇಶ್ ಮತ್ತು ಬಾಲಕಿಯ ಮೊಬೈಲ್ ಸ್ವಿಚ್‌ಆಫ್ ಮಾಡಿ ಎಸೆದಿದ್ದರಿಂದ ಅವರ ಲೊಕೇಶನ್ ಪತ್ತೆಮಾಡುವುದು ಪೊಲೀಸರಿಗೆ ಕಷ್ಟವಾಯಿತು.

ನಂತರ ಬೇರೆ ಬೇರೆ ಪೊಲೀಸ್ ಠಾಣೆಗಳಿಗೆ ಸುದ್ದಿಮುಟ್ಟಿಸಿದ ಬಳಿಕ ಪುಣೆಯ ಲಾಡ್ಜ್‌ವೊಂದರಲ್ಲಿ ಅವರಿಬ್ಬರು ತಂಗಿರುವುದು ಪತ್ತೆಯಾಯಿತು. ನಂತರ ಪೊಲೀಸರು ಅವರಿಬ್ಬರನ್ನು ಕರೆತಂದು ಮಹೇಶನನ್ನು ಬಂಧಿಸಿದ್ದಾರೆ. ತಾನು ಬಾಲಕಿಯನ್ನು ಪ್ರೀತಿಸುತ್ತಿದ್ದು, ಇಬ್ಬರ ಒಪ್ಪಿಗೆಯ ಮೇಲೆ ಅಲ್ಲಿಗೆ ತೆರಳಿದ್ದಾಗಿ ಮಹೇಶ ತಿಳಿಸಿದ್ದ. ಆದರೆ ಅಪ್ರಾಪ್ತ ವಯಸ್ಕ ಬಾಲಕಿಯ ಒಪ್ಪಿಗೆ ಪಡೆದು ಲೈಂಗಿಕ ಕ್ರಿಯೆ ನಡೆಸಿದರೂ ಅದು ಅತ್ಯಾಚಾರಕ್ಕೆ ಸಮನಾದ್ದರಿಂದ ಪೊಲೀಸರು ಮಹೇಶನನ್ನು ಬಂಧಿಸಿ ಕೇಸು ದಾಖಲಿಸಿದ್ದಾರೆ.

Share this Story:

Follow Webdunia kannada