Select Your Language

Notifications

webdunia
webdunia
webdunia
webdunia

ಒ.ಟಿ.ಸಿ.ರಸ್ತೆಯ ಅನಧಿಕೃತ ಒತ್ತುವರಿ ತೆರವು

ಒ.ಟಿ.ಸಿ.ರಸ್ತೆಯ ಅನಧಿಕೃತ ಒತ್ತುವರಿ ತೆರವು
ಬೆಂಗಳೂರು , ಶನಿವಾರ, 14 ಜುಲೈ 2007 (12:37 IST)
ಪಾಲಿಕೆಯ ಪಶ್ಚಿಮ ವಲಯದ ಗಾಂಧಿನಗರ ವಿಭಾಗ ವ್ಯಾಪ್ತಿಯ ಒ.ಟಿ.ಸಿ. ರಸ್ತೆಯ ಇಕ್ಕೆಲಗಳಲ್ಲಿ ಪಾಲಿಕೆಯ ವಿಶೇಷ ಕಾರ್ಯಚರಣೆ ನಡೆಸಿ ರಸ್ತೆಯುದ್ದಕ್ಕೂ ಪಾದಚಾರಿ ಮಾರ್ಗಗಳಲ್ಲಿ ಅಡ್ಡವಾಗಿ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ 25 ಕ್ಕೂ ಹೆಚ್ಚು ಅಂಗಡಿಗಳ ಮುಂಗಟ್ಟುಗಳನ್ನು ತೆರವುಗೊಳಿಸಲಾಯಿತು.

ಗಾಂಧಿನಗರ ವ್ಯಾಪ್ತಿಯಲ್ಲಿ ಬರುವ ಪ್ರಮುಖ ರಸ್ತೆಗಳಲ್ಲಿ ಇಂದು ವಿಶೇಷ ಸ್ವಚ್ಛತಾ ಆಂಧೋಲನಾ ಕಾರ್ಯಚರಣೆಯನ್ನು ಕೈಗೊಂಡ ಸಂಧರ್ಬದಲ್ಲಿ ಈ ತೆರವು ಕಾರ್ಯ ನಡೆಸಲಾಗಿದೆ.

ಅರಳೇಪೇಟೆಯ ವಾರ್ಡ್ ನಂ.29 ರಲ್ಲಿ ಬರುವ ಈ ಒ.ಟಿ.ಸಿ. ರಸ್ತೆಯ ಪಾದಚಾರಿ ಮಾರ್ಗದಲ್ಲಿ ವರ್ತಕರು ತಮ್ಮ ಅಂಗಡಿಗಳ ಮುಂಭಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡದ್ದ, ಇಳಿಜಾರು ಮೆಟ್ಟಿಲು ಭಾಗಗಳು, ತಾತ್ಕಾಲಿಕ ಛಾವಣಿಗಳು, ಪೆಟ್ಟಿಗೆ ಅಂಗಡಿಗಳು ಇನ್ನಿತರ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಂಟು ಮಾಡುತ್ತಿದ್ದ ಅಡೆತಡೆಗಳನ್ನು ಇಂದು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ.

ಪಶ್ಚಿಮ ವಲಯದ ಗಾಂಧಿನಗರ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಶ್ರೀ ಪ್ರಕಾಶ್ಕುಮಾರ್ರವರ ನೇತೃತ್ವದಲ್ಲಿ ಸ್ಥಳೀಯ ಪೋಲಿಸ್ ಇಲಾಖೆಯ ಸಹಕಾರದೊಂದಿಗೆ ಈ ಕಾರ್ಯಚರಣೆ ನಡೆಸಲಾಯಿತು. ಕಾರ್ಯಚರಣೆಗೆ 40 ಮಂದಿ ಗ್ಯಾಂಗ್ಮೆನ್ಗಳನ್ನು ಹಾಗೂ ಎರಡು ಲಾರಿಗಳನ್ನು ಬಳಸಿಕೊಳ್ಳಲಾಗಿತ್ತು.

ಈ ತೆರವು ಕಾರ್ಯಚರಣೆಯಲ್ಲಿ ಸಂಗ್ರಹವಾಗಿದ್ದ, ಸುಮಾರು ನಾಲ್ಕು ಲೋಡ್ ಘನ ತ್ಯಾಜ್ಯವನ್ನು ನಗರದಿಂದ ಹೊರಗೆ ಸಾಗಿಸಲಾಯಿತು. ಇಂದಿನ ಈ ಕಾರ್ಯಚರಣೆಯಿಂದಾಗಿ ಒ.ಟಿ.ಸಿ. ರಸ್ತೆಯ ಪಾದಚಾರಿ ಮಾರ್ಗದಲ್ಲಿ ನಾಗರಿಕರ ಸುಗಮ ಸಂಚಾರಕ್ಕೆ ಉತ್ತಮ ಅವಕಾಶ ಕಲ್ಪಿಸಿಕೊಟ್ಟಂತಾಗಿದೆ.

Share this Story:

Follow Webdunia kannada