Webdunia - Bharat's app for daily news and videos

Install App

ಒಂದು ತಿಂಗಳು ಗೂಡ್ಸ್‌ ಶೆಡ್ ರಸ್ತೆ ಸಂಪೂರ್ಣ ಬಂದ್...!

Webdunia
ಭಾನುವಾರ, 29 ಮೇ 2022 (19:27 IST)
ಸಿಲಿಕಾನ್ ಸಿಟಿಯ ಯಾವುದೇ ರಸ್ತೆಗೆ ಕಾಲಿಟ್ಟರು ಸಮಸ್ಯೆ ಅನ್ನುವುದು ಸರ್ವೇ ಸಾಮಾನ್ಯವಾಗಿದೆ. ಹದಗೆಟ್ಟ ರಸ್ತೆಗಳಿಂದ ನಿತ್ಯ ಟ್ರಾಫಿಕ್ ಜಾಮ್ ಇಂತಹ ಸಮಸ್ಯೆ ಸಂಭವಿಸುತ್ತಲೇ ಇದೆ . ಇಲ್ಲಿ ರಸ್ತೆಯನ್ನ ಸಂಪೂರ್ಣವಾಗಿ 1 ವರ್ಷದಿಂದ ಬಂದ್ ಮಾಡಲಾಗಿದೆ. ಆದರೆ ಕಾಮಗಾರಿ ಮಾತ್ರ ಸರಿಯಾಗಿ ಆಗ್ತಿಲ್ಲ. ಈಗ ಮತ್ತೆ ಸೋಮವಾರದಿಂದ ಗೂಡ್ಸ್ ಶೆಡ್ ರಸ್ತೆ ಸೇರಿದಂತೆ ಸುತ್ತ-ಮುತ್ತ ರಸ್ತೆ ಕ್ಲೋಸ್ ಆಗಲಿದೆ.ಗೂಡ್ಸ್ ಶೆಡ್ ರಸ್ತೆಯ ಕಾಮಗಾರಿ ಸುಮಾರು ಒಂದು ವರ್ಷದಿಂದ ನಡೆಯುತ್ತಿದೆ. ಆದರೆ ಮುಗಿಯುವ ಲಕ್ಷಣ ಮಾತ್ರ ಕಾಣ್ತಿಲ್ಲ. ಈಗ ಮತ್ತೆ 2ನೇ ಹಂತದ ವೈಟ್‌ಟಾ ಕಾಮಗಾರಿ ನಡೆಯುತ್ತಿರುವುದರಿಂದ ಗುಡ್ಸ್ ಶೆಡ್ ರಸ್ತೆಗೆ ಸಂಪರ್ಕ ಕಲ್ಪಿಸುವ ಸುತ್ತ-ಮುತ್ತಲಿನ ರಸ್ತೆ ಕ್ಲೋಸ್ ಆಗಲಿದೆ. ಕಾಂಕ್ರಿಟ್ ರಸ್ತೆ ನಿರ್ಮಾಣವಾಗಿರುವುದರಿಂದ ನಾಳೆಯಿಂದ 30 ದಿನಗಳ ಕಾಲ ಗುಡ್ಸ್ ಶೆಡ್ ರಸ್ತೆ ಕ್ಲೋಸ್ ಆಗಲಿದೆ. ಬೇಲಿ ಮಠ ರಸ್ತೆಯಿಂದ ಮೆಜಸ್ಟಕ್ ಕಡೆ ಸಂಚಾರ ಬಂದ್ ಆಗಿದ್ದು. ಈಗ ಜನರು ಬೇರೆ ಪರ್ಯಾಯ ರಸ್ತೆಯನ್ನ ಮಾಡಬೇಕಾಗಿದೆ.
ಗೂಡ್ಸ್ ಶೆಡ್ ರಸ್ತೆ ಬದಲಿಗೆ ಪರ್ಯಾಯ ರಸ್ತೆ ವ್ಯವಸ್ಥೆ
 
-ಮೈಸೂರು ರಸ್ತೆ- ಸರ್ಸಿ ಸರ್ಕಲ್- ಜೆ.ಜೆ.ನಗರ ಜಂಕ್ಷನ್
-ಬಾಳೇಕಾಯಿ ಮಂಡಿ- ಬಿನ್ನಿಮಿಲ್ ಸರ್ಕಲ್- ಲೆಪ್ರೋಸಿ ಆಸ್ಪತ್ರೆ
-ಲುಲು ಮಾಲ್- ಓಕಳಿಪುರದ ಮೂಲಕ ಮೆಜೆಸ್ಟಿಕ್‌ಗೆ ತೆರಳಬಹುದು

 ನಿತ್ಯ ಮೈಸೂರು ರಸ್ತೆಯಿಂದ ಮೆಜಸ್ಟಿಕ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯಿಂದ ಸುತ್ತು- ಮುತ್ತ ಟ್ರಾಫಿಕ್ ಜಾಮ್ ಆಗಿದ್ದು, ಈ ಕಿರಿದಾದ ಗೂಡ್ಸ್ ಶೆಡ್ ರಸ್ತೆಯಲ್ಲಿ ಈಗ ಬೇರೆ ಟೂವೀಲರ್ ಮಾತ್ರ ತಲುಪಲು ಸಾಧ್ಯ. ಅದು ಬಿಟ್ರೆ ದೊಡ್ಡ ವಾಹನಗಳು ಈ ರಸ್ತೆಯಲ್ಲಿ ಓಡಾಡಲು ಆಗುವುದಿಲ್ಲ. ಈ ಒಂದು ರಸ್ತೆಯಿಂದ ಬಿನ್ನಿಮೀಲ್, ಮೆಜಸ್ಟಿಕ್, ಮೈಸೂರು ರೋಡ್ ಸೇರಿದಂತೆ ನಗರದ ಹಲವಡೆ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗಿದೆ. ಇನ್ನೂ ಈ ರಸ್ತೆ ಈಗಾಗಲ್ಲೇ ಕ್ಲೋಸ್ ಆಗಿ 1 ವರ್ಷವಾಗ್ತದೆ ಆದರೆ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವ ಕೆಲಸ ಆಗ್ತಿಲ್ಲ, ಕಾಮಗಾರಿ ಕೆಲಸ ಆಗ್ತಿಲ್ಲ.ಇನ್ನೂ ಇಂಜಿನಿಯರ್ ಹೆಸರಿಗೆ ಮಾತ್ರ ಇದ್ದಾರೆ. ಇಂಜಿನಿಯರ್ ಇದ್ರೂ ಯಾವುದೇ ಉಪಯೋಗವಿಲ್ಲದಂತಾಗಿದೆ. ಈ ಒಂದು ರಸ್ತೆಯಿಂದ ಸುತ್ತ- ಮತ್ತು ಗಲ್ಲಿಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿದೆ . ಆದ್ರೂ ಅಧಿಕಾರಿಗಳು ಇತ್ತಾ ಗಮನಹರಿಸುತ್ತಿಲ್ಲ. ಹೀಗಾಗಿ ಜನರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೊಹ್ಲಿ, ಅನುಷ್ಕಾ ಆಶೀರ್ವಾದ ಪಡೆದಿದ್ದ ಪ್ರೇಮಾನಂದ ಮಹಾರಾಜ್ ಬಾಯಿಂದ ಇದೆಂಥಾ ಮಾತು

ಆಪರೇಷನ್ ಸಿಂದೂರ್‌ನಿಂದ ಪಾಕ್‌ ಉಗ್ರರರು ಇನ್ನೂ ನಿದ್ರೆಯಿಲ್ಲದ ರಾತ್ರಿ ಕಳೆಯುತ್ತಿದ್ದಾರೆ: ಮೋದಿ

ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಕಿರುಕುಳ: ಸಕಲೇಶಪುರ ವ್ಯಕ್ತಿ ಅರೆಸ್ಟ್‌

ರೈತರ ಹೆಸರಿನಲ್ಲಿ ರಾಜಕೀಯ ಮಾಡುವ ವಿಜಯೇಂದ್ರ ಮೋದಿ ಮನೆ ಮುಂದೆ ಪ್ರತಿಭಟಿಸಲಿ: ಶಿವರಾಜ ತಂಗಡಗಿ

ಕಲಾಸಿಪಾಳ್ಯ ಬಿಎಂಟಿಸಿ ಬಸ್ ಸ್ಟ್ಯಾಂಡ್‌ನಲ್ಲಿ ಸ್ಪೋಟಕ ಪತ್ತೆ ಕೇಸ್: ಮೂವರು ಅರೆಸ್ಟ್

ಮುಂದಿನ ಸುದ್ದಿ
Show comments