Select Your Language

Notifications

webdunia
webdunia
webdunia
webdunia

ಏರಿದ ಬೆಲೆಗಳ ನಡುವೆ ಸಡಗರದ ದೀಪಾವಳಿ

ಏರಿದ ಬೆಲೆಗಳ ನಡುವೆ ಸಡಗರದ ದೀಪಾವಳಿ
ಬೆಂಗಳೂರು , ಶುಕ್ರವಾರ, 9 ನವೆಂಬರ್ 2007 (19:08 IST)
ಕತ್ತಲಿಗೆ ಸಂಕೇತವಾದ ನರಕಾಸುರನನ್ನು ಸಂಹಾರ ಮಾಡಿ, ಅವನ ಕಾರಾಗೃಹದಲ್ಲಿದ್ದ ಹದಿನಾರು ಸಾವಿರ ಕುಮಾರಿಯರಿಗೆ ಬೆಳಕು ತೋರಿಸಿದ ದಿನವನ್ನೇ ನರಕ ಚತುರ್ದಶಿಯಾಗಿ ಆಚರಿಸುತ್ತಿದ್ದು, ಬೆಳಕಿನ ಹಬ್ಬವನ್ನು ಕರ್ನಾಟಕದಾದ್ಯಂತ ಜನರು ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ.

ಈ ಹಬ್ಬದಲ್ಲಿ ಪಟಾಕಿ ಸಿಡಿತದಿಂದ ಆಗುವ ಅನಾಹುತ ಹಾಗೂ ವಾತಾವರಣ ಮಾಲಿನ್ಯವನ್ನು ಗಮನದಲ್ಲಿಟ್ಟು ಜನರಿಗೆ ಅರಿವು ಮೂಡಿಸುವ ಕಾರ್ಯ ನಡೆದಿದೆ.

ಕೆಲ ಟಿವಿ ವಾಹಿನಿಗಳು ಪಟಾಕಿ ಸುಡುವ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ನುರಿತ ತಜ್ಞರಿಂದ ಅನಾಹುತ ನಡೆದಾಗ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿವೆ.

ಕೆಲ ಪತ್ರಿಕೆಗಳಲ್ಲಿ ಪಟಾಕಿ ಸುಡುವ ಮುನ್ನ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಪಟಾಕಿಗಳ ಬಗ್ಗೆ ಹೆಚ್ಚು ವಿದ್ಯಾವಂತರು ಒಲವು ತೋರುತ್ತಿಲ್ಲ.

ಇದೆಲ್ಲಾ ಒಂದು ಕಡೆ ಇದ್ದರೆ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಭರಾಟೆಗೆ ಏನೂ ಕಡಿಮೆ ಇಲ್ಲ. ಗಗನಕ್ಕೇರಿದ ಹೂವು ಹಣ್ಣು, ದಿನಸಿ ಬೆಲೆಗಳಿಂದ ಸ್ವಲ್ಪ ಮಟ್ಟಿಗೆ ವಿಚಲಿತರಾದರೂ ಜನರು ಖರೀದಿಗೆ ಹಿಂಜರಿಯುತ್ತಿಲ್ಲ.

ಎಲ್ಲ ದೇವಾಲಯಗಳಲ್ಲೂ ದೇವರನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಹಾಗೇ ವಿಶೇಷವಾಗಿ ಪೂಜೆಗಳು ನಡೆಯುತ್ತಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಗಳಿಗೆ ತೆರಲಿ ಪೂಜೆ ಸಲ್ಲಿಸುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಉಗ್ರರ ಚಟುವಟಿಕೆಗಳಿ ತಡೆ ಒಡ್ಡುವ ನಿಟ್ಟಿನಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ನಿಗಾ ವಹಿಸಲಾಗಿದೆ.

Share this Story:

Follow Webdunia kannada