Select Your Language

Notifications

webdunia
webdunia
webdunia
webdunia

ಎಟಿಎಂ ಹಲ್ಲೆ : ಆಂಧ್ರದಲ್ಲಿ ಸಿಕ್ಕಿಬಿದ್ದ ಶಂಕಿತ ಕೊಲೆಪಾತಕಿ.

ಎಟಿಎಂ ಹಲ್ಲೆ : ಆಂಧ್ರದಲ್ಲಿ ಸಿಕ್ಕಿಬಿದ್ದ ಶಂಕಿತ ಕೊಲೆಪಾತಕಿ.
ಧರ್ಮಾವರಂ , ಭಾನುವಾರ, 24 ನವೆಂಬರ್ 2013 (16:06 IST)
PR
PR
ವರದಿ : ಶೇಖರ್‌ ಪೂಜಾರಿ
ನವೆಂಬರ್‌ 19 ರಂದು ಕಾರ್ಪೋರೇಷನ್ ವೃತ್ತದ ಬಳಿ ಇರುವ ಕಾರ್ಪೋರೇಷನ್‌ ಎಟಿಎಂನಲ್ಲಿ ಜ್ಯೋತಿ ಉದಯ್‌ ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಶಂಕಿತ ಆರೋಪಿಯನ್ನು ಆಂಧ್ರಪ್ರದೇಶದ ಧರ್ಮಾವರಂನಲ್ಲಿ ಬಂಧಿಸಲಾಗಿದೆ. ಶಂಕಿತ ಆರೋಪಿ ಇದೀಗ ಧರ್ಮಾವರಂ ಪೋಲೀಸರ ಅತಿಥಿಯಾಗಿದ್ದು, ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

ಸಿಕ್ಕಿರುವ ವ್ಯಕ್ತಿ ಅವನೇನಾ?

ಆಂಧ್ರದ ಧರ್ಮಾವರಂ ಪ್ರದೇಶದಲ್ಲಿ ಪೋಲೀಸರಿಗೆ ಸಿಕ್ಕಿಬಿದ್ದ ಆರೋಪಿಯು, ಬೆಂಗಳೂರು ಎಟಿಎಂ ಕೊಲೆ ಪ್ರಕರಣದ ಆರೋಪಿಯನ್ನೇ ಹೋಲುತ್ತಿದ್ದಾನೆ. ಅಷ್ಟೆ ಅಲ್ಲ, ಈತ ಈ ಹಿಂದೆಯೂ ಕೂಡ ಇಂತಹ ಎಟಿಎಂ ಕ್ರೈಂನಲ್ಲಿ ಭಾಗಿಯಾಗಿದ್ದು, ಆಂದ್ರದ ಕದಿರಿಯಲ್ಲಿ ಪ್ರಮೀಳಾ ಎಂಬುವವರ ಮೇಲೆ ಕೂಡ ಇಂತಹುದ್ದೇ ರೀತಿಯಲ್ಲಿ ಹಲ್ಲೆ ಮಾಡಿದ್ದ ಎಂಬುದು ತಿಳಿದು ಬಂದಿದೆ.

ಆಂಧ್ರದ ಸಿಸಿಟಿವಿಯಲ್ಲಿ ಕೊಲೆಪಾತಕನ ಚಹರೆ ಪತ್ತೆ..! ಮುಂದಿನ ಪುಟದಲ್ಲಿ ಇನ್ನಷ್ಟು ಮಾಹಿತಿ...

webdunia
PR
PR
ಆಂಧ್ರದ ಸಿಸಿಟಿವಿಯಲ್ಲಿ ಕೊಲೆಪಾತಕನ ಚಹರೆ ಪತ್ತೆ..!

ಪ್ರಮೀಳಾ ಅವರನ್ನು ಕೊಲೆ ಮಾಡಿದ ನಂತರ ಅವರ ಎಟಿಎಂನಿಂದ ಆಂಧ್ರದ ಕದಿರಿ ಎಟಿಎಂ ನಲ್ಲಿ ಹಣ ಡ್ರಾ ಮಾಡಿಕೊಂಡಿದ್ದಾನೆ. ಈ ವೇಳೆ ವ್ಯಕ್ತಿಯ ಚಹರೆ ಸಿಸಿಟಿವಿಯಲ್ಲಿ ರೆಕಾರ್ಡ್‌ ಆಗಿದೆ.

ಒಂದೇ ಶರ್ಟ್‌ - ಆಂಧ್ರ ಮತ್ತು ಬೆಂಗಳೂರು ಎಟಿಎಂ ಸಿಸಿಟಿವಿಯ ದೃಶ್ಯಾವಳಿಗಳು ಇದೀಗ ಲಭ್ಯವಾಗಿದ್ದು, ಎರಡೂ ಪ್ರಕರಣಗಳಲ್ಲಿ ಒಂದೇ ರೀತಿಯ ಶರ್ಟ್‌ ಧರಿಸಿದ್ದ. ಅದೇ ನೀಲಿ ಅಂಗಿ...

ಒಂದೆ ರೀತಿ ಪ್ಯಾಂಟ್‌ - ಆಂಧ್ರ ಮತ್ತು ಬೆಂಗಳೂರು ಎಟಿಎಂ ಸಿಸಿಟಿವಿಯ ದೃಶ್ಯಾವಳಿಗಳ ಪ್ರಕಾರ ಎರಡರಲ್ಲಿಯೂ ಒಂದೇ ರೀತಿಯ ಪ್ಯಾಂಟ್‌ ಅನ್ನು ಧರಿಸಿದ್ದು, ಎರಡೂ ದೃಶ್ಯಗಳಲ್ಲಿ ಸಿಮೆಂಟ್ ಬಣ್ಣದ ಪ್ಯಾಂಟನ್ನು ಆರೋಪಿ ಹಾಕಿಕೊಂಡಿದ್ದಾನೆ.

ಅದೇ ಬ್ಯಾಗ್ - ಆಂಧ್ರ ಮತ್ತು ಬೆಂಗಳೂರು ಎಟಿಎಂ ಹಲ್ಲೆ ಸಂದರ್ಭದಲ್ಲಿ ಒಂದೇ ರೀತಿಯ ಬ್ಯಾಗ್ ಉಪಯೋಗಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೀಗಾಗಿ ಆಂಧ್ರದ ಕದಿರಿ ಪ್ರದೇಶದ ಎಟಿಎಂನಲ್ಲಿ ಪ್ರಮೀಳಾ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿಯೇ ಬೆಂಗಳೂರಿಗೆ ಬಂದು ಜ್ಯೋತಿ ಉದಯ್‌ ಅವರ ಮೇಲೆ ನವೆಂಬರ್‌ 19 ರಂದು ಹಲ್ಲೆ ನಡೆಸಿದ್ದಾನೆ.

ಕೊಲ್ಲೋದೇ ಇವನ ಬಿಸಿನೆಸ್ಸು..! ಇನ್ನಷ್ಟು ಮಾಹಿತಿ ಮುಂದಿನ ಪುಟದಲ್ಲಿ...

webdunia
PR
PR
ಕೊಲ್ಲೋದೇ ಇವನ ಬಿಸಿನೆಸ್ಸು..!

ಆಂಧ್ರಪ್ರದೇಶದ ಕದಿರಿಯಲ್ಲಿ ಇರುವಂತಹ ಎಟಿಎಂನಲ್ಲಿ ಪ್ರಮೀಳಾ ಎಂಬುವವರ ಮೇಲೆ ಈ ಹಂತಕ ನವೆಂಬರ್‌ 10 ರಂದು ಹಲ್ಲೆ ಮಾಡಿ ಆಕೆಯಿಂದ ಹಣ ಲೂಟಿ ಮಾಡಿಕೊಂಡಿದ್ದ. ಅಷ್ಟೆ ಅಲ್ಲ, ಆಕೆಯಿಂದ ಎಟಿಎಂ ಹಾಗೂ ಅದರ ಪಿನ್ ಕೋಡ್‌ ಅನ್ನು ಕದ್ದುಕೊಂಡು ಹೋಗಿದ್ದ. ಎಟಿಎಂ ಹಂತಕನ ದಾಳಿಗೆ ನಲುಗಿದ ಪ್ರಮೀಳಾ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಸಾವನ್ನಪ್ಪಿದ್ದರು.

ಇದಾದ ನಂತರ ನವೆಂಬರ್‌ 11 ರಂದು ಕದಿರಿಯ ಎಸ್‌ಬಿಎಂ ಎಟಿಎಂ ನಲ್ಲಿ ಈತ 4 ಸಾವಿರ ರೂಪಾಯಿಗಳನ್ನು ಡ್ರಾ ಮಾಡಿಕೊಂಡಿದ್ದ. ನಂತರ 12 ರಂದು ಮತ್ತೆ 4 ಸಾವಿರ ರೂಪಾಯಿಗಳನ್ನು ಡ್ರಾ ಮಾಡಿಕೊಂಡಿದ್ದ. ಆದ್ರೆ ಮತ್ತೊಮ್ಮೆ 15 ಸಾವಿರ ರೂಪಾಯಿಗಳನ್ನು ಡ್ರಾ ಮಾಡಿಕೊಳ್ಳಲು ಪ್ರಯತ್ನಿಸಿದಾಗ ಅದು ಸಾಧ್ಯವಾಗಲಿಲ್ಲ. ಅಷ್ಟರಲ್ಲಾಗಲೇ ಎಟಿಎಂ ಅನ್ನು ಬ್ಲಾಕ್ ಮಾಡಲಾಗಿತ್ತು.

ಹೀಗಾಗಿ ಹಣಕ್ಕಾಗಿ ಪರಿತಪಿಸುತ್ತಿದ್ದ ಹಂತಕ ಮತ್ತೆ ಸ್ಕೆಚ್‌ ರೂಪಿಸಿದ್ದ. ನವೆಂಬರ್‌ 19 ಬೆಂಗಳೂರಿನ ಕಾರ್ಪೋರೇಷನ್‌ ಸರ್ಕಲ್ ಬಳಿ ಇರುವಂತಹ ಕಾರ್ಪೋರೇಷನ್ ಎಟಿಎಂಗೆ ನುಗ್ಗಿ ಜ್ಯೋತಿ ಉದಯ್‌ ಅವರನ್ನು ಹಣಕ್ಕಾಗಿ ಪೀಡಿಸಿದ್ದಾನೆ. ಅವರು ಹಣ ನೀಡಲು ನಿರಾಕರಿಸಿದಾಗ ಜ್ಯೋತಿಯವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ, ಎಸ್ಕೇಪ್ ಆಗಿದ್ದ. ಆದ್ರೆ ನೆನ್ನೆ ಆಂಧ್ರ ಪೋಲೀಸರ ಕೈಗೆ ಸಿಕ್ಕಿದ್ದಾನೆ.

ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲೇ ಎಟಿಎಂಗೆ ನುಗ್ಗಿ ದರೋಡೆ ಮಾಡಿದ್ದ..? ಇನ್ನಷ್ಟು ಮಾಹಿತಿ ಮುಂದಿನ ಪುಟದಲ್ಲಿ..

webdunia
PR
PR
ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲೇ ಎಟಿಎಂಗೆ ನುಗ್ಗಿ ದರೋಡೆ ಮಾಡಿದ್ದ..?

ಇನ್ನೊಂದು ಆಘತಕಾರಿ ಅಂಶ ಇದೀಗ ಬೆಳಜಕಿಗೆ ಬಂದಿದ್ದು, ಈ ಆರೋಪಿ ಈ ಹಿಂದೆ ಕೂಡ ಬೆಂಗಳೂರಿನ ಯುಟಿಲಿಟಿ ಬಿಲ್ಡಿಂಗ್ ಸಮೀಪದ ಎಟಿಎಂಗೆ ನುಗ್ಗಿ ಚಾಂದಿನಿ ಎಂಬುವವರ ಮೇಲೆ ಹಲ್ಲೆ ನಡೆಸಿ ಹಣ ಕಿತ್ತುಕೊಂಡು ಪರಾರಿಯಾಗಿದ್ದ ಎಂದು ಹೇಳಲಾಗುತ್ತಿದೆ. ಆದ್ರೆ ಚಾಂದಿನಿಯವರು ಈ ವಿಷಯವನ್ನು ಹೊರ ಹಾಕಿಯೇ ಇರಲಿಲ್ಲ ಎಂಬುದು ತಿಳಿದುಬಂದಿದೆ. ಪ್ರಾಣ ಬೆದರಿಕೆ ಇದ್ದ ಹಿನ್ನೆಲೆಯಲ್ಲಿ ಚಾಂದಿನಿಯವರು ಕೊಲೆಪಾತಕನ ಬಗ್ಗೆ ಯಾವುದೇ ಸುಳಿವು ನೀಡಲಿಲ್ಲ. ಅಷ್ಟೆ ಅಲ್ಲ, ಹಣ ಲೂಟಿಯಾದ ಬಗ್ಗೆ ಅಥವ ಆಕೆಯ ಮೇಲೆ ಹಲ್ಲೆಯಾದ ಬಗ್ಗೆ ಯಾವುದೇ ರೀತಿಯ ದೂರು ನೀಡಲೇ ಇಲ್ಲ..

ಎಟಿಎಂಗೆ ಆಗಮಿಸುವ ಒಂಟಿ ಮಹಿಳೆಯರೇ ಇವನ ಟಾರ್ಗೆಟ್‌...! ಇನ್ನಷ್ಟು ಮಾಹಿತಿ ಮುಂದಿನ ಪುಟದಲ್ಲಿ..

webdunia
PR
PR
ಎಟಿಎಂಗೆ ಆಗಮಿಸುವ ಒಂಟಿ ಮಹಿಳೆಯರೇ ಇವನ ಟಾರ್ಗೆಟ್‌...!

ಸಿಕ್ಕಿರುವ ಶಂಕಿತ ವ್ಯಕ್ತಿಯು ಪುರುಷರ ಮೇಲೆ ದಾಳಿ ಮಾಡಿದ ಯಾವುದೇ ಉದಾಹರಣೆಗಳಿಲ್ಲ. ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡುವ ಈತ ಒಂಟಿಯಾಗಿ ಎಟಿಎಂಗೆ ಬರುವ ಮಹಿಳೆಯರ ಮೇಲೆ ಹಲ್ಲೆ ನಡೆಸಿ ಹಣ ಲೂಟಿ ಮಾಡಿ ಪರಾರಿಯಾಗುತ್ತಿದ್ದ.

೧. ಆಂಧ್ರಪ್ರದೇಶದ ಕದಿರಿಯಲ್ಲಿನ ಎಟಿಎಂಗೆ ನುಗ್ಗಿದ ಈ ಕೊಲೆ ಪಾತಕಿ ಪ್ರಮಿಳಾ ಎಂಬುವವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ.
೨. ಬೆಂಗಳೂರಿನ ಕಾರ್ಪೋರೇಷನ್ ಎಟಿಎಂಗೆ ನುಗ್ಗಿದ ನರಹಂತಕ ಜ್ಯೋತಿ ಉದಯ್‌ ಅವರ ಮೇಲೆ ಹಲ್ಲೆ ನಡೆಸಿದ್ದ.
೩. ಅಷ್ಟೆ ಅಲ್ಲ, ಕೆಲ ದಿನಗಳ ಹಿಂದೆ ಬೆಂಗಳೂರಿನ ಯುಟಿಲಿಟಿ ಬಿಲ್ಡಿಂಗ್ ಸಮೀಪದ ಎಟಿಎಂ ಒಂದಕ್ಕೆ ನುಗ್ಗಿ ಚಾಂದಿನಿ ಎಂಬುವವರ ಮೇಲೆ ಹಲ್ಲೆ ನಡೆಸಿ ಹಣ ಲೂಟಿ ಮಾಡಿದ್ದ.

ಹೀಗೆ ಈತನ ಹಿಟ್ ಲಿಸ್ಟ್‌ ನೋಡಿದ್ರೆ ಎಲ್ಲರೂ ಮಹಿಳೆಯರೇ ಆಗಿದ್ದಾರೆ. ಕೇವಲ ಮಹಿಳೆಯರನ್ನೇ ಈತ ಟಾರ್ಗೆಟ್ ಮಾಡುತ್ತಿದ್ದು, ಒಂಟಿ ಮಹಿಳೆಯರು ಎಟಿಎಂಗೆ ಬರುವುದನ್ನು ಹೊಂಚು ಹಾಕಿ ಕಾಯುತ್ತಾನೆ. ಒಂಟಿ ಮಹಿಳೆಯರು ಎಟಿಎಂಗೆ ಬಂದಾಗ ಈತನೂ ಕೂಡ ಅವರ ಹಿಂದೇಯೇ ಎಟಿಎಂ ಒಳಗೆ ನುಗ್ಗಿ ಮಾರಕಾಸ್ತ್ರಗಳನ್ನು ತೋರಿಸಿ ದುಡ್ಡು ಕೊಡು ಎಂದು ಪೀಡಿಸುತ್ತಾನೆ. ಸ್ವಲ್ಪ ಮಿಸುಕಾಡಿದ್ರೂ, ಸ್ವಲ್ಪ ಕಿರುಚಾಡಿದ್ರೂ, ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ರೂ, ಈತ ಮಚ್ಚು ಬೀಸುತ್ತಾನೆ. ಆಂಧ್ರದ ಪ್ರಮೀಳಾ ಈತನಿಂದ ಕೊಲೆಯಾಗಿ ಹೋಗಿದ್ದಾಳೆ. ಇನ್ನೊಂದೆಡೆ ಜ್ಯೋತಿ ಉದಯ್‌ ಅದೃಷ್ಟವಶಾತ್ ಬದುಕಿಬಿಟ್ಟಿದ್ದಾರೆ..!

ಇನ್ನಷ್ಟು ಮಾಹಿತಿ ಮುಂದಿನ ಪುಟದಲ್ಲಿ..

webdunia
PR
PR
ಆಂಧ್ರದ ಧಾರ್ಮಾವರಂ ಪ್ರದೇಶದಲ್ಲಿ ಪೋಲೀಸರ ಕೈಗೆ ಸಿಕ್ಕಿರುವ ಕೊಲೆಗಾರ ಹಾಗೂ ಬೆಂಗಳೂರಿನ ಎಟಿಎಂನಲ್ಲಿ ಜ್ಯೋತಿ ಉದಯ್ ಅವರ ಮೇಲೆ ಹಲ್ಲೆ ನಡೆಸಿದ ಹಂತಕ ಇಬ್ಬರೂ ಒಬ್ಬರೇನಾ ಎಂಬುದರ ಬಗ್ಗೆ ಪೋಲೀಸರು ಇನ್ನೂ ಅಧಿಕೃತವಾಗಿ ಸ್ಪಷ್ಟಪಡಿಸಿಲ್ಲ. ಆದ್ರೆ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದ್ರೆ ಇವನು ಅವನೇ ಎಂದು ಹೇಳಲಾಗುತ್ತಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಪೋಲೀಸರಿಂದ ಅಧಿಕೃತ ಮಾಹಿತಿ ಲಭ್ಯವಾಗಲಿದೆ.

Share this Story:

Follow Webdunia kannada