Select Your Language

Notifications

webdunia
webdunia
webdunia
webdunia

ಎಂಡೋಸಲ್ಫಾನ್ ಸಂತ್ರಸ್ತರಿಗೆ ಮಾಸಿಕ ಪರಿಹಾರ: ಹೈಕೋರ್ಟ್ ಆದೇಶ

ಎಂಡೋಸಲ್ಫಾನ್ ಸಂತ್ರಸ್ತರಿಗೆ ಮಾಸಿಕ ಪರಿಹಾರ: ಹೈಕೋರ್ಟ್ ಆದೇಶ
ಬೆಂಗಳೂರು , ಸೋಮವಾರ, 27 ಜನವರಿ 2014 (16:51 IST)
PR
PR
ಎಂಡೋಸಲ್ಫಾನ್ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ರಾಜ್ಯಸರ್ಕಾರಕ್ಕೆ ಹೈಕೋರ್ಟ್ ಆದೇಶ ನೀಡಿದೆ.ಎಂಡೋಸಲ್ಫಾನ್ ಔಷಧಿ ಸಿಂಪಡಣೆಯಿಂದ ಅನೇಕ ಜನರಿಗೆ ಅಂಗವೈಕಲ್ಯ ಉಂಟಾಗಿದ್ದು, ಶೇ. 25ರಿಂದ 60ರಷ್ಟು ವೈಕಲ್ಯ ಉಂಟಾದವರಿಗೆ 1500 ರೂ. ಮಾಸಿಕ ಪರಿಹಾರ ಶೇ. 70ರಿಂದ ಶೇ. 100 ವೈಕಲ್ಯ ಉಂಟಾದವರಿಗೆ ಶೇ. 3000 ರೂ. ವೇತನ ನೀಡುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ ಪರಿಹಾರ ಹಣವನ್ನು ಜಮಾ ಮಾಡಬೇಕೆಂದು ಹೈಕೋರ್ಟ್ ಸೂಚಿಸಿದೆ.

ಸ್ವಯಂಪ್ರೇರಿತ ಪಿಐಎಲ್ ವಿಚಾರಣೆ ಮಾಡಿ ಹೈಕೋರ್ಟ್ ಮೇಲಿನ ಆದೇಶ ನೀಡಿದೆ. ಮಧ್ಯಂತರ ಪರಿಹಾರವನ್ನು. ಪ್ರತಿ ತಿಂಗಳು ನೀಡುವಂತೆ ಕೋರ್ಟ್ ಆದೇಶಿಸಿದೆ. ಮಾರ್ಚ್ 1ರಿಂದಲೇ ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ.

Share this Story:

Follow Webdunia kannada