Webdunia - Bharat's app for daily news and videos

Install App

ಈ ಮೇಲ್ ಹ್ಯಾಕ್: ವ್ಯಾಪಾರಿಗೆ 2.34 ಕೋಟಿ ರೂ. ವಂಚನೆ

Webdunia
ಮಂಗಳವಾರ, 26 ನವೆಂಬರ್ 2013 (17:58 IST)
PR
PR
ಪ್ರಕಾಶಂ: ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ತಂಬಾಕು ಬೆಳೆಗಾರನಿಗೆ 2.34 ಕೋಟಿ ರೂ. ವಂಚನೆ ಮಾಡಿದ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿಗಳು ವ್ಯಾಪಾರಿಯ ಇ ಮೇಲ್ ಖಾತೆಯನ್ನು ಹ್ಯಾಕ್ ಮಾಡಿ ಹಣವನ್ನು ವಂಚಿಸಿದ್ದಾರೆ. ತಂಬಾಕು ವ್ಯಾಪಾರಿ ಬೆಲ್ಲಂ ಕೋಟಯ್ಯ ಬಲ್ಗೇರಿಯಾದ ಕಂಪನಿಯೊಂದಕ್ಕೆ 2 ಕೋಟಿ 30 ಲಕ್ಷ ರೂ. ತಂಬಾಕನ್ನು ಕಳಿಸಿದ್ದರು. ಈ ಸಂಬಂಧ ಅವರ ಅಕೌಂಟಿಗೆ ಹಣ ಜಮೆಯಾಗಬೇಕಿತ್ತು. ಆದರೆ ವ್ಯಾಪಾರಿಯ ಮ್ಯಾನೇಜರ್ ಈ ಮೇಲ್ ಅಕೌಂಟ್ ಹ್ಯಾಕ್ ಮಾಡಿದ ಬಲ್ಗೇರಿಯಾದ ಹ್ಯಾಕರ್‌ಗಳು ಆಮದುದಾರ ಕಂಪನಿಯ ಜತೆ ಸಂಪರ್ಕಿಸಿ, ಅಮೆರಿಕ ಮತ್ತು ಟರ್ಕಿಯಲ್ಲಿರುವ ಬ್ಯಾಂಕ್ ಖಾತೆಗಳಿಗೆ ಹಣ ಹಾಕಬೇಕೆಂದು ತಿಳಿಸಿದಂತೆ ಕಂಪನಿ ಹಣವನ್ನು ಆ ಖಾತೆಗಳಿಗೆ ಹಾಕಿತು.

ಹಣ ವ್ಯಾಪಾರಿಗೆ ತಲುಪದ ಬಗ್ಗೆ ಬಲ್ಗೇರಿಯಾದ ಕಂಪನಿಯನ್ನು ವಿಚಾರಿಸಿದಾಗ ಈಗಾಗಲೇ ಹಾಕಿದ್ದೇವೆ ಎಂದು ಹೇಳಿದರು .ನಂತರ ಇದು ಬಲ್ಗೇರಿಯಾದ ಹ್ಯಾಕರ್ಸ್ ಕುತಂತ್ರವೆಂದು ತಿಳಿದುಬಂತು. ಸೈಬರ್ ಕ್ರೈಮ್ ಪೊಲೀಸರು ಇದನ್ನು ತನಿಖೆ ನಡೆಸುತ್ತಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments