Select Your Language

Notifications

webdunia
webdunia
webdunia
webdunia

'ಆಧಾರ್‌ನಿಂದ ಕೋಟ್ಯಂತರ ರೂ. ಸಾರ್ವಜನಿಕರ ಹಣ ಪೋಲು

'ಆಧಾರ್‌ನಿಂದ ಕೋಟ್ಯಂತರ ರೂ. ಸಾರ್ವಜನಿಕರ ಹಣ ಪೋಲು
, ಗುರುವಾರ, 23 ಜನವರಿ 2014 (19:12 IST)
PR
PR
ಬೆಂಗಳೂರು: ಆಧಾರ್ ಯೋಜನೆ ದೊಡ್ಡ ಪ್ರಮಾಣದ ಹಗರಣ ಎಂದು ಬೆಂಗಳೂರಲ್ಲಿ ನಿವೃತ್ತ ಮಿಲಿಟರಿ ಅಧಿಕಾರಿ ಥಾಮಸ್ , ನಿವೃತ್ತ ನ್ಯಾಯಮೂರ್ತಿ ಪುಟ್ಟಸ್ವಾಮಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. 20 ಕೋಟಿ ವಿದೇಶಿಯರಿಗೆ ಕಾನೂನುಬಾಹಿರವಾಗಿ ಆಧಾರ್ ನೀಡಲಾಗಿದೆ. ಬಾಂಗ್ಲಾ ನಿವಾಸಿಗಳಿಗೂ ಆಧಾರ್ ಕಾರ್ಡ್ ನೀಡಲಾಗಿದೆ. ಸಂವಿಧಾನದ 21ನೇ ನಿಯಮದಡಿ ಗೌಪ್ಯತೆ ಸ್ವತಂತ್ರ ಕೊಟ್ಟಿದೆ. ಇದು ಭಯೋತ್ಪಾದಕರಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಬಾಂಗ್ಲಾ ದೇಶಿಯರು ಭಾರತದ ಪೂರ್ವ ರಾಜ್ಯಗಳಲ್ಲಿ ನೆಲೆ ಕಂಡಿದ್ದಾರೆ. ಆಧಾರ್ ಯೋಜನೆ ದೊಡ್ಡ ಪ್ರಮಾಣದ ಹಗರಣ. ಕೋಟ್ಯಂತರ ರೂ. ಸಾರ್ವಜನಿಕ ಹಣ ಪೋಲಾಗಿದೆ.

ಎಂದು ನಿವೃತ್ತ ನ್ಯಾಯಮೂರ್ತಿ ಥಾಮಸ್ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಜನರಿಗೆ ಸಂಶಯ ಬರಬಾರದು ಎಂಬ ಕಾರಣಕ್ಕೆ ನಿಲೇಕಣಿ ಅವರನ್ನು ಇಟ್ಟುಕೊಂಡಿದೆ. ವಾಮಮಾರ್ಗದಿಂದ ಆಧಾರ್ ಕಾರ್ಡ್ ಸೃಷ್ಟಿ ಮಾಡಿದ್ದಾರೆ. ಆಧಾರ್ ಕಾರ್ಡ್ ಹಗರಣಗಳ ಅಕ್ಷಯ ಪಾತ್ರೆ ಎಂದು ಸೋಮಶೇಖರ್ ಹೇಳಿದ್ದಾರೆ.

Share this Story:

Follow Webdunia kannada