Select Your Language

Notifications

webdunia
webdunia
webdunia
webdunia

ಆಟೋ ಚಾಲಕರ ಮೇಲೆ ಹಲ್ಲೆಗೆ ಮುಂದಾದ ಸಚಿವ ಅಭಯ್ ಚಂದ್ರಜೈನ್

ಆಟೋ ಚಾಲಕರ ಮೇಲೆ ಹಲ್ಲೆಗೆ ಮುಂದಾದ ಸಚಿವ ಅಭಯ್ ಚಂದ್ರಜೈನ್
, ಸೋಮವಾರ, 30 ಡಿಸೆಂಬರ್ 2013 (14:25 IST)
PR
PR
ಮುಲ್ಕಿ: ಮುಲ್ಕಿಯಲ್ಲಿ ಒಳರಸ್ತೆಯೊಂದು ತೀರಾ ಕೆಟ್ಟುಹೋಗಿದ್ದು, ಆ ರಸ್ತೆ ದುರಸ್ತಿಗೆ ಆಗ್ರಹಿಸಿ ಆಟೋ ಚಾಲಕರು ಪ್ರತಿಭಟನೆ ನಡೆಸುವಾಗ ಸಚಿವ ಅಭಯ್ ಚಂದ್ರಜೈನ್ ರಿಕ್ಷಾ ಚಾಲಕನೊಬ್ಬನ ಮೇಲೆ ಹಲ್ಲೆಗೆ ಯತ್ನಿಸಿದರು ಎಂದು ದೂರಲಾಗಿದೆ. ಮಂಗಳೂರಿನ ಮುಲ್ಕಿ ನಾಡಕಚೇರಿ ಬಳಿ ಆಟೋ ಚಾಲಕರು ಪ್ರತಿಭಟನೆ ನಡೆಸುತ್ತಿದ್ದಾಗ ಮುಲ್ಕಿಗೆ ವಿಶೇಷ ತಹಸೀಲ್ದಾರ್ ನೇಮಕದ ಸಭೆಗೆ ಸಚಿವ ಅಭಯ ಚಂದ್ರ ಜೈನ್ ಆಗಮಿಸಿದ್ದರು. ಆದರೆ ಆಟೋ ಚಾಲಕರ ಪ್ರತಿಭಟನೆ ಕಡೆ ಲಕ್ಷ್ಯ ಕೊಡದೇ ಮನವಿ ಸ್ವೀಕರಿಸಲಿಲ್ಲ ಎಂದು ರೊಚ್ಚಿಗೆದ್ದ ಆಟೋ ಚಾಲಕರು ಸಚಿವರ ವಿರುದ್ಧ ಘೋಷಣೆ ಕೂಗಿದರು.

ಕೂಡಲೇ ಅಭಯ ಚಂದ್ರ ಜೈನ್ ರಿಕ್ಷಾ ಚಾಲಕರ ಮೇಲೆ ಹಲ್ಲೆಗೆ ಮುಂದಾದರು ಎಂದು ತಿಳಿದುಬಂದಿದೆ. ಕಳೆದ ಹಲವಾರು ವರ್ಷಗಳಿಂದ ರಸ್ತೆ ದುಸ್ಥಿತಿಗೆ ತಲುಪಿದ್ದರೂ ಆ ಕಡೆ ಗಮನವಹಿಸಿರಲಿಲ್ಲ. ಆದರೆ ಆ ಸಂದರ್ಭದಲ್ಲಿ ತಹಸೀಲ್ದಾರ್ ಕಚೇರಿಗೆ ಆಗಮಿಸಿದ ಅಭಯ್ ಚಂದ್ರ ಜೈನ್ ಆಟೋ ಚಾಲಕರ ಮನವಿ ಪತ್ರವನ್ನು ಸ್ವೀಕರಿಸದಿರುವುದು ಚಾಲಕರನ್ನು ಕೆರಳಿಸಿತು. ಆಗ ಚಾಲಕರು ಮತ್ತು ಸಚಿವರ ನಡುವೆ ಮಾತಿನ ಚಕಮಕಿ ನಡೆದಾಗ ಸಚಿವರು ಹಲ್ಲೆಗೆ ಮುಂದಾದರು ಎಂದು ತಿಳಿದುಬಂದಿದೆ.


Share this Story:

Follow Webdunia kannada