Webdunia - Bharat's app for daily news and videos

Install App

ಆಂಧ್ರ ಬಸ್‌ ದುರಂತ : ಅಚ್ಚರಿ ರೀತಿಯಲ್ಲಿ ಅಲ್ಲಾ ನನ್ನ ಜಾನ್ ಉಳಿಸಿಬಿಟ್ಟ.

Webdunia
ಗುರುವಾರ, 31 ಅಕ್ಟೋಬರ್ 2013 (11:04 IST)
PR
PR
" ಅಲ್ಲಾ ನನ್ನನ್ನು ಕಾಪಾಡಿಬಿಟ್ಟ.. ಅಚ್ಚರಿಯ ರೀತಿಯಲ್ಲಿ ನನ್ನ ಜಾನ್ವ್‌ ಉಳಿಸಿಬಿಟ್ಟ.. ನಾನು ಬಚಾವ್ ಆದೆ. ಆದ್ರೆ ನೋಡ ನೋಡುತ್ತಿದ್ದಂತೆಯೇ ಬಸ್‌ನಲ್ಲಿದ್ದವರು ಬೆಂಕಿಯಲ್ಲಿ ಹೊತ್ತಿ ಉರಿದುಹೋದರು.. ಸುಟ್ಟು ಕರಕಲಾದರು. ಕಿರುಚಲೂ ಕೂಡ ಸಮಯ ನೀಡದಂತೆ ಬೆಂಕಿ ಅವರನ್ನು ಸಾವಿನ ಮಡಿಲಿಗೆ ಎಳೆದುಕೊಂಡಿತ್ತು. ನಿದ್ರೆ ಮಾಡುತ್ತಿದ್ದವರು ಚಿರ ನಿದ್ರೆಗೆ ಜಾರಿ ಬಿಟ್ಟರು" ಇದು ಆಂಧ್ರ ಬಸ್‌ ದುರಂತದಿಂದ ಬದುಕಿ ಬಂದಿರುವ ಸಯೀದ್‌ ಹಫೀಜ್‌ ಹೇಳುವ ಮಾತುಗಳು.

ನೆನ್ನೆ ಬೆಳ್ಳಂ ಬೆಳಿಗ್ಗೆ ಸಂಭವಿಸಿದ ಬೆಂಗಳೂರು - ಹೈದ್ರಾಬಾದ್ ಬೆಂಕಿ ಅನಾಹುತದಿಂದಾಗಿ 44 ಜನರು ಸಜೀವವಾಗಿ ದಹನಗೊಂಡಿದ್ದರು. ಆದ್ರೆ ಅದರಲ್ಲಿ 5 ಜನರು ಅಚ್ಚರಿಯ ರೀತಿಯಲ್ಲಿ ಬದುಕುಳಿದಿದ್ದರು. ಅದರಲ್ಲಿ ಸಯೀದ್‌ ಹಫೀಜ್‌ ಕೂಡ ಒಬ್ಬರು.

ಮುಂದಿನ ಪುಟದಲ್ಲಿದ ಸಾವು ನರ್ತನ ಮಾಡಿದ ಭಯಾನಕ ಸುದ್ದಿ...

PR
PR
ಸಯೀದ್‌ ಹಫೀಜ್‌ ಪ್ರತಿ ದಿನ ಮುಂಜಾನೆ ನಮಾಜ್‌ ಮಾಡ್ತಾ ಇದ್ರು. ಹೀಗಾಗಿ ಪ್ರತಿ ದಿನ ಮುಂಜಾನೆ 5 ಗಂಟೆಗೆ ಅಲಾರಾಂ ಇಟ್ಟಿದ್ದರು. ಪ್ರತಿ ನಿತ್ಯದಂತೆ ನೆನ್ನೆ ಕೂಡ ಬಸ್ಸಿನಲ್ಲಿ ಅಲಾರಂ ಹೊಡೆದಕೊಂಡಿದೆ. ಅಲಾರಾಂನಿಂದಾಗಿ ಸಯೀದ್‌ಗೆ ಎಚ್ಚರಗೊಂಡಿದೆ. ಇದಾದ ಕೆಲವೇ ಕ್ಷಣಗಳಲ್ಲಿ ನಿರ್ವಾಕ ಜೋರಾಗಿ ಕಿರುಚಿದನಂತೆ " ಬಸ್‌ಗೆ ಬೆಂಕಿ ಹೊತ್ತಿದೆ.. ಓಡಿ ಹೋಗಿ.. ಓಡಿ ಹೋಗಿ" ಅಂತ.. ಸಯೀದ್‌ ಎಚ್ಚರವಾಗಿದ್ದರಿಂದ ನಿರ್ವಾಹಕನ ಮಾತು ಕೇಳಿ ಬಸ್‌ನಿಂದ ಜಂಪ್ ಮಾಡಿದ್ದಾರೆ.

ಜಂಪ್ ಮಾಡಿದ ಕೆಲವೇ ಕ್ಷಣಗಳಲ್ಲಿ ಬಸ್‌ ಧಗ ಧಗನೆ ಹೊತ್ತಿ ಉರಿಯುತ್ತಿತ್ತು. ಬಿದ್ದ ರಭಸಕ್ಕೆ ನನ್ನ ತಲೆಗೆ ಸ್ವಲ್ಪ ಏಟಾಗಿತ್ತು. ಆದ್ರೆ ಜೀವಕ್ಕೆ ಯಾವುದೇ ಅಪಾಯವಾಗಲಿಲ್ಲ. ಆದ್ರೆ ನನ್ನ ಕಣ್ಣು ಎದುರಲ್ಲಿಯೇ ಎಲ್ಲರೂ ಸುಟ್ಟು ಬೂದಿಯಾಗಿಬಿಟ್ಟರು. ಕಂಡಕ್ಟರ್‌ ಎಚ್ಚರಿಕೆ ನೀಡದಿದ್ದರೆ, ನಾನೂ ಕೂಡ ಸುಟ್ಟು ಹೋಗುತ್ತಿದ್ದೆ ಎಂದು ಸಾವಿನ ವಿಮರ್ಶೆ ಮಾಡಿದರು ಸೈಯೀದ್‌ ಹಫೀಜ್‌

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments