Select Your Language

Notifications

webdunia
webdunia
webdunia
webdunia

ಆಂಧ್ರ ಬಸ್‌ ದುರಂತ : ಅಚ್ಚರಿ ರೀತಿಯಲ್ಲಿ ಅಲ್ಲಾ ನನ್ನ ಜಾನ್ ಉಳಿಸಿಬಿಟ್ಟ.

ಆಂಧ್ರ ಬಸ್‌ ದುರಂತ : ಅಚ್ಚರಿ ರೀತಿಯಲ್ಲಿ ಅಲ್ಲಾ ನನ್ನ ಜಾನ್ ಉಳಿಸಿಬಿಟ್ಟ.
ಬೆಂಗಳೂರು , ಗುರುವಾರ, 31 ಅಕ್ಟೋಬರ್ 2013 (11:04 IST)
PR
PR
"ಅಲ್ಲಾ ನನ್ನನ್ನು ಕಾಪಾಡಿಬಿಟ್ಟ.. ಅಚ್ಚರಿಯ ರೀತಿಯಲ್ಲಿ ನನ್ನ ಜಾನ್ವ್‌ ಉಳಿಸಿಬಿಟ್ಟ.. ನಾನು ಬಚಾವ್ ಆದೆ. ಆದ್ರೆ ನೋಡ ನೋಡುತ್ತಿದ್ದಂತೆಯೇ ಬಸ್‌ನಲ್ಲಿದ್ದವರು ಬೆಂಕಿಯಲ್ಲಿ ಹೊತ್ತಿ ಉರಿದುಹೋದರು.. ಸುಟ್ಟು ಕರಕಲಾದರು. ಕಿರುಚಲೂ ಕೂಡ ಸಮಯ ನೀಡದಂತೆ ಬೆಂಕಿ ಅವರನ್ನು ಸಾವಿನ ಮಡಿಲಿಗೆ ಎಳೆದುಕೊಂಡಿತ್ತು. ನಿದ್ರೆ ಮಾಡುತ್ತಿದ್ದವರು ಚಿರ ನಿದ್ರೆಗೆ ಜಾರಿ ಬಿಟ್ಟರು" ಇದು ಆಂಧ್ರ ಬಸ್‌ ದುರಂತದಿಂದ ಬದುಕಿ ಬಂದಿರುವ ಸಯೀದ್‌ ಹಫೀಜ್‌ ಹೇಳುವ ಮಾತುಗಳು.

ನೆನ್ನೆ ಬೆಳ್ಳಂ ಬೆಳಿಗ್ಗೆ ಸಂಭವಿಸಿದ ಬೆಂಗಳೂರು - ಹೈದ್ರಾಬಾದ್ ಬೆಂಕಿ ಅನಾಹುತದಿಂದಾಗಿ 44 ಜನರು ಸಜೀವವಾಗಿ ದಹನಗೊಂಡಿದ್ದರು. ಆದ್ರೆ ಅದರಲ್ಲಿ 5 ಜನರು ಅಚ್ಚರಿಯ ರೀತಿಯಲ್ಲಿ ಬದುಕುಳಿದಿದ್ದರು. ಅದರಲ್ಲಿ ಸಯೀದ್‌ ಹಫೀಜ್‌ ಕೂಡ ಒಬ್ಬರು.

ಮುಂದಿನ ಪುಟದಲ್ಲಿದ ಸಾವು ನರ್ತನ ಮಾಡಿದ ಭಯಾನಕ ಸುದ್ದಿ...

webdunia
PR
PR
ಸಯೀದ್‌ ಹಫೀಜ್‌ ಪ್ರತಿ ದಿನ ಮುಂಜಾನೆ ನಮಾಜ್‌ ಮಾಡ್ತಾ ಇದ್ರು. ಹೀಗಾಗಿ ಪ್ರತಿ ದಿನ ಮುಂಜಾನೆ 5 ಗಂಟೆಗೆ ಅಲಾರಾಂ ಇಟ್ಟಿದ್ದರು. ಪ್ರತಿ ನಿತ್ಯದಂತೆ ನೆನ್ನೆ ಕೂಡ ಬಸ್ಸಿನಲ್ಲಿ ಅಲಾರಂ ಹೊಡೆದಕೊಂಡಿದೆ. ಅಲಾರಾಂನಿಂದಾಗಿ ಸಯೀದ್‌ಗೆ ಎಚ್ಚರಗೊಂಡಿದೆ. ಇದಾದ ಕೆಲವೇ ಕ್ಷಣಗಳಲ್ಲಿ ನಿರ್ವಾಕ ಜೋರಾಗಿ ಕಿರುಚಿದನಂತೆ " ಬಸ್‌ಗೆ ಬೆಂಕಿ ಹೊತ್ತಿದೆ.. ಓಡಿ ಹೋಗಿ.. ಓಡಿ ಹೋಗಿ" ಅಂತ.. ಸಯೀದ್‌ ಎಚ್ಚರವಾಗಿದ್ದರಿಂದ ನಿರ್ವಾಹಕನ ಮಾತು ಕೇಳಿ ಬಸ್‌ನಿಂದ ಜಂಪ್ ಮಾಡಿದ್ದಾರೆ.

ಜಂಪ್ ಮಾಡಿದ ಕೆಲವೇ ಕ್ಷಣಗಳಲ್ಲಿ ಬಸ್‌ ಧಗ ಧಗನೆ ಹೊತ್ತಿ ಉರಿಯುತ್ತಿತ್ತು. ಬಿದ್ದ ರಭಸಕ್ಕೆ ನನ್ನ ತಲೆಗೆ ಸ್ವಲ್ಪ ಏಟಾಗಿತ್ತು. ಆದ್ರೆ ಜೀವಕ್ಕೆ ಯಾವುದೇ ಅಪಾಯವಾಗಲಿಲ್ಲ. ಆದ್ರೆ ನನ್ನ ಕಣ್ಣು ಎದುರಲ್ಲಿಯೇ ಎಲ್ಲರೂ ಸುಟ್ಟು ಬೂದಿಯಾಗಿಬಿಟ್ಟರು. ಕಂಡಕ್ಟರ್‌ ಎಚ್ಚರಿಕೆ ನೀಡದಿದ್ದರೆ, ನಾನೂ ಕೂಡ ಸುಟ್ಟು ಹೋಗುತ್ತಿದ್ದೆ ಎಂದು ಸಾವಿನ ವಿಮರ್ಶೆ ಮಾಡಿದರು ಸೈಯೀದ್‌ ಹಫೀಜ್‌

Share this Story:

Follow Webdunia kannada