Select Your Language

Notifications

webdunia
webdunia
webdunia
webdunia

ಅಪ್ರಾಪ್ತ ವಯಸ್ಕ ಬಾಲಕಿ ಮೇಲೆ ಗ್ಯಾಂಗ್ ರೇಪ್

ಅಪ್ರಾಪ್ತ ವಯಸ್ಕ ಬಾಲಕಿ ಮೇಲೆ ಗ್ಯಾಂಗ್ ರೇಪ್
, ಮಂಗಳವಾರ, 1 ಏಪ್ರಿಲ್ 2014 (11:15 IST)
ಧಾರವಾಡ: ಅಪ್ರಾಪ್ತ ವಯಸ್ಕ ಬಾಲಕಿ ಮೇಲೆ ಹೊಸ ವರ್ಷದ ಮೊದಲ ದಿನವೇ ಸಾಮೂಹಿಕ ಅತ್ಯಾಚಾರವೆಸಗಿದ ಬರ್ಬರ ಕೃತ್ಯ ವರದಿಯಾಗಿದೆ. ಕುಂದಗೋಳ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಬಾಲಕಿ ಕುಂದಗೋಳ ತಾಲೂಕಿನ ಹಿರೇನರ್ಸಿ ಗ್ರಾಮದ ಅಜ್ಜನ ಮನೆಗೆ ಬಂದಿದ್ದಾಗ ಸೋದರ ಸಂಬಂಧಿ ಪರಶುರಾಮ್ ಬಸವಂತಪ್ಪ ಅಲ್ಲಿಗೆ ಬಂದು ಅಪ್ಪನಿಗೇನೋ ಆಗಿದೆ ಎಂದು ಹೇಳಿದಾಗ ಅವಳನ್ನು ನಂಬಿಸಿ ಕರೆದುಕೊಂಡು ಹೋಗಿದ್ದನು.

ನಂತರ ಪರೆಶುರಾಮ್ ಬಾಲಕಿಯನ್ನು ಹಾವೇರಿಗೆ ಕರೆದೊಯ್ದು ಇನ್ನಿಬ್ಬರ ಜತೆ ಸೇರಿ ಬರ್ಬರವಾಗಿ ಸಾಮೂಹಿಕ ಅತ್ಯಾಚಾರವೆಸಗಿದ. ಡಿ. 31ರಂದು ಬಾಲಕಿಯನ್ನು ಕರೆದೊಯ್ದಿದ್ದ ಪರಶುರಾಮ್ ಜನವರಿ 1ರ ಹೊಸವರ್ಷದ ದಿನದಂದೇ ಪೈಶಾಚಿಕ ಕೃತ್ಯವನ್ನು ಎಸಗಿ ಕಾಮುಕತನವನ್ನು ಪ್ರದರ್ಶಿಸಿದ್ದ.

Share this Story:

Follow Webdunia kannada