Select Your Language

Notifications

webdunia
webdunia
webdunia
webdunia

ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗೆ ಗೂಸಾ

ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗೆ ಗೂಸಾ
, ಸೋಮವಾರ, 31 ಮಾರ್ಚ್ 2014 (15:35 IST)
ದಾವಣಗೆರೆ: ದಾವಣಗೆರೆಯ ಭರತ್ ಕಾಲೋನಿಯಲ್ಲಿ ಅಪ್ರಾಪ ವಯಸ್ಕ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಕಾಮುಕನಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ವರದಿಯಾಗಿದೆ. 40 ವರ್ಷ ವಯಸ್ಸಿನ ಲೋಕೇಶಪ್ಪ ಎಂಬವನು ಬಾಲಕಿಗೆ 300 ರೂ. ಆಮಿಷವೊಡ್ಡಿ ಅತ್ಯಾಚಾರಕ್ಕೆ ಮುಂದಾದ. ವಿರೋಧಿಸಿದ ಬಾಲಕಿಗೆ ಥಳಿಸಿ ಅತ್ಯಾಚಾರ ನಡೆಸಿದ್ದಾನೆಂದು ತಿಳಿದುಬಂದಿದೆ.

ಈ ಸುದ್ದಿ ಗ್ರಾಮಸ್ಥರಿಗೆ ತಿಳಿಯುತ್ತಿದ್ದಂತೆ ಲೋಕೇಶಪ್ಪನನ್ನು ಹಿಡಿದು ಗ್ರಾಮಸ್ಥರು ಚೆನ್ನಾಗಿ ಗೂಸಾ ನೀಡಿದರು. ಬಾಲಕಿಯ ಕುಟುಂಬದವರು ಮತ್ತು ಕೆಲವು ಹೆಂಗಸರು ಕೂಡ ಆರೋಪಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದರು.

Share this Story:

Follow Webdunia kannada