Select Your Language

Notifications

webdunia
webdunia
webdunia
webdunia

ಅನುದಾನಕ್ಕೆ ಒತ್ತಾಯಿಸಿ ಕ್ರಿಮಿನಾಶಕ ಸೇವಿಸಿದ ಆರು ಮಂದಿ ಶಿಕ್ಷಕರು

ಅನುದಾನಕ್ಕೆ ಒತ್ತಾಯಿಸಿ ಕ್ರಿಮಿನಾಶಕ ಸೇವಿಸಿದ ಆರು ಮಂದಿ ಶಿಕ್ಷಕರು
, ಗುರುವಾರ, 26 ಡಿಸೆಂಬರ್ 2013 (18:02 IST)
PR
PR
ಬೆಂಗಳೂರು: ಫ್ರೀಡಂ ಪಾರ್ಕ್‌ನಲ್ಲಿ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಶಿಕ್ಷಕರ ಪೈಕಿ ಆರು ಮಂದಿ ಶಿಕ್ಷಕರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಈ ಆರು ಜನ ಶಿಕ್ಷಕರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆಯೆಂದು ಹೇಳಲಾಗಿದೆ. ಗಂಭೀರ ಸ್ಥಿತಿಗೆ ತಲುಪಿದ ಇಬ್ಬರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಧರಣಿ ನಡೆಸುತ್ತಿದ್ದವರ ಕೂಗು ಜನಪ್ರತಿನಿಧಿಗಳ ಕಿವಿಗೆ ಬಿದ್ದಿರಲಿಲ್ಲ. ಇವರು ರಾಜ್ಯದಲ್ಲಿರುವ ಅನುದಾನರಹಿತ ಶಾಲೆಗಳ ಶಿಕ್ಷಕರಾಗಿದ್ದು, ಶಾಲೆಯ ಅನುದಾನಕ್ಕೆ ಒತ್ತಾಯಿಸಿ ಧರಣಿ ನಡೆಸುತ್ತಿದ್ದರು. ಬೆಳಗಾಂ ಅಧಿವೇಶನದಲ್ಲಿ ಕೂಡ ಸಿಎಂ ಭರವಸೆ ನೀಡಿ ಎರಡು ದಿನಗಳಲ್ಲಿ ಇತ್ಯರ್ಥ ಮಾಡುವುದಾಗಿ ಹೇಳಿದ್ದರು. ತಮ್ಮ ಬೇಡಿಕೆಗಳಿಗೆ ಸರ್ಕಾರ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲವೆಂದು ನೊಂದು, ಜೀವನದಲ್ಲಿ ಸಾಕಷ್ಟು ಬೇಸರವಾಗಿದೆ. ತಮಗೆ ಬದುಕುವುದಕ್ಕೆ ಯಾವುದೇ ಉತ್ಸಾಹ ಉಳಿದಿಲ್ಲ.

ಆದ್ದರಿಂದ ನಮಗೆ ದಯಾಮರಣ ಕೋರುತ್ತೇವೆ ಎಂದು ಅರ್ಜಿಯನ್ನು ಸಿದ್ದಪಡಿಸಿದ್ದರು. ಆದರೆ ಅದಕ್ಕೂ ಮೊದಲೇ ಈಗ ನಾಲ್ವರು ಕ್ರಿಮಿನಾಶಕ ಸೇವಿಸಿದ್ದಾರೆ. ಅವರನ್ನು ಹೊಯ್ಸಳ ಜೀಪ್‌ನಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Share this Story:

Follow Webdunia kannada