Select Your Language

Notifications

webdunia
webdunia
webdunia
webdunia

ಅಧಿಕಾರ ಹಸ್ತಾಂತರ ಬಿಕ್ಕಟ್ಟು, ಬಿಜಿಪಿ ಸಚಿವರ ರಾಜೀನಾಮೆ ?

ಅಧಿಕಾರ ಹಸ್ತಾಂತರ ಬಿಕ್ಕಟ್ಟು, ಬಿಜಿಪಿ ಸಚಿವರ ರಾಜೀನಾಮೆ ?
ಬೆಂಗಳೂರು , ಶನಿವಾರ, 29 ಸೆಪ್ಟಂಬರ್ 2007 (10:54 IST)
NRB
ಒಂದು ಪಕ್ಷ ಜೆಡಿಎಸ್ ಅಧಿಕಾರ ಹಸ್ತಾಂತರಕ್ಕೆ ಮುಂದಾಗದೇ ಇದ್ದಲ್ಲಿ ಪಕ್ಷದ ಎಲ್ಲ ಸಚಿವರು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಹೆಸರು ಹೇಳಲಿಚ್ಚಿಸದ ಪಕ್ಷದ ಮುಖಂಡರು ಮಾಹಿತಿ ನೀಡಿದ್ದಾರೆ. ಅಕ್ಟೋಬರ್ 1ರಂದು ನಡೆಯಲಿರುವ ಪಕ್ಷದ ಸಚಿವರ ಸಭೆಯಲ್ಲಿ ಉಪಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರು ಪಕ್ಷದ ಎಲ್ಲ ಸಚಿವರ ರಾಜೀನಾಮೆ ಪತ್ರಗಳನ್ನು ಪಡೆಯಲಿದ್ದಾರೆ.

ಮಿತ್ರ ಪಕ್ಷ ಜೆಡಿಎಸ್ ಅಧಿಕಾರ ಹಸ್ತಾಂತರವನ್ನು ಸ್ಥಗಿತಗೊಳಿಸಿರುವ ಕಾರಣ ರಾಜ್ಯ ಬಿಜೆಪಿ ಘಟಕ ತನ್ನ ಪಕ್ಷದ ಸಚಿವರ ಸಭೆಯನ್ನು ಅಕ್ಚೋಬರ್ 1 ರಂದು ಕರೆದಿದ್ದು, ರಾಜ್ಯ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿ, ಮುಂದಿನ ನಿರ್ಧಾರ ತೆಗೆದುಕೊಳ್ಳುವ ನಿಟ್ಟಿನಲ್ಲಿ ಗಂಭೀರ ಚರ್ಚೆ ನಡೆಸಲಿದೆ.

2006ರಲ್ಲಿ ಮಾಡಿಕೊಂಡ ಒಪ್ಪಂದದ ಪ್ರಕಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಿತ್ರಪಕ್ಷ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಬೇಕು. ಇದೇ ಸಂದರ್ಭದಲ್ಲಿ ಭಾರತೀಯ ಜನತಾಪಕ್ಷ, ಪಕ್ಷದ ಎಲ್ಲ ಪದಾದಿಕಾರಿಗಳ ಸಭೆ ಕರೆದಿದ್ದು, ರಾಜಕೀಯ ಬಿಕ್ಕಟ್ಟು ಉಂಟಾದಲ್ಲಿ ಮುಂದೆ ಯಾವ ನಿಲುವು ತಳೆಯಬೇಕು ಎಂಬುದರ ಕುರಿತು ಚರ್ಚೆ ಮಾಡಲಿದೆ.

ಸಚಿವ ಬಿ. ಶ್ರೀರಾಮುಲು ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಮಾಡಿರುವ ಕೊಲೆ ಯತ್ನ ದೂರಿನಿಂದ ವಿವಾದ ಬುಗಿಲೆದ್ದಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಷ್ಟಪಟ್ಟಲ್ಲಿ ಯಾವುದೇ ಸಚಿವರನ್ನು ಕೈಬಿಡಬಹುದು. ಪಕ್ಷ ಇಂತಹ ವಿಚಾರದಲ್ಲಿ ತಲೆತೂರಿಸಿಲ್ಲ. ಪಕ್ಷ ಕೂಡ ಶ್ರೀರಾಮುಲು ವಿರುದ್ಧ ಕ್ರಮ ತೆಗೆದುಕೊಳ್ಳಲಿದೆ. ಎಂದು ಘೋಷಿಸಿದ್ದು. ಅಕ್ಟೋಬರ್ 3 ರ ನಂತರ ತಾನು ಉಪಮುಖ್ಯಮಂತ್ರಿ ಪದವಿಯಲ್ಲಿ ಮುಂದುವರಿಯುವುದಿಲ್ಲ ಎಂದು ಯಡಿಯೂರಪ್ಪ ಘೋಷಿಸಿದ್ದಾರೆ.

Share this Story:

Follow Webdunia kannada