Select Your Language

Notifications

webdunia
webdunia
webdunia
webdunia

ಅಕ್ರಮದಲ್ಲಿ ವೀಕ್ಷಕರೂ ಶಾಮೀಲು: ಡಿಕೆಶಿ

ಅಕ್ರಮದಲ್ಲಿ ವೀಕ್ಷಕರೂ ಶಾಮೀಲು: ಡಿಕೆಶಿ
ಬೆಂಗಳೂರು , ಸೋಮವಾರ, 22 ಡಿಸೆಂಬರ್ 2008 (19:51 IST)
ಚುನಾವಣಾ ಅಕ್ರಮ ತಡೆಯುವಲ್ಲಿ ಚುನಾವಣಾ ಆಯೋಗ ಸಂಪೂರ್ಣ ವಿಫಲವಾಗಿದೆ ಎಂದು ದೂರಿರುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್, ವೀಕ್ಷಕರು ಕಾಟಾಚಾರಕ್ಕೆ ಕರ್ತವ್ಯ ನಿರ್ವಹಿಸುತ್ತಿದ್ದು, ಅವರೂ ಅಕ್ರಮದಲ್ಲಿ ಪಾಲುದಾರರಾಗಿದ್ದಾರೆ ಎಂದುಆರೋಪಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಅಕ್ರಮ, ಅಧಿಕಾರ ದುರ್ಬಳಕೆ ತಡೆಗಟ್ಟುವಲ್ಲಿ ಚುನಾವಣಾ ವೀಕ್ಷಕರು ವಿಫಲರಾಗಿದ್ದಾರೆ. ಕೇಂದ್ರ ಚುನಾವಣಾ ಆಯೋಗ ಮಧ್ಯಪ್ರವೇಶಿಸಿ ಕೂಡಲೆ ಇವರನ್ನು ಬದಲಿಸಬೇಕು ಎಂದು ಒತ್ತಾಯಿಸಿದರು.

ಮತದಾರರಿಗೆ ಹಣ, ಹೆಂಡ ಹಂಚುವ ವಾಸ್ತವಾಂಶ ಗೊತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಆಯೋಗ, ಅಭ್ಯರ್ಥಿಗಳ ಖರ್ಚು-ವೆಚ್ಚಗಳ ಮೇಲೂ ನಿಗಾ ಇಟ್ಟಿಲ್ಲ. ಕಾಂಗ್ರೆಸ್ ಪಕ್ಷ ನೀಡಿದ ದೂರಿನ ಮೇಲೆ ಕೆಲವು ಪ್ರಕರಣಗಳನ್ನು ದಾಖಲಿಸಿರುವುದು ಬಿಟ್ಟರೆ ಬೇರಾವುದೇ ಕ್ರಮ ಕೈಗೊಂಡಿಲ್ಲ ಎಂದು ಶಿವಕುಮಾರ್ ಆರೋಪಿಸಿದರು.

ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಇಲ್ಲಿನ ಬಿಜೆಪಿ ಸರ್ಕಾರಕ್ಕೆ ಅಕ್ರಮ ಮದ್ಯ ಸಾಗಿಸಿದೆ. ಅದು ಪೊಲೀಸ್ ಸರ್ಪಗಾವಲಿನಲ್ಲಿ ಪ್ರತೀ ಬೂತ್‌ಗಳಿಗೆ ವಿತರಣೆಯಾಗುತ್ತಿದೆ. ಈ ರೀತಿ ಅಧಿಕಾರ ದುರುಪಯೋಗವಾಗುತ್ತಿರುವ ಬಗ್ಗೆ ತಿಳಿದಿದ್ದರೂ ಚುನಾವಣಾ ಆಯೋಗ ಕ್ರಮ ತೆಗೆದುಕೊಂಡಿಲ್ಲ, ಚುನಾವಣಾ ಅಧಿಕಾರಿಗಳು ಪಕ್ಷದ ಏಜೆಂಟರಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದರು.


Share this Story:

Follow Webdunia kannada