Select Your Language

Notifications

webdunia
webdunia
webdunia
webdunia

ಸಚಿನ್‌ಗೆ ಭಾರತರತ್ನ, ಕಾಂಗ್ರೆಸ್ ಓಟ್ ಬ್ಯಾಂಕ್ ರಾಜಕಾರಣ: ಬಿದರಿ

ಸಚಿನ್‌ಗೆ ಭಾರತರತ್ನ, ಕಾಂಗ್ರೆಸ್ ಓಟ್ ಬ್ಯಾಂಕ್ ರಾಜಕಾರಣ: ಬಿದರಿ
, ಶನಿವಾರ, 23 ನವೆಂಬರ್ 2013 (13:21 IST)
PR
PR
ಹುಬ್ಬಳ್ಳಿ: ನೇಣು ಹಾಕಿ ಕೊಲ್ಲುವುದು ನಾಲ್ಕು ಗೋಡೆಗಳ ನಡುವೆ ಆಗುತ್ತದೆ. ಯಾರಿಗೂ ಕಾಣುವುದಿಲ್ಲ. ಸಾರ್ವಜನಿಕವಾಗಿ ಗುಂಡಿಕ್ಕಿ ಕೊಂದರೆ ಎಲ್ಲರಿಗೂ ಗೊತ್ತಾಗುತ್ತದೆ. ಈ ಹಿನ್ನೆಲೆಯಲ್ಲಿ ತಾವು ಆ ಹೇಳಿಕೆ ನೀಡಿದ್ದಾಗಿ ಬಿದರಿ ತಮ್ಮ ಹೇಳಿಕೆಯನ್ನು ಹುಬ್ಬಳ್ಳಿಯಲ್ಲಿ ಮಾತನಾಡುತ್ತಾ ಸಮರ್ಥಿಸಿಕೊಂಡರು. ಸಚಿನ್‌ಗೆ ಭಾರತ ರತ್ನ ಪ್ರಶಸ್ತಿ ನೀಡಿರುವ ವಿಚಾರವಾಗಿ ರಾಜಕೀಯ ನಡೆಯುತ್ತಿದೆ. ಕೇಂದ್ರ ಸರ್ಕಾರ ಸಚಿನ್‌ಗೆ ಭಾರತ ರತ್ನ ನೀಡುವ ಮೂಲಕ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ತುಮಕೂರು ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಎಷ್ಟೋ ಬಾರಿ ಮನವಿ ಮಾಡಿದ್ದೇವೆ.ಆದರೆ ಹಾಗೆ ಮಾಡದೇ, ಚುನಾವಣೆ ಹತ್ತಿರ ಬಂದ ಸಂದರ್ಭದಲ್ಲಿ ಸಚಿನ್ ಅವರಿಗೆ ಭಾರತರತ್ನ ನೀಡುವ ಮೂಲಕ ಓಟ್ ಬ್ಯಾಂಕ್ ರಾಜಕೀಯ ಮಾಡುತ್ತಿದೆ ಎಂದು ಬಿದರಿ ಟೀಕಿಸಿದರು.

ದೇಶದಲ್ಲಿ ಭ್ರಷ್ಟಾಚಾರ ತೊಲಗಬೇಕಾದ್ರೆ ಜನರು ಎಚ್ಚೆತ್ತುಕೊಳ್ಳಬೇಕು. ಜನರು ಸಾವಿರ ಕೋಟಿ ಹೊಡೆದ್ರೂ ಕೂಡ ಅವರಿಗೆ ಶಿಕ್ಷೆಯಾಗ್ತಿಲ್ಲ. ಶಿಕ್ಷೆಯಾದ್ರೂ 20 ವರ್ಷ, 30 ವರ್ಷಗಳು ಹಿಡಿಯುತ್ತದೆ. ಆದ್ದರಿಂದ ಕಾನೂನಿಗೆ ತಿದ್ದುಪಡಿ ಮಾಡಬೇಕು ಎಂದು ಬಿದರಿ ಹೇಳಿದರು. ಅರಬ್ ದೇಶಗಳಲ್ಲಿರುವ ಕಾನೂನುಭಯ ನಮ್ಮಲ್ಲೂ ಜಾರಿಗೆ ತರಬೇಕು. ಕಳೆದ 65 ವರ್ಷಗಳಿಂದ ಬಲಾಢ್ಯರಿಗೆ ಶಿಕ್ಷೆಯಾಗಿಲ್ಲ ಎಂದು ಬಿದರಿ ಹೇಳಿದರು.

Share this Story:

Follow Webdunia kannada