Select Your Language

Notifications

webdunia
webdunia
webdunia
webdunia

ಮತದಾರರಿಗೆ ಆಮಿಷ: ಅಭ್ಯರ್ಥಿಗಳ ಬೆಂಬಲಿಗರಿಂದ ಕೋಟಿ ಹಣ ವಶ

ಮತದಾರರಿಗೆ ಆಮಿಷ: ಅಭ್ಯರ್ಥಿಗಳ ಬೆಂಬಲಿಗರಿಂದ ಕೋಟಿ ಹಣ ವಶ
ಬೆಂಗಳೂರು , ಭಾನುವಾರ, 23 ಮಾರ್ಚ್ 2014 (11:30 IST)
PR
ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಭಾರೀ ಪ್ರಮಾಣದಲ್ಲಿ ಮತದಾರರಿಗೆ ಆಮಿಷ ಒಡ್ಡುವ ಮುನ್ಸೂಚನೆ ಲಭಿಸಲಾರಂಭಿಸಿದೆ. ಇನ್ನೂ ಎಲ್ಲರೂ ನಾಮಪತ್ರವನ್ನೇ ಸಲ್ಲಿಸಿಲ್ಲ. ಆಗಲೇ ರಾಜ್ಯದಲ್ಲಿ ಚುನಾವಣೆಗಾಗಿ ಬಳಸಲು ಉದ್ದೇಶಿಸಿದ್ದ 1.44 ಕೋಟಿ ಮೊತ್ತದ ನಗದು, ವಸ್ತು ವಶಪಡಿಸಿಕೊಳ್ಳಲಾಗಿದೆ. ಮತದಾರರ ಓಲೈಕೆಗೆ ರಾಜಕೀಯ ಪಕ್ಷಗಳು ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಹಣದ ಆಮಿಷವೊಡ್ಡುವ ಸಾಧ್ಯತೆ ಬಗ್ಗೆ ಚುನಾವಣಾ ಆಯೋಗ ಕೂಡ ಅನುಮಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ನಿಗಾ ವಹಿಸಲು ಸಿದ್ಧತೆ ನಡೆಸಿದೆ.

ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಮತದಾರರಿಗೆ ಆಮಿಷ ಒಡ್ಡಲು ಪ್ರಯತ್ನಿಸಿದರೆ ಕಠಿಣ ಕ್ರಮ ಜರುಗಿಸಲಾಗುವುದು. ರಾಜ್ಯದಲ್ಲಿ ಎಲ್ಲೆಡೆ ತಪಾಸಣೆ ಬಿಗಿಗೊಳಿಸಲಾಗಿದ್ದು, ಸಾರ್ವಜನಿಕರು ಕೂಡ ಮಾಹಿತಿ ಇದ್ದಲ್ಲಿ ಚುನಾವಣಾ ಆಯೋಗಕ್ಕೆ ನೀಡಬೇಕು.

ಟಿ ಅನಿಲ್‌ಕುಮಾರ್ ಝಾ, ರಾಜ್ಯ ಮುಖ್ಯ ಚುನಾವಣಾಧಿಕಾರಿ

ಶನಿವಾರ ವಶಪಡಿಸಿಕೊಂಡ ನಗದು

ಚಾಮರಾಜನಗರ

ರು. 26 ಲಕ್ಷ

ಬ್ಯಾಡಗಿ

ರು. 6 ಲಕ್ಷ

ಸಾತನೂರು

ರು. 2.5 ಲಕ್ಷ

ಅಗಡಿ ಕ್ರಾಸ್

(ಧಾರವಾಡ)

ರು. 2.16 ಲಕ್ಷ

ಪುತ್ತೂರು ಗ್ರಾಮಾಂತರ

ರು. 1.25 ಲಕ್ಷ


ವಸ್ತುಗಳು

ಕೊಪ್ಪಳ

- 350 ಟೋಪಿಗಳು

ಮುಳಬಾಗಿಲುಟ 4 ಸಂಗೀತ ಉಪಕರಣ

ಹೊನ್ನಾಳಿ ಟ ರು. 10000 ಮದ್ಯ

- ರು. 1.94 ಲಕ್ಷ ಹಣ


ಮುಂದುವರಿದ ಸೀರೆ ರಾಜಕೀಯ

ಚಿಕ್ಕಬಳ್ಳಾಪುರಟ 142 ರೇಷ್ಮೆ ಸೀರೆ

ಕನಕಪುರದ ಹೊನಗೇನಹಳ್ಳಿಟ 148 ಸೀರೆ

ರಾಮನಗರ

- 63 ಸೀರೆ, 17 ಟೀ ಶರ್ಟ್

Share this Story:

Follow Webdunia kannada